ಕರ್ನಾಟಕ

karnataka

ETV Bharat / bharat

ಭಾರತೀಯ ರೈಲ್ವೆಯಲ್ಲಿ 'ಬೇಬಿ ಬರ್ತ್​​'... ಕೆಲ ಆಯ್ದ ರೈಲುಗಳಲ್ಲಿ ಈ ಸೇವೆ!

ರೈಲುಗಳಲ್ಲಿ ನವಜಾತ ಶಿಶುಗಳೊಂದಿಗೆ ಪ್ರಯಾಣ ಮಾಡುವ ತಾಯಂದಿರ ಸಲುವಾಗಿ ಭಾರತೀಯ ರೈಲ್ವೆ ಬೇಬಿ ಬರ್ತ್ ಪರಿಚಯ ಮಾಡಿದೆ.

Indian Railways introduces baby berths
Indian Railways introduces baby berths

By

Published : May 10, 2022, 6:42 PM IST

ನವದೆಹಲಿ:ಪ್ರಯಾಣಿಕರ ಅನುಕೂಲಕ್ಕಾಗಿ ಭಾರತೀಯ ರೈಲ್ವೆ ಒಂದಿಲ್ಲೊಂದು ಹೊಸ ಸೌಲಭ್ಯ ಪರಿಚಯ ಮಾಡ್ತಾನೆ ಇದೆ. ಇದೀಗ ಕೆಲವೊಂದು ಆಯ್ದ ರೈಲುಗಳಲ್ಲಿ ಬೇಬಿ ಬರ್ತ್​​​ ವಿಶಿಷ್ಟ ಸೌಲಭ್ಯ ಪರಿಚಯ ಮಾಡಿದ್ದು, ಇದರಿಂದ ತಾಯಂದಿರು ತಮ್ಮ ಮಗುವಿನೊಂದಿಗೆ ಆರಾಮದಾಯಕ ಪ್ರಯಾಣ ಮಾಡಬಹುದಾಗಿದೆ.

ಭಾರತೀಯ ರೈಲ್ವೇ ಇಲಾಖೆಯ ಈ ನಿರ್ಧಾರಕ್ಕೆ ಇನ್ನಿಲ್ಲದ ಶ್ಲಾಘನೆ ವ್ಯಕ್ತವಾಗ್ತಿದ್ದು, ಈ ಸೌಲಭ್ಯ ಈಗಾಗಲೇ ಪ್ರಾಯೋಗಿಕವಾಗಿ ಆರಂಭವಾಗಿದೆ. ಉತ್ತರ ರೈಲ್ವೆಯ ಲಖನೌ ರೈಲ್ವೆ ಮಹಿಳೆಯರಿಗೋಸ್ಕರ ಈ ಉಡುಗೊರೆ ನೀಡಿದ್ದು, ಲಖನೌದಿಂದ ನವದೆಹಲಿಗೆ ಪ್ರಯಾಣಿಸುವ ಲಖನೌ ಮೇಲ್​​​​ ರೈಲಿನಲ್ಲಿ ಈ ಸೇವೆ ಪ್ರಾರಂಭಗೊಂಡಿದೆ. ರೈಲಿನ AC-3 ಕೋಚ್​​ನ ಎರಡು ಆಸನಗಳು ಬೇಬಿ ಬರ್ತ್​​​ ಸೀಟು ಹೊಂದಿರುತ್ತವೆ.

ಇದನ್ನೂ ಓದಿ:ವರದಕ್ಷಿಣೆಗೋಸ್ಕರ ರಾಕ್ಷಸನಾದ ಪತಿ.. ಅತ್ತೆಯ ಮನೆಯಲ್ಲೇ ಹೆಂಡ್ತಿಯನ್ನ ಬೆಂಕಿ ಹಚ್ಚಿ ಸುಟ್ಟ!

ಮಗುವಿಗೋಸ್ಕರ ತಯಾರು ಮಾಡಿರುವ ಆಸನ ಸುಲಭವಾಗಿ ಮಡಚಬಹುದಾಗಿದ್ದು, ತುಂಬಾ ಸುರಕ್ಷಿತವಾಗಿದೆ ಎಂದು ಉತ್ತರ ರೈಲ್ವೆ ಹೇಳಿಕೊಂಡಿದ್ದು, ಕೆಲವೊಂದು ಫೋಟೋ ಶೇರ್​ ಮಾಡಿದೆ. ಇದಕ್ಕೋಸ್ಕರ ಯಾವುದೇ ಹೆಚ್ಚಿನ ಶುಲ್ಕ ನೀಡಬೇಕಾಗಿಲ್ಲ ಎಂದು ತಿಳಿಸಿದೆ.

ABOUT THE AUTHOR

...view details