ನವದೆಹಲಿ:ಅರಬ್ಬಿ ಸಮುದ್ರದಲ್ಲಿ ಲೈಬೀರಿಯನ್ ಧ್ವಜ ಹೊಂದಿದ್ದ ಹಡಗನ್ನು ಅಪಹರಿಸುವ ಯತ್ನವನ್ನು ಭಾರತೀಯ ನೌಕಾಪಡೆ ವಿಫಲಗೊಳಿಸಿದೆ. ಲೈಬೀರಿಯನ್ ಧ್ವಜವಿದ್ದ ಹಡಗು UKMTO ಪೋರ್ಟಲ್ಗೆ ಈ ಬಗ್ಗೆ ಸಂದೇಶ ಕಳಿಸಿದ್ದು, ಜನವರಿ 04ರ ಸಂಜೆ ಸುಮಾರು 6 ಮಂದಿ ಅಪರಿಚಿತ ಶಸ್ತ್ರಸಜ್ಜಿತ ಸಿಬ್ಬಂದಿ ಹಡಗಿನಲ್ಲಿದ್ದರು ಎಂದು ಸಂದೇಶದಲ್ಲಿ ತಿಳಿಸಲಾಗಿತ್ತು. ಈ ಮಾಹಿತಿ ಆಧರಿಸಿ ನೌಕಾಪಡೆಯು ಕಾರ್ಯಾಚರಣೆ ಕೈಗೊಂಡಿತ್ತು.
ನೌಕಾಪಡೆ ವಿಮಾನಗಳ ಚಟುವಟಿಕೆ ಬಗ್ಗೆ ಕಣ್ಣಿಟ್ಟಿವೆ. ಪರಿಸ್ಥಿತಿ ಮೇಲ್ವಿಚಾರಣೆಗೆ ಮತ್ತು ಸಿಬ್ಬಂದಿಯ ಸುರಕ್ಷತೆ ನಿಟ್ಟಿನಲ್ಲಿ ಯುದ್ಧನೌಕೆ ಐಎನ್ಎಸ್ ಚೆನ್ನೈ ಅನ್ನು ನಿಯೋಜಿಸಲಾಗಿದೆ ಎಂದು ಭಾರತೀಯ ನೌಕಾಪಡೆ ತಿಳಿಸಿದೆ. ಲೈಬೀರಿಯನ್ ಧ್ವಜದ ಹಡಗನ್ನು ಸೊಮಾಲಿಯಾದಿಂದ ಅಪಹರಿಸುವ ಯತ್ನ ನಡೆದಿದೆ. ಹಡಗಿನ ಹೆಸರು 'ಎಂವಿ ಲೀಲಾ ನಾರ್ಫೋಕ್' ಎಂದು ಹೇಳಲಾಗಿದ್ದು, ಅದರಲ್ಲಿ 15 ಭಾರತೀಯ ಸಿಬ್ಬಂದಿಯೂ ಇದ್ದರು. ಸದ್ಯ, ಭಾರತೀಯ ನೌಕಾಪಡೆಯು ಹಡಗಿನ ಮೇಲೆ ತೀವ್ರ ನಿಗಾ ಇರಿಸಿದ್ದು, ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿದೆ.
ನೌಕಾಪಡೆಯು ಸಿಬ್ಬಂದಿಯೊಂದಿಗೆ ಸಂವಹನ ಸಾಧಿಸಿದ್ದು, ಅವರು ಸುರಕ್ಷಿತವಾಗಿದ್ದಾರೆ. ಪರಿಸ್ಥಿತಿ ನಿಭಾಯಿಸಲು ಭಾರತೀಯ ನೌಕಾಪಡೆಯ ಯುದ್ಧನೌಕೆ ಐಎನ್ಎಸ್ ಚೆನ್ನೈ ಅನ್ನು ಅಪಹರಣಕ್ಕೊಳಗಾದ ಹಡಗಿನ ಕಡೆಗೆ ರವಾನಿಸಲಾಗಿದೆ. ಹಡಗಿನ ಮೇಲೆ ವಿಮಾನಗಳಿಂದಲೂ ನಿಗಾ ಇಡಲಾಗಿದೆ. ನೌಕಾಪಡೆಗೆ ಜನವರಿ 4 ರ ಸಂಜೆ ಹಡಗಿನಿಂದ ಸಂದೇಶ ಲಭಿಸಿತ್ತು. ಕೆಲ ಅಪರಿಚಿತ ಶಸ್ತ್ರಸಜ್ಜಿತ ಸಿಬ್ಬಂದಿ ಹಡಗಿನಲ್ಲಿ ಕಂಡುಬಂದ ಬಗ್ಗೆ ಮಾಹಿತಿ ಲಭ್ಯವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.