ಕರ್ನಾಟಕ

karnataka

ETV Bharat / bharat

17 ದಿನಗಳ ‘ಶ್ರೀರಾಮಾಯಣ ಯಾತ್ರೆ’ ವಿಶೇಷ ಪ್ರವಾಸ ಆಯೋಜಿಸಿದ Indian Railways - ಅಯೋಧ್ಯೆಯ ರಾಮ ಜನ್ಮಭೂಮಿ ಮತ್ತು ಹನುಮಾನ್ ಮಂದಿರ್ ಬಳಿಕ ನಂದಿಗ್ರಾಮದ ಭಾರತ್ ಮಂದಿರ್

ಶ್ರೀರಾಮನ ಸಂಪೂರ್ಣ ಜೀವನವನ್ನ ಪ್ರವಾದಲ್ಲಿ ಕಣ್ತುಂಬಿಕೊಳ್ಳಬೇಕೆಂದಿದ್ದರೆ ಭಾರತೀಯ ರೈಲ್ವೆ(Indian Railways) ಏರ್ಪಡಿಸಿರುವ ಈ ಯಾತ್ರೆ ಸಹಕಾರಿಯಾಗಲಿದೆ. ಭಾರತದ ಪ್ರಮುಖ ದೇವಾಲಯಗಳನ್ನ ಈ ಪ್ರವಾಸವು ಒಳಗೊಂಡಿದೆ.

indian-railways-to-conduct-17-days-shri-ramayan-yatra
‘ಶ್ರೀರಾಮಾಯಣ ಯಾತ್ರೆ’

By

Published : Sep 5, 2021, 2:24 PM IST

ನವದೆಹಲಿ: ದೇಶದಲ್ಲಿ ಧಾರ್ಮಿಕ ಪ್ರವಾಸೋದ್ಯಮ ಉತ್ತೇಜಿಸುವ ಸಲುವಾಗಿ ‘ದೇಕೋ ಅಪ್ನಾ ದೇಶ್’ ಎನ್ನುವ ಭಾರತೀಯ ರೈಲ್ವೆ ಶ್ರೀರಾಮಾಯಣ ಯಾತ್ರೆ ಡಿಲಕ್ಸ್ ಎಸಿ ಟೂರಿಸ್ಟ್​ ರೈಲಅನ್ನು ಆರಂಭಿಸಿದೆ.

ಇದಕ್ಕೂ ಮೊದಲು ಈ ರೈಲು ಕೇವಲ ಸ್ಲೀಪರ್ ಕ್ಲಾಸ್​​​ ಸೌಲಭ್ಯದೊಂದಿಗೆ ಮಾತ್ರ ಸಂಚರಿಸುತ್ತಿತ್ತು. ಈ ಪ್ರವಾಸವು 7ನೇ ನವೆಂಬರ್ 2021ರಂದು ದೆಹಲಿಯ ಸಫ್ದರ್‌ಜಂಗ್ ರೈಲ್ವೆ ನಿಲ್ದಾಣದಿಂದ ಪ್ರಾರಂಭವಾಗುತ್ತದೆ ಮತ್ತು ಶ್ರೀರಾಮನ ಜೀವನಕ್ಕೆ ಸಂಬಂಧಿಸಿದ ಎಲ್ಲಾ ಪ್ರಮುಖ ಸ್ಥಳಗಳ ಭೇಟಿಯನ್ನು ಈ ಪ್ರವಾಸ ಒಳಗೊಂಡಿರಲಿದೆ ಎಂದು ಇಲಾಖೆ ತಿಳಿಸಿದೆ.

ಇಡೀ ಪ್ರವಾಸವು ಪೂರ್ಣಗೊಳ್ಳಲು 17 ದಿನಗಳನ್ನು ತೆಗೆದುಕೊಳ್ಳುತ್ತದೆ, ಸರಿಸುಮಾರು 7,500 ಕಿ.ಮೀ. ನಷ್ಟು ದೂರ ಈ ಪ್ರವಾಸ ಸಾಗಲಿದೆ. ಈ ರೈಲು ಆರಂಭದಲ್ಲಿ ಅಯೋಧ್ಯೆಯ ರಾಮ ಜನ್ಮಭೂಮಿ ಮತ್ತು ಹನುಮಾನ್ ಮಂದಿರ್ ಬಳಿಕ ನಂದಿಗ್ರಾಮದ ಭಾರತ್ ಮಂದಿರ್ ವೀಕ್ಷಿಸಬಹುದಾಗಿದೆ.

ಅಯೋಧ್ಯೆಯ ಬಳಿಕ ಬಿಹಾರದ ಸೀತಾಮರ್ಹಿ ಮತ್ತು ಸೀತಾ ಜಿ ಅವರ ಜನ್ಮಸ್ಥಳ ಮತ್ತು ಜನಕಪುರದ (ನೇಪಾಳ) ರಾಮ-ಜಂಕಿ ದೇವಾಲಯದ ಭೇಟಿಯಾಗಿದೆ. ಇದಾದ ಬಳಿಕ ರೈಲು ವಾರಣಾಸಿಗೆ ಚಲಿಸಲಿದೆ. ಇಲ್ಲಿಂದ ಪ್ರಯಾಗ್​​​ರಾಜ್, ಶೃಂಗವರ್​​ಪುರ ಮತ್ತು ಚಿತ್ರಕೂಟ ತಲುಪಲಿದೆ. ಇದಾದ ಬಳಿಕ ನಾಸಿಕ್ ತೆರಳಿ ಹಂಪಿಯಲ್ಲಿ ಕೊನೆಯಾಗಲಿದೆ.

ಈ ವಿಶೇಷ ರೈಲಿನಲ್ಲಿ ಇಡೀ ಪ್ರವಾಸದ ಬೆಲೆ ರೂ. 82,950 ರೂ. ಪ್ರತಿ ವ್ಯಕ್ತಿಗೆ 2AC ಮತ್ತು ರೂ. 1,02,095 1AC ಗೆ ಎಂದು ನಿಗದಿ ಮಾಡಲಾಗಿದೆ.

ಓದಿ:44 ಶಿಕ್ಷಕರಿಗೆ ರಾಷ್ಟ್ರಪ್ರಶಸ್ತಿ ನೀಡಿ ಗೌರವಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್

ABOUT THE AUTHOR

...view details