ನವದೆಹಲಿ:ದೇಶದಲ್ಲಿ ಹಬ್ಬಗಳು ಒಂದಾದ ನಂತರ ಒಂದರಂತೆ ಬರುತ್ತಿವೆ. ಈ ಹಿನ್ನೆಲೆಯಲ್ಲಿ ನಾಗರಿಕರು ಒಂದೆಡೆಯಿಂದ ಮತ್ತೊಂದೆಡೆಗೆ ತೆರಳಲು ಅನುವಾಗುವಂತೆ ಭಾರತೀಯ ರೈಲ್ವೆಯು ವಿಶೇಷ ರೈಲುಗಳ ವ್ಯವಸ್ಥೆ ಮಾಡಿದೆ.
ದುರ್ಗಾ ಪೂಜೆಯ ವೇಳೆಯಿಂದಲೇ ವಿಶೇಷ ರೈಲು ಸೇವೆಗಳು ಆರಂಭವಾಗಿದ್ದು, ಮತ್ತಷ್ಟು ಹಬ್ಬಗಳ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಒತ್ತಡವನ್ನು ನಿವಾರಿಸುವ ಸಲುವಾಗಿ ಸುಮಾರು 110 ವಿಶೇಷ ರೈಲುಗಳ ಮೂಲಕ 668 ಟ್ರಿಪ್ಗಳನ್ನು ನಡೆಸುತ್ತಿದ್ದು, ಕೋವಿಡ್ ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳಲಾಗಿದೆ.
ದೇಶದ ಪ್ರಮುಖ ಮಾರ್ಗಗಳಲ್ಲಿ ರೈಲ್ವೆ ಸೇವೆಗಳು ಆರಂಭಗೊಳ್ಳಲಿದ್ದು, ಪ್ರಯಾಣಿಕರ ನಿಯಂತ್ರಣಕ್ಕಾಗಿ ಹೆಚ್ಚುವರಿ ಆರ್ಪಿಎಫ್ ಸಿಬ್ಬಂದಿಯನ್ನು ಹೆಚ್ಚು ನೇಮಿಸಲಾಗಿದೆ. ಪ್ರಯಾಣಿಕರ ರಕ್ಷಣೆಗಾಗಿ ಆರ್ಪಿಎಫ್ ಸಿಬ್ಬಂದಿ ಇದ್ದರೆ, ರೈಲುಗಳ ಸುಗಮ ಓಡಾಟಕ್ಕಾಗಿ ತುರ್ತು ಕರ್ತವ್ಯಾಧಿಕಾರಿಯ ನೇಮಕ ಮಾಡಲಾಗುತ್ತದೆ. ರೈಲು ಸೇವೆಗಳಲ್ಲಿ ಯಾವುದೇ ವ್ಯತ್ಯಯವಾಗದಂತೆ ನೋಡಿಕೊಳ್ಳಲಾಗುತ್ತದೆ.