ಕರ್ನಾಟಕ

karnataka

ETV Bharat / bharat

ದೇಶೀಯ ನಿರ್ಮಾಣದ ಜಲಾಂತರ್ಗಾಮಿಗಳಿಗೆ ಸ್ವದೇಶಿ ಸ್ವತಂತ್ರ ಪ್ರೊಪಲ್ಶನ್ ವ್ಯವಸ್ಥೆ ಇಲ್ಲ!

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಎಐಪಿಯನ್ನು ಈ ಯೋಜನೆಯಲ್ಲಿ ಸೇರಿಸಲು ಒತ್ತಾಯಿಸುತ್ತಿದೆ. ಆದರೆ, ಅದನ್ನು ಇನ್ನೂ ಟೆಂಡರ್‌ನಲ್ಲಿ ಸೇರಿಸಲಾಗಿಲ್ಲ. ಈ ವರ್ಷದ ಮಾರ್ಚ್‌ನಲ್ಲಿ ಡಿಆರ್‌ಡಿಒ ತನ್ನ ಭೂ-ಆಧಾರಿತ ಮೂಲಮಾದರಿಯನ್ನು ಸಾಬೀತುಪಡಿಸುವ ಮೂಲಕ ಸ್ಥಳೀಯ ಎಐಪಿ ವ್ಯವಸ್ಥೆಯ ಅಭಿವೃದ್ಧಿಯಲ್ಲಿ ಒಂದು ಪ್ರಮುಖ ಮೈಲಿಗಲ್ಲನ್ನು ಸಾಧಿಸಲಿದೆ.

http://10.10.50.80:6060//finalout3/odisha-nle/thumbnail/12-July-2021/12433525_221_12433525_1626085950715.png
ದೇಶೀಯವಾಗಿ ನಿರ್ಮಾಣವಾಗಲಿರುವ ಜಲಾಂತರ್ಗಾಮಿಗಳಿಗೆ ಸ್ವತಂತ್ರ ಪ್ರೊಪಲ್ಷನ್ ವ್ಯವಸ್ಥೆ ಇಲ್ಲ

By

Published : Jul 12, 2021, 8:39 PM IST

ನವದೆಹಲಿ: ಆರು ಸ್ಥಳೀಯ ಸಾಂಪ್ರದಾಯಿಕ ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸಲು ಭಾರತೀಯ ನೌಕಾಪಡೆ ಶೀಘ್ರದಲ್ಲೇ 50,000 ಕೋಟಿ ರೂ.ಗಳ ಯೋಜನೆಗೆ ಟೆಂಡರ್ ನೀಡಲಿದೆ. ಆದರೆ ಸ್ಥಳೀಯವಾಗಿ ಡಿಆರ್‌ಡಿಒ ಅಭಿವೃದ್ಧಿಪಡಿಸುತ್ತಿರುವ ಇದರಲ್ಲಿ ಸ್ವತಂತ್ರ ಪ್ರೊಪಲ್ಷನ್ ವ್ಯವಸ್ಥೆ ಇಲ್ಲ.

ವಾಯು-ಸ್ವತಂತ್ರ ಪ್ರೊಪಲ್ಷನ್ (ಎಐಪಿ) ತಂತ್ರಜ್ಞಾನವು ಸಾಂಪ್ರದಾಯಿಕ ಜಲಾಂತರ್ಗಾಮಿ ನೌಕೆಗಳ ನೀರೊಳಗಿನ ಸಹಿಷ್ಣುತೆ ಮತ್ತು ರಹಸ್ಯವನ್ನು ಹೆಚ್ಚಿಸುತ್ತದೆ. ಇಲ್ಲದಿದ್ದರೆ ಬ್ಯಾಟರಿಗಳನ್ನು ಪುನರ್ಭರ್ತಿ ಮಾಡಲು ಮೇಲ್ಮೈಗೆ ಬರಬೇಕಾದ ಅನಿವಾರ್ಯತೆ ನಿರ್ಮಾಣ ಆಗುತ್ತದೆ.

ರಾಜನಾಥ್ ಸಿಂಗ್ ನೇತೃತ್ವದ ರಕ್ಷಣಾ ಸ್ವಾಧೀನ ಮಂಡಳಿ ಇತ್ತೀಚೆಗೆ ದೇಶೀಯ ಆರು ಹೊಸ ಸಾಂಪ್ರದಾಯಿಕ ಡೀಸೆಲ್-ಎಲೆಕ್ಟ್ರಿಕ್ ಜಲಾಂತರ್ಗಾಮಿ ನೌಕೆಗಳ ನಿರ್ಮಾಣದೊಂದಿಗೆ ಮುಂದುವರಿಯಲು ನೌಕಾಪಡೆಗಾಗಿ ಪಿ -75 ಇಂಡಿಯಾ ಹೆಸರಲ್ಲಿ ಸುಮಾರು 50,000 ಕೋಟಿ ರೂ. ಗೆ ವಿನಿಯೋಗಿಸಲು ತೀರ್ಮಾನ ಮಾಡಿದ್ದರು.

ABOUT THE AUTHOR

...view details