ಕರ್ನಾಟಕ

karnataka

ETV Bharat / bharat

ಗಣೇಶ ಚತುರ್ಥಿ: ಇಂದು ಗೂಳಿ, ಕರಡಿಯಾಟ ಇಲ್ಲ! ಷೇರು ವಹಿವಾಟು ಬಂದ್ - ಸ್ಟಾಕ್ ಎಕ್ಸ್‌ಚೇಂಜ್‌ ಕೇಂದ್ರ

ಗಣೇಶ ಚತುರ್ಥಿಯ ರಜೆ ಹಿನ್ನೆಲೆಯಲ್ಲಿ ಮುಂಬೈ ಷೇರು ಮಾರುಕಟ್ಟೆ ವ್ಯವಹಾರಗಳು ಇಂದು ಬಂದ್ ಆಗಿವೆ.

Representative image
ಪ್ರಾತಿನಿಧಿಕ ಚಿತ್ರ

By ETV Bharat Karnataka Team

Published : Sep 19, 2023, 11:05 AM IST

ನವದೆಹಲಿ:ಗಣೇಶ ಚತುರ್ಥಿ ಪ್ರಯುಕ್ತ ಇಂದು ಭಾರತೀಯ ಷೇರು ವಿನಿಮಯ ಕೇಂದ್ರಗಳ ವಹಿವಾಟನ್ನು ಬಂದ್​ ಮಾಡಲಾಗಿದೆ. ನಾಳೆ ಸಾಮಾನ್ಯ ವಹಿವಾಟು ಪುನರಾರಂಭವಾಗಲಿದೆ.

2023ರ ಬಿಎಸ್​ಇ ಟ್ರೇಡಿಂಗ್ ರಜಾದಿನಗಳ ಪ್ರಕಾರ, ಸೆ.19ರಂದು ಭಾರತೀಯ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (NSE) ಮತ್ತು ಮುಂಬೈ ಷೇರುಪೇಟೆ (BSE) ಎರಡೂ ಸ್ಟಾಕ್ ಎಕ್ಸ್ಚೇಂಜ್ ಕೇಂದ್ರಗಳು ಮುಚ್ಚಲ್ಪಡುತ್ತವೆ. ಇಕ್ವಿಟಿ, ಇಕ್ವಿಟಿ ಉತ್ಪನ್ನಗಳು, ಕರೆನ್ಸಿ ಉತ್ಪನ್ನಗಳು, ಬಡ್ಡಿ ದರದ ಉತ್ಪನ್ನಗಳು ಹಾಗೂ ಸೆಕ್ಯುರಿಟೀಸ್ ಲೆಂಡಿಂಗ್ ಮತ್ತು ಎರವಲು (SLB) ವಿಭಾಗಗಳು ಸೇವೆಗೆ ಲಭ್ಯವಿರುವುದಿಲ್ಲ. ಮುಂದಿನ ಷೇರು ಮಾರುಕಟ್ಟೆ ರಜೆ ಅಕ್ಟೋಬರ್ 2 ಮಹಾತ್ಮ ಗಾಂಧಿ ಜಯಂತಿ ದಿನ ಇರಲಿದೆ.

ಇದನ್ನೂ ಓದಿ:Explained: ಸೌದಿ ಅರೇಬಿಯಾ, ರಷ್ಯಾದಿಂದ ಕಚ್ಚಾ ತೈಲ ಉತ್ಪಾದನೆ ಕಡಿತ... ಭಾರತದ ಮೇಲೆ ಆಗುವ ಪರಿಣಾಮಗಳೇನು?

ಮಂಗಳವಾರ-ಬುಧವಾರ ನಿಗದಿಯಾಗಿರುವ ಯುಎಸ್​ ಫೆಡರಲ್ ರಿಸರ್ವ್‌ನ ಸಭೆ ಈ ವಾರದ ನಂತರ ಮುಂದುವರೆಯಲಿದೆ. ಅದರ ಫಲಿತಾಂಶವನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವುದರಿಂದ ಹೂಡಿಕೆದಾರರು ಎಚ್ಚರಿಕೆಯಿಂದ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಯುಎಸ್​ ಸೆಂಟ್ರಲ್ ಬ್ಯಾಂಕ್ ಜುಲೈ ಸಭೆಯಲ್ಲಿ ತನ್ನ ಬೆಂಚ್‌ಮಾರ್ಕ್ ಬಡ್ಡಿ ದರವನ್ನು 25 ಮೂಲಾಂಶಗಳಿಂದ ಹೆಚ್ಚಿಸಿತು.

ಮುಂಬೈ ಷೇರುಪೇಟೆ (BSE) ವೆಬ್‌ಸೈಟ್‌ ಪ್ರಕಾರ, ಈ ವರ್ಷದ ಮಾರುಕಟ್ಟೆ ರಜಾದಿನಗಳ ಪಟ್ಟಿ ಇಲ್ಲಿದೆ:

ಗಣೇಶ ಚತುರ್ಥಿ ಸೆಪ್ಟೆಂಬರ್ 19, 2023 ಮಂಗಳವಾರ
ಗಾಂಧಿ ಜಯಂತಿ ಅಕ್ಟೋಬರ್ 02, 2023 ಸೋಮವಾರ
ದಸರಾ ಅಕ್ಟೋಬರ್ 24, 2023 ಮಂಗಳವಾರ
ದೀಪಾವಳಿ ನವೆಂಬರ್ 14, 2023 ಮಂಗಳವಾರ
ಗುರುನಾನಕ್ ಜಯಂತಿ ನವೆಂಬರ್ 27, 2023 ಸೋಮವಾರ
ಕ್ರಿಸ್​ಮಸ್ ಡಿಸೆಂಬರ್ 25, 2023 ಸೋಮವಾರ

ಸೆಪ್ಟೆಂಬರ್‌ನಲ್ಲಿ ಹೆಚ್ಚುವರಿ ಬ್ಯಾಂಕ್​ ರಜೆಗಳು:ಭಾರತೀಯ ರಿಸರ್ವ್ ಬ್ಯಾಂಕ್‌ನ ರಜಾ ಪಟ್ಟಿಯ ಪ್ರಕಾರ, ಭಾನುವಾರ, ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರವನ್ನು ಒಳಗೊಂಡಂತೆ ಸೆಪ್ಟೆಂಬರ್‌ನಲ್ಲಿ ಭಾರತದ ವಿವಿಧ ರಾಜ್ಯಗಳಲ್ಲಿ 16 ಬ್ಯಾಂಕ್ ರಜಾ ದಿನಗಳಿರುತ್ತವೆ ಎಂದು ಹೇಳಿದೆ.

ಸೆಪ್ಟೆಂಬರ್ 17, 2023 (ಭಾನುವಾರ) ದೇಶಾದ್ಯಂತ ಬ್ಯಾಂಕುಗಳು ಮುಚ್ಚಲ್ಪಟ್ಟಿದ್ದವು. ಸೆಪ್ಟೆಂಬರ್ 18, 2023 (ಸೋಮವಾರ) ವಿನಾಯಕ ಚತುರ್ಥಿಗೆ ಕರ್ನಾಟಕ ಮತ್ತು ತೆಲಂಗಾಣದಲ್ಲಿ ಬ್ಯಾಂಕ್‌ಗಳಿಗೆ ರಜೆ ನೀಡಲಾಗಿತ್ತು. ಸೆಪ್ಟೆಂಬರ್ 19, 2023 (ಮಂಗಳವಾರ) ಗಣೇಶ ಚತುರ್ಥಿ ಪ್ರಯುಕ್ತ ಗುಜರಾತ್, ಮಹಾರಾಷ್ಟ್ರ, ಒಡಿಶಾ, ತಮಿಳುನಾಡು ಮತ್ತು ಗೋವಾದಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಟ್ಟಿವೆ. ಸೆಪ್ಟೆಂಬರ್ 20, 2023 (ಬುಧವಾರ) ಒಡಿಶಾ ಮತ್ತು ಗೋವಾದಲ್ಲಿ ಗಣೇಶ ಚತುರ್ಥಿಯ ಎರಡನೇ ದಿನದಂದು ಬ್ಯಾಂಕ್ ರಜೆ ನೀಡಲಾಗಿದೆ.

ಇದನ್ನೂ ಓದಿ:ದಾಯಾದಿಗಳಿಗೆ ಗಾಯದ ಮೇಲೆ ಬರೆ.. ಹಣದುಬ್ಬರದ ನಡುವೆ 300ರ ಗಡಿ ದಾಟಿದ ಪೆಟ್ರೋಲ್​ ಡಿಸೇಲ್​ ಬೆಲೆ!!

ABOUT THE AUTHOR

...view details