ಕರ್ನಾಟಕ

karnataka

ETV Bharat / bharat

ಐಎಸ್​ಎಸ್​ಎಫ್​ ವಿಶ್ವಕಪ್: ಕಂಚಿನ ಪದಕ ಗೆದ್ದ ಶೂಟರ್​ ಸಿಫ್ಟ್​ ಕೌರ್ - ಈಟಿವಿ ಭಾರತ ಕನ್ನಡ

ಭೋಪಾಲ್‌ನಲ್ಲಿ ನಡೆದ ISSF ವಿಶ್ವಕಪ್‌ನಲ್ಲಿ ಭಾರತದ ಶೂಟರ್ ಸಿಫ್ಟ್ ಕೌರ್ ಕಂಚಿನ ಪದಕ ಗೆದ್ದಿದ್ದಾರೆ. ಕಳೆದ ಮೇನಲ್ಲಿ ನಡೆದ ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವಕಪ್‌ನಲ್ಲಿ ಇವರು ಚಿನ್ನದ ಪದಕ ಸಾಧನೆ ಮಾಡಿದ್ದರು.

indian-shooter-sift-kaur-samra-won-a-bronze-medal-in-issf-world-cup
ಐಎಸ್​ಎಸ್​ಎಫ್​ ವಿಶ್ವಕಪ್​ : ಕಂಚಿನ ಪದಕ ಗೆದ್ದ ಶೂಟರ್​ ಸಿಫ್ಟ್​ ಕೌರ್

By

Published : Mar 27, 2023, 9:39 AM IST

ಭೋಪಾಲ್ (ಮಧ್ಯಪ್ರದೇಶ): ಭಾರತದ ಶೂಟರ್ ಸಿಫ್ಟ್ ಕೌರ್ ಅವರು ಅಂತಾರಾಷ್ಟ್ರೀಯ ಶೂಟಿಂಗ್​​ ಸ್ಪೋರ್ಟ್ಸ್ ಫೆಡರೇಶನ್ ರೈಫಲ್​​ ವಿಶ್ವಕಪ್​(ISSF)ನಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಇಲ್ಲಿನ ಶೂಟಿಂಗ್ ಅಕಾಡೆಮಿ ರೇಂಜ್​ನಲ್ಲಿ ನಡೆದ ಸ್ಪರ್ಧೆಯಲ್ಲಿ ಮಹಿಳೆಯರ 50 ಮೀಟರ್​ ರೈಫಲ್​​(3ಪಿ) ವಿಭಾಗದಲ್ಲಿ ಕಂಚಿನ ಪದಕ ಗೆದ್ದು ಚಾಂಪಿಯನ್​ ಆಗಿ ಹೊರಹೊಮ್ಮಿದ್ದಾರೆ. ವೈದ್ಯಕೀಯ ವಿದ್ಯಾರ್ಥಿನಿಯಾಗಿರುವ ಸ್ವಿಫ್ಟ್​​ ಕೌರ್​ ಎಂಟು ಸುತ್ತಿನ ಆಟದಲ್ಲಿ 403.9 ಅಂಕಗಳನ್ನು ಪಡೆದರು. ಇದು ಇವರ ಚೊಚ್ಚಲ ವಿಶ್ವಕಪ್​ ಪದಕವಾಗಿದೆ.​ ​​

ಚೀನಾದ ಜಾಂಗ್​ ಕ್ವಿಯಾಂಗ್ಯು ಉತ್ತಮ ಪ್ರದರ್ಶನ ನೀಡಿ ಚಿನ್ನದ ಪದಕ ಗಳಿಸಿದರು. ಮಹಿಳೆಯರ (3ಪಿ) ವಿಭಾಗದಲ್ಲಿ ಚೀನಾ ಜಾಂಗ್​ ಕ್ವಿಯಾಂಗ್ಯು ಮತ್ತು ಜೆಕ್​ ಗಣರಾಜ್ಯದ ಅನಿತಾ ಬ್ರಾಬ್ಕೋವಾ ಅವರನ್ನು 16- 8 ಅಂಕಗಳಿಂದ ಸೋಲಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಇದಕ್ಕೂ ಮುನ್ನ ಜಾಂಗ್​​​ 594 ಅಂಕಗಳನ್ನು ಮೂಲಕ ಅಗ್ರಸ್ಥಾನಿಯಾಗಿದ್ದರು. ಅನಿತಾ 586 ಅಂಕಗಳಿಸುವ ಮೂಲಕ ಎರಡನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಚೀನಾವು ರೈಫಲ್​ ವಿಶ್ವಕಪ್​ನಲ್ಲಿ 8 ಚಿನ್ನ, 2 ಬೆಳ್ಳಿ, 2 ಕಂಚಿನ ಪದಕ ಗೆದ್ದು ಅಗ್ರಸ್ಥಾನಿಯಾಗಿ ಉಳಿಯಿತು.

