ಕರ್ನಾಟಕ

karnataka

ETV Bharat / bharat

ವಿಶ್ವಸಂಸ್ಥೆಯಲ್ಲಿ ಭಾರತದ ಧ್ವಜ ಸ್ಥಾಪನೆ

ರಾಯಭಾರಿ ಟಿ ಎಸ್ ತಿರುಮೂರ್ತಿ, ಯುಎನ್‌ಎಸ್‌ಸಿಯಲ್ಲಿ ತ್ರಿವರ್ಣವನ್ನು ಸ್ಥಾಪಿಸಿ ