ನವದೆಹಲಿ:ಈವರೆಗೆ ರೈಲ್ವೆ ಪೊಲೀಸರು ರೈಲು ನಿಲ್ದಾಣಗಳಲ್ಲಿ ಯಾರಾದರೂ ಅಪಾಯಕ್ಕೆ ಸಿಲುಕಿದ್ದರೆ ಅವರನ್ನು ರಕ್ಷಿಸಿ ಸಾರ್ವಜನಿಕರು ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆ ಪಡೆದಿದ್ದಾರೆ. ಜೊತೆಗೆ ಪ್ರಯಾಣಿಕರಿಗೆ ತೊಂದರೆಯಾದಲ್ಲಿ ತಕ್ಷಣಕ್ಕೆ ಸ್ಪಂದಿಸುವ ಮೂಲಕ ನೆರವಾಗಿರುವ ಬಗ್ಗೆ ಸುದ್ದಿಗಳನ್ನು ನೋಡಿದ್ದೀರಿ. ಇತ್ತೀಚೆಗಷ್ಟೇ ಕಲಬುರಗಿ ರೈಲು ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲನ್ನು ಹತ್ತಲು ಹೋಗಿ ಪ್ರಾಣಾಪಾಯಕ್ಕೆ ಸಿಲುಕಿದ್ದ ಮಹಿಳೆಯ ಜೀವವನ್ನು ಆರ್ಪಿಎಫ್ ಸಿಬ್ಬಂದಿ ಉಳಿಸಿದ್ದರು. ಆದ್ರೆ ಈಗ ಅವರು ಬೇಸರದಲ್ಲಿದ್ದ ಮಗುವಿನ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿ ಸುದ್ದಿಯಾಗಿದ್ದಾರೆ.
ಮಗುವಿನನಲ್ಲಿ ನಗು ಅರಳಿಸಿದ ಆರ್ಪಿಎಫ್ ಸಿಬ್ಬಂದಿ.. ಹೌದು, ಮಕ್ಕಳಿಗೆ ಆಟಿಕೆ ವಸ್ತುಗಳ ಮೇಲೆ ಅತಿಯಾದ ಪ್ರೀತಿ ಇರುತ್ತೆ. ಅದು ಅವರಿಂದ ದೂರವಾದರೆ ಸಂಕಟ ಪಡುತ್ತಾರೆ. ಈ ನೋವು ಆಗಬಾರದು ಎಂದು ಸಹ ಪ್ರಯಾಣಿಕ ಮತ್ತು ರೈಲ್ವೆ ಇಲಾಖೆ ಕಳೆದುಹೋಗಿದ್ದ ಆಟಿಕೆಯನ್ನು ಮತ್ತೆ ಮಗುವಿನ ಕೈ ಸೇರುವಂತೆ ಮಾಡಿದ್ದಾರೆ. ಆಟಿಕೆಯನ್ನು ಕಂಡ ಮಗು ಖುಷಿಯಲ್ಲಿ ತೇಲಾಡಿದೆ. ಇದು ಎಲ್ಲರಲ್ಲೂ ಸಾರ್ಥಕ ಭಾವ ಮೂಡಿಸಿದೆ.
ಸಿಕಂದರಾಬಾದ್- ಅಗರ್ತಲಾ ವಿಶೇಷ ರೈಲಿನಲ್ಲಿ ಈ ಅಪರೂಪದ ಘಟನೆ ನಡೆದಿದೆ. ರೈಲು ಸಂಖ್ಯೆ 07030 ದಲ್ಲಿ ದಂಪತಿ ಮತ್ತು ಮಗು ಪ್ರಯಾಣಿಸುತ್ತಿದ್ದರು. ಉತ್ತರಪ್ರದೇಶದ ಜಲಪೈಗುರಿಯಲ್ಲಿ ಅವರು ಇಳಿದಿದ್ದಾರೆ. ಈ ವೇಳೆ ಮಗುವಿನ ಆಟಿಕೆಯನ್ನು ಅವರು ಅಲ್ಲೇ ಬಿಟ್ಟು ಹೋಗಿದ್ದರು. ಇದನ್ನು ಸಹಪ್ರಯಾಣಿಕರೊಬ್ಬರು ಗಮನಿಸಿದ್ದಾರೆ. ಪ್ರಯಾಣದ ವೇಳೆ ಮಗು ಆಟಿಕೆಯ ಜೊತೆಗೆ ಅನ್ಯೋನ್ಯವಾಗಿ ಆಡುತ್ತಿದ್ದುದನ್ನು ಅವರು ಕಂಡಿದ್ದರು.
ಸಹಾಯವಾಣಿ ಸಂಪರ್ಕ.. ತಕ್ಷಣವೇ ಅವರು ಆಟಿಕೆಯನ್ನು ಹೇಗಾದರೂ ಮಾಡಿ ಮಗುವಿಗೆ ತಲುಪಿಸಬೇಕು ಎಂದು ಯೋಚಿಸಿ ರೈಲ್ವೆ ಇಲಾಖೆಯ ಸಹಾಯವಾಣಿ 139 ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಆಗ ಅಧಿಕಾರಿಗಳು ಪ್ರಯಾಣಿಕರ ಸಂಪರ್ಕ ಮಾಹಿತಿ ನೀಡುವಂತೆ ಕೇಳಿದಾಗ, ಅವರು ಅಪರಿಚಿತರು ಎಂಬುದನ್ನು ಪ್ರಯಾಣಿಕ ತಿಳಿಸಿದ್ದಾರೆ.