ಶೂಟಿಂಗ್​​ ಸ್ಪರ್ಧೆಯಲ್ಲಿ ಸಿಫ್ಟ್​​ ಅವರು ಕಂಚು ಪಡೆಯುವ ಮೂಲಕ ಭಾರತ ಒಟ್ಟು ಏಳು ಪದಕ ಸಂಪಾದಿಸಿದೆ. ಈ ಬಾರಿ ಪಡೆದ ಏಳು ಪದಕಗಳಲ್ಲಿ ಒಂದು ಚಿನ್ನ, ಒಂದು ಬೆಳ್ಳಿ, 5 ಕಂಚಿನ ಪದಕ ಒಳಗೊಂಡಿವೆ. ಪುರುಷರ 10 ಮೀಟರ್​ ಏರ್​ ಪಿಸ್ತೂಲ್​ನಲ್ಲಿ ಸರಬ್ಜೋತ್​ ಸಿಂಗ್​​ ಚಿನ್ನದ ಪದಕ ಗೆದ್ದಿದ್ದರು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಾನಿನಿ ಕೌಶಿಕ್ 584 ಅಂಕಗಳೊಂದಿಗೆ ಒಂಬತ್ತನೇ ಸ್ಥಾನ ಗಳಿಸಿದರೆ, ಅಂಜುಮ್ ಮೌದ್ಗಿಲ್ 583 ಅಂಕಗಳೊಂದಿಗೆ 13ನೇ ಸ್ಥಾನ ಪಡೆದರು. ಶ್ರೇಯಾಂಕಕ್ಕಾಗಿ ಆಡುತ್ತಿದ್ದ ಶ್ರೀಯಾಂಕಾ ಸದಂಗಿ ಮತ್ತು ಆಶಿ ಚೌಕ್ಸೆ ಕ್ರಮವಾಗಿ 582 ಮತ್ತು 581 ಅಂಕಗಳನ್ನು ಗಳಿಸಿದರು.

40 ಅಂಕಗಳು ಎಂಟು ಸುತ್ತಿನ ಪಂದ್ಯಾಟದಲ್ಲಿ ಚೀನಾದ ಜಾಂಗ್ ಕ್ಸುಮಿಂಗ್ 35 ಅಂಕಗಳೊಂದಿಗೆ ಚಿನ್ನದ ಪದಕ, ಟೋಕಿಯೊ ಒಲಿಂಪಿಕ್ ಫೈನಲಿಸ್ಟ್ ಮತ್ತು ಕೈರೋ ವರ್ಲ್ಡ್ ಬೆಳ್ಳಿ ಪದಕ ವಿಜೇತ ಫ್ರೆಂಚ್ ಆಟಗಾರ ಕ್ಲೆಮೆಂಟ್ ಬಾಸಗುಯೆಟ್ 34 ಅಂಕಗಳಿಂದ ಬೆಳ್ಳಿ ಪದಕ ಗೆದ್ದರು.ಕ್ರಿಶ್ಚಿಯನ್ 21 ಅಂಕಗಳಿಂದ ಮೂರನೇ ಸ್ಥಾನ ಪಡೆದರು.

ಭಾರತದ ವಿಜಯವೀರ್ ಸಿಧು 581 ಅಂಕಗಳೊಂದಿಗೆ ಒಂಬತ್ತನೇ ಸ್ಥಾನ, ಅನೀಶ್ ಭನ್ವಾಲಾ 581 ರನ್ ಗಳಿಸಿ 10ನೇ ಸ್ಥಾನ, ಅಂಕುರ್ ಗೋಯಲ್ 574 ರನ್ ಗಳಿಸಿ 14ನೇ ಸ್ಥಾನ ಗಳಿಸದ್ದರು. ಭವೇಶ್ ಶೇಖಾವತ್ 578 ಅಂಕ ಮತ್ತು ಮಂದೀಪ್ ಸಿಂಗ್ 575 ಅಂಕ ಗಳಿಸಿದ್ದರು.

ಇದನ್ನೂ ಓದಿ :ಪಿಸ್ತೂಲ್ ವಿಶ್ವಕಪ್‌: 50ಮೀಟರ್​ 3ಪಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಸಾಮ್ರಾ

ABOUT THE AUTHOR

...view details