ಕೊಚ್ಚಿ: ಅರೇಬಿಯನ್ ಸಮುದ್ರದಲ್ಲಿ ಭಾರತೀಯ ನೌಕಾ ಹಡಗು ಸುವರ್ಣ ಗಸ್ತು ತಿರುಗುತ್ತಿದ್ದಾಗ ಅನುಮಾನಾಸ್ಪದವಾಗಿ ಕಂಡು ಬಂದ ಮೀನುಗಾರಿಕಾ ಹಡಗನ್ನು ವಶಕ್ಕೆ ಪಡೆದು ಪರಿಶೀಲಿಸಲಾಗಿದೆ 300 ಕೆಜಿಗಿಂತಲೂ ಹೆಚ್ಚು ಮಾದಕವಸ್ತು ಸಾಗಣೆ ಮಾಡುತ್ತಿದ್ದದ್ದು ಬೆಳಕಿಗೆ ಬಂದಿದೆ.
ಅಬ್ಬಾ! ಕೊಚ್ಚಿಯಲ್ಲಿ 3000 ಕೋಟಿ ರೂ ಮೌಲ್ಯದ ಮಾದಕ ವಸ್ತುಗಳು ವಶ
ಅನುಮಾನಾಸ್ಪದವಾಗಿ ಕಂಡು ಬಂದ ಮೀನುಗಾರಿಕಾ ಹಡಗನ್ನು ವಶಕ್ಕೆ ಪಡೆದು ಪರಿಶೀಲಿಸಲಾಗಿದೆ 300 ಕೆಜಿಗಿಂತಲೂ ಹೆಚ್ಚು ಮಾದಕವಸ್ತು ಸಾಗಣೆ ಮಾಡುತ್ತಿದ್ದದ್ದು ತಿಳಿದು ಬಂದಿದೆ.
ಮಾದಕ ವಸ್ತುಗಳು ವಶ
ಹೆಚ್ಚಿನ ತನಿಖೆ ಉದ್ದೇಶದಿಂದ ತನ್ನ ಸಿಬ್ಬಂದಿಯೊಂದಿಗೆ ಆ ದೋಣಿಯನ್ನು ಕೇರಳ ಹತ್ತಿರದ ಭಾರತೀಯ ಬಂದರು ಕೊಚ್ಚಿಗೆ ಕರೆದೊಯ್ಯಲಾಗಿದೆ.
ಇನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಮಾದಕ ವಸ್ತುವಿನ ಬೆಲೆ ಅಂದಾಜು 3000 ಕೋಟಿ ಎಂದು ತಿಳಿದು ಬಂದಿದೆ. ಇದರ ಪ್ರಮಾಣ ಮತ್ತು ವೆಚ್ಚದ ದೃಷ್ಟಿಯಿಂದ ಹೆಚ್ಚಿಗೆ ಇರುವುದು ಮಾತ್ರವಲ್ಲದೇ ಮಕ್ರಾನ್ ಕರಾವಳಿಯಿಂದ ಮಾಲ್ಡೀವಿಯನ್ ಮತ್ತು ಶ್ರೀಲಂಕಾದ ತಾಣಗಳ ಕಡೆಗೆ ಹರಿಯುವ ಅಕ್ರಮ ಮಾದಕವಸ್ತು ಕಳ್ಳಸಾಗಣೆ ಮಾರ್ಗಗಳನ್ನು ನಿರ್ಬಂಧಿಸಲು ಈ ದಾಳಿ ಪ್ರಮುಖ ಪಾತ್ರ ವಹಿಸಲಿದೆ.