ನವದೆಹಲಿ: ಕರೆ ಮಾಡಿದವರ ಮಾಹಿತಿ ನೀಡುವ ಆ್ಯಪ್ ಟ್ರೂಕಾಲರ್ ಇದೀಗ ಭಾರತೀಯ ರೈಲ್ವೆಯೊಂದಿಗೆ ಕೈಜೋಡಿಸಿ ಪ್ರಯಾಣಿಕರಿಗೆ ಇನ್ನಷ್ಟು ಹತ್ತಿರವಾಗಲಿದೆ. ರೈಲ್ವೆ ಇಲಾಖೆಯ 139 ಸಹಾಯವಾಣಿಗೆ ಟಿಕ್ ಮಾರ್ಕ್ ನೀಡಿದ್ದು, ಕರೆ ಮಾಡಿದಾಗ ಅಥವಾ ಸ್ವೀಕರಿಸುವಾಗ ಹಸಿರು ಬಣ್ಣದಲ್ಲಿ ಗೋಚರಿಸಲಿದೆ.
ರೈಲ್ವೆ ಸಹಾಯವಾಣಿಯಿಂದ ಬರುವ ಕರೆಗಳು ಹಾಗೂ ಸಂದೇಶಗಳು ಪರಿಶೀಲಿಸಲ್ಪಟ್ಟ ನಂಬರ್ ಎಂದು ಗ್ರಾಹಕರಿಗೆ ತೋರಿಸಲಿದೆ. ಇದರಿಂದ ವಂಚನೆ ಸೇರಿ ಗ್ರಾಹಕರ ಗೊಂದಲಕ್ಕೆ ತೆರೆಬೀಳಲಿದೆ.
139ರಿಂದ ಬರುವ ಕರೆಗಳಿಗೆ ಟಿಕ್ ಮಾರ್ಕ್ನ ಜೊತೆ ಭಾರತೀಯ ರೈಲ್ವೆ ಲೋಗೋ ಸಹ ಕಾಣಸಿಗಲಿದೆ. ಇದರಿಂದ ಗ್ರಾಹಕರು ಬಹುಬೇಗವಾಗಿ ಈ ನಂಬರ್ ಖಾತ್ರಿಪಡಿಸಿಕೊಳ್ಳಬಹುದಿದೆ. ಈ ಹೊಸ ಉಪಕ್ರಮದಲ್ಲಿ ಟ್ರೂಕಾಲರ್ ಜೊತೆಗೆ ಕೆಲಸ ಮಾಡಲು ನಾವು ಸಂತೋಷಪಡುತ್ತೇವೆ. ಟ್ರೂಕಾಲರ್‌ನೊಂದಿಗೆ ತಾಂತ್ರಿಕ ಸಹಯೋಗದೊಂದಿಗೆ ಗ್ರಾಹಕರಿಗೆ ಐಆರ್ಸಿಟಿಸಿ ದೃಢ, ವಿಶ್ವಾಸಾರ್ಹ ಮತ್ತು ಸುರಕ್ಷಿತ ಸಂವಹನಕ್ಕೆ ಒಂದು ಹೆಜ್ಜೆ ಮುಂದೆ ಹೋಗಿದ್ದೇವೆ ಎಂದು ಐಆರ್ಸಿಟಿಸಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಜನಿ ಹಸಿಜಾ ಹೇಳಿದ್ದಾರೆ.
ಇದನ್ನೂ ಓದಿ:ರೇಷನ್ ಅಂಗಡಿಗಳಲ್ಲೇ ಅಡುಗೆ ಸಿಲಿಂಡರ್ ವಿತರಣೆಗೆ ಕೇಂದ್ರ ಸರ್ಕಾರದ ಚಿಂತನೆ..!