ನವದೆಹಲಿ:ಮಹತ್ವದ ಮೈಲಿಗಲ್ಲನ್ನು ಸಾಧಿಸಿರುವ ಭಾರತೀಯ ನೌಕಾಪಡೆಯ ಎಂಎಚ್-60 ರೋಮಿಯೋ ಹೆಲಿಕಾಪ್ಟರ್ ಬುಧವಾರ ಸ್ವದೇಶಿ ವಿಮಾನವಾಹಕ ನೌಕೆ (ಎರ್ಕ್ರಾಪ್ಟ್ ಕ್ಯಾರಿಯರ್) ಐಎನ್‌ಎಸ್ ವಿಕ್ರಾಂತ್‌ನಲ್ಲಿ ಮೊದಲ ಬಾರಿಗೆ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದೆ. ಭಾರತೀಯ ನೌಕಾಪಡೆಯು ಯುಎಸ್ ನಿರ್ಮಿತ ಎಂಎಚ್-60ಆರ್ ಹೆಲಿಕಾಪ್ಟರ್‌ನ ಯಶಸ್ವಿ ಮೊದಲ ಲ್ಯಾಂಡಿಂಗ್‌ನ ವಿಡಿಯೋವನ್ನು ಹಂಚಿಕೊಂಡಿದೆ. ಆ್ಯಂಟಿ ಸಬ್ಮರೀನ್ ಹಾಗೂ ಫ್ಲೀಟ್ ಬೆಂಬಲಿತ ಸಾಮರ್ಥ್ಯಗಳಲ್ಲಿ ಇದು ಪ್ರಮುಖ ಉತ್ತೇಜನವಾಗಿದೆ ಎಂದು ಹೇಳಲಾಗುತ್ತಿದೆ.
ಭಾರತೀಯ ನೌಕಾಪಡೆಗೆ ಮತ್ತೊಂದು ಮೈಲಿಗಲ್ಲು:"ಭಾರತೀಯ ನೌಕಾಪಡೆಗೆ ಮತ್ತೊಂದು ಮೈಲಿಗಲ್ಲು ಆಗಿದೆ. ಎಂಎಚ್-60ಆರ್ ಹೆಲಿಕಾಪ್ಟರ್ ಸ್ಥಳೀಯವಾಗಿ ವಿನ್ಯಾಸಗೊಳಿಸಲಾದ ಮತ್ತು ನಿರ್ಮಿಸಲಾದ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಾಂತ್‌ನಲ್ಲಿ ಮೊದಲ ಲ್ಯಾಂಡಿಂಗ್ ಅನ್ನು ಯಶಸ್ವಿಗೊಳಿಸಿದೆ. ಭಾರತೀಯ ನೌಕಾಪಡೆಯ ಆ್ಯಂಟಿ ಸಬ್ಮರೀನ್ ಮತ್ತು ಫ್ಲೀಟ್ ಬೆಂಬಲಿಸುವಂತ ಸಾಮರ್ಥ್ಯಕ್ಕೆ ಪ್ರಮುಖ ಉತ್ತೇಜನವಾಗಿದೆ" ಎಂದು ಭಾರತೀಯ ನೌಕಾಪಡೆಯ ವಕ್ತಾರರು ಹೆಲಿಕಾಪ್ಟರ್ ಇಳಿಯುವಿಕೆಯ ವಿಡಿಯೋ ಹಾಗೂ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಎಂಎಚ್ - 60 ರೋಮಿಯೋ, ಜಾಗತಿಕವಾಗಿ ಅತ್ಯಾಧುನಿಕ ಆ್ಯಂಟಿ ಸಬ್ಮರೀನ್ ಹೆಲಿಕಾಪ್ಟರ್‌ಗಳಲ್ಲಿ ಒಂದಾಗಿದೆ. ಇದನ್ನು ಲಾಕ್‌ಹೀಡ್ ಮಾರ್ಟಿನ್ ತಯಾರಿಸಿದೆ. ಹೆಲಿಕಾಪ್ಟರ್ ಅನ್ನು ನೌಕಾಪಡೆಯ ಯುದ್ಧನೌಕೆಗಳಲ್ಲಿ ನಿಯೋಜಿಸಲಾಗುವುದು. 905 ಮಿಲಿಯನ್ ಡಾಲರ್ ಮೌಲ್ಯದ ಒಪ್ಪಂದವನ್ನು ಸರ್ಕಾರ ಮಾಡಿಕೊಂಡಿದೆ. ಭಾರತವು ಈ 24 ಹೆಲಿಕಾಪ್ಟರ್‌ಗಳನ್ನು ಆರ್ಡರ್ ಮಾಡಿದೆ. ಈಗಾಗಲೇ ಎರಡು ಹೆಲಿಕಾಪ್ಟರ್‌ಗಳನ್ನು ಭಾರತೀಯ ನೌಕಾಪಡೆಗೆ ಬಂದು ಮುಟ್ಟಿವೆ.
ಇದನ್ನೂ ಓದಿ:ಭಾರತೀಯ ಜ್ಞಾನ ವ್ಯವಸ್ಥೆಯಲ್ಲಿದೆ ಮಾನಸಿಕ ಆರೋಗ್ಯಕ್ಕೆ ಮದ್ದು: ಐಐಟಿ ಮಂಡಿ ಸಂಶೋಧನೆ ಆರಂಭ