ನವದೆಹಲಿ:ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಪ್ರತಿಭಾವಂತರನ್ನು ಆಕರ್ಷಿಸಲು ಮತ್ತು ಉಳಿಸಿಕೊಳ್ಳಲು ಹೆಚ್ಚಿನ ಭಾರತೀಯ ಸಂಸ್ಥೆಗಳು ಪ್ರಗತಿಪರ ಪ್ರೋತ್ಸಾಹ ಆಧಾರಿತ ಕ್ರಮಗಳನ್ನು ಕೈಗೊಂಡಿವೆ ಎಂದು ಅಧ್ಯಯನವೊಂದು ಹೇಳಿದೆ.
ಇತ್ತೀಚಿನ ಮರ್ಸರ್ ಇಂಡಿಯಾ 'ಸ್ಪರ್ಧಾತ್ಮಕ ಅನುಕೂಲಕ್ಕಾಗಿ ಪ್ರೋತ್ಸಾಹ ಹೆಚ್ಚಿಸುವುದು' ಎನ್ನುವ ಅಧ್ಯಯನದ ವರದಿಯನ್ನು ಬಿಡುಗಡೆ ಮಾಡಿದೆ. ಈ ಹಣಕಾಸು ವರ್ಷದ ಆರಂಭದಲ್ಲಿ ನಡೆಸಿದ ಅಧ್ಯಯನವು, 3,00,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಪ್ರತಿನಿಧಿಸುವ 41 ಸಂಸ್ಥೆಗಳನ್ನು ಒಳಗೊಂಡಿದೆ. ಜೊತೆಗೆ ಗ್ರಾಹಕರು, ರಾಸಾಯನಿಕ-ಜೀವ ವಿಜ್ಞಾನಗಳು, ಐಟಿ ಸೇವೆಗಳು ಮತ್ತು ಇಂಟರ್ನೆಟ್ ಆಧಾರಿತ ಅಥವಾ ಇ-ಕಾಮರ್ಸ್ ಉದ್ಯಮಗಳನ್ನು ವ್ಯಾಪಿಸಿರುವ ಕಾರ್ಪೊರೇಟ್‌ಗಳನ್ನು ಸಹ ಒಳಗೊಂಡಿದೆ.