ಕರ್ನಾಟಕ

karnataka

ETV Bharat / bharat

ದ್ವೀಪ ಪ್ರದೇಶಗಳಿಗೆ ಆಕ್ಸಿಜನ್ ಎಕ್ಸ್‌ಪ್ರೆಸ್ ಮೂಲಕ ಅಗತ್ಯ ವಸ್ತುಗಳ ಪೂರೈಕೆ ಮಾಡಿದ ಭಾರತೀಯ ನೌಕಾಪಡೆ - ಆಕ್ಸಿಜನ್ ಎಕ್ಸ್‌ಪ್ರೆಸ್ ಮಿಷನ್‌

ಕಡ್ಮತ್ ದ್ವೀಪದಲ್ಲಿ ಕೊರೊನಾ ವಿರುದ್ಧ ಹೋರಾಡಲು ಆಡಳಿತಾಧಿಕಾರಿಗಳಿಗೆ ಸಹಾಯ ಮಾಡಲು, ಒಬ್ಬ ವೈದ್ಯರು, ಇಬ್ಬರು ವೈದ್ಯಕೀಯ ಸಹಾಯಕರು ಮತ್ತು ಒಬ್ಬ ಹೆಚ್ಚುವರಿ ನಾವಿಕನನ್ನು ಒಳಗೊಂಡ ನೌಕಾಪಡೆಯು ಭಾನುವಾರ ಕಡ್ಮತ್ ತಲುಪಿತು..

INS SHARADA
INS SHARADA

By

Published : Apr 25, 2021, 10:20 PM IST

ಕೊಚ್ಚಿ :ಕೋವಿಡ್-19 ವಿರುದ್ಧ ರಾಷ್ಟ್ರದ ಹೋರಾಟದ ಭಾಗವಾಗಿ, ಭಾರತೀಯ ನೌಕಾಪಡೆಯ ಹಡಗುಗಳು, ಕೊಚ್ಚಿಯ ಸದರನ್​ ನೇವಲ್ ಕಮಾಂಡ್, ಲಕ್ಷದ್ವೀಪದ ಸ್ಥಳೀಯ ಆಡಳಿತಕ್ಕೆ ಬೆಂಬಲ ನೀಡುವ ಸಲುವಾಗಿ 'ಆಕ್ಸಿಜನ್ ಎಕ್ಸ್‌ಪ್ರೆಸ್ ಮಿಷನ್‌'ಅಡಿ ಅಗತ್ಯ ವಸ್ತುಗಳನ್ನು ಕೊಂಡೊಯ್ದಿವೆ.

ಕೊಚ್ಚಿ ಮೂಲದ ಐಎನ್‌ಎಸ್ ಶಾರದಾ ಹೆಸರಿನ ಹಡಗು, ಅಗತ್ಯ ವೈದ್ಯಕೀಯ ಸಾಮಗ್ರಿಗಳನ್ನು ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪದ ರಾಜಧಾನಿ ಕವರಟ್ಟಿಗೆ ವರ್ಗಾಯಿಸಿದೆ.

ಈ ಹಡಗು 35 ಆಕ್ಸಿಜನ್ ಸಿಲಿಂಡರ್‌ಗಳು, ರ್ಯಾಪಿಡ್ ಆಂಟಿಜೆನ್ ಡಿಟೆಕ್ಷನ್ ಟೆಸ್ಟ್ (ಆರ್‌ಎಡಿಟಿ) ಕಿಟ್‌ಗಳು, ಪರ್ಸನಲ್ ಪ್ರೊಟೆಕ್ಟಿವ್ ಎಕ್ಯೂಪ್​ಮೆಂಟ್​ (ಪಿಪಿಇ ಕಿಟ್​), ಮಾಸ್ಕ್​ಗಳು ಮತ್ತು ಕೋವಿಡ್​ ವೈರಸ್​ ವಿರುದ್ಧ ಹೋರಾಡಲು ಬಳಸುವ ಇತರ ವಸ್ತುಗಳನ್ನು ಒಳಗೊಂಡಿವೆ.

ಈಗಾಗಲೇ ದ್ವೀಪಗಳಿಂದ 41 ಖಾಲಿ ಆಕ್ಸಿಜನ್ ಸಿಲಿಂಡರ್‌ಗಳನ್ನು ಮೇಘ್ನ ಎಂಬ ಭಾರತೀಯ ನೌಕಾಪಡೆಯ ಹಡಗು ಮರುಭರ್ತಿಗೆ ಕೊಚ್ಚಿಗೆ ತೆಗೆದುಕೊಂಡು ಹೋಗಿದೆ.

ಆಕ್ಸಿಜನ್ ಎಕ್ಸ್‌ಪ್ರೆಸ್ ಅಡೆತಡೆಯಿಲ್ಲದೆ ಕಾರ್ಯಾಚರಣೆ ಮಾಡುವುದನ್ನು ಖಚಿತಪಡಿಸಿಕೊಳ್ಳಲು ಶೀಘ್ರದಲ್ಲೇ ಭರ್ತಿ ಮಾಡಿದ ಸಿಲಿಂಡರ್‌ಗಳೊಂದಿಗೆ ಲಕ್ಷದ್ವೀಪಕ್ಕೆ ಹಿಂತಿರುಗಲಿದೆ.

ಕೇಂದ್ರಾಡಳಿತ ಪ್ರದೇಶದ ಆಡಳಿತದ ಸಮನ್ವಯದೊಂದಿಗೆ ಲಕ್ಷದ್ವೀಪದಲ್ಲಿ ನೌಕಾ ಅಧಿಕಾರಿ ಉಸ್ತುವಾರಿಯಲ್ಲಿ ಈ ಎಲ್ಲಾ ಕಾರ್ಯಾಚರಣೆಗಳು ನಡೆಯುತ್ತಿವೆ.

ಕಡ್ಮತ್ ದ್ವೀಪದಲ್ಲಿ ಕೊರೊನಾ ವಿರುದ್ಧ ಹೋರಾಡಲು ಆಡಳಿತಾಧಿಕಾರಿಗಳಿಗೆ ಸಹಾಯ ಮಾಡಲು, ಒಬ್ಬ ವೈದ್ಯರು, ಇಬ್ಬರು ವೈದ್ಯಕೀಯ ಸಹಾಯಕರು ಮತ್ತು ಒಬ್ಬ ಹೆಚ್ಚುವರಿ ನಾವಿಕನನ್ನು ಒಳಗೊಂಡ ನೌಕಾಪಡೆಯು ಭಾನುವಾರ ಕಡ್ಮತ್ ತಲುಪಿತು.

ಈ ಎಲ್ಲಾ ಕೊರೊನಾ ವಾರಿಯರ್ಸ್​ಗಳನ್ನು ಎಸ್‌ಎನ್‌ಸಿ, ಕೊಚ್ಚಿ ಮತ್ತು ಐಎನ್‌ಎಸ್ ದ್ವಿಪ್ರಕ್ಷಕ್, ಕವರಟ್ಟಿಯಿಂದ ನಿಯೋಜಿಸಲಾಗಿದೆ. ದ್ವೀಪಗಳಲ್ಲಿನ ಕೋವಿಡ್​ ಬೆಡ್​ಗಳ ಕೊರತೆಯನ್ನು ನೀಗಿಸಲು ಭಾರತೀಯ ನೌಕಾಪಡೆಯ ಹಡಗು ಆಸ್ಪತ್ರೆ, ಕೊಚ್ಚಿಯಲ್ಲಿ ಲಕ್ಷದ್ವೀಪದ ರೋಗಿಗಳಿಗೆ ಐಸಿಯು ಸೌಲಭ್ಯಗಳು ಸೇರಿದಂತೆ ಹತ್ತು ಹಾಸಿಗೆಗಳನ್ನು ಹೆಚ್ಕ್ಯುಎಸ್ಎನ್‌ಸಿ ಕಾಯ್ದಿರಿಸಿದೆ.

ಅಲ್ಲದೆ, ನೌಕಾ ವಾಯು ನಿಲ್ದಾಣ ಐಎನ್‌ಎಸ್ ಗರುಡವನ್ನು ಕೇಂದ್ರಾಡಳಿತ ಪ್ರದೇಶದ ಹೆಲಿಕಾಪ್ಟರ್‌ ಮೂಲಕ ರೋಗಿಗಳಿಗೆ ಸಾಗಿಸಲು ನೌಕಾ ವಾಯುನೆಲೆ ಸೌಲಭ್ಯಗಳನ್ನು ವಿಸ್ತರಿಸಲು ಎಚ್ಚರಿಕೆ ವಹಿಸಲಾಗಿದೆ.

ಕೊಚ್ಚಿಯ ನೇವಲ್ ಏರ್‌ಕ್ರಾಫ್ಟ್ ಯಾರ್ಡ್‌ನಿಂದ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಸ್ಥಳಾಂತರಿಸುವ ಪಾಡ್‌ಗಳನ್ನು ದ್ವೀಪಗಳಿಂದ ಮತ್ತು ಇತರ ಸ್ಥಳಗಳಿಂದ ಕೋವಿಡ್​ ರೋಗಿಗಳನ್ನು ಸಾಗಿಸಲು ವಿಮಾನದ ತುರ್ತು ಅವಶ್ಯಕತೆಗಳಿಗಾಗಿ ತಯಾರಿಸಲಾಗುತ್ತಿದೆ.

ABOUT THE AUTHOR

...view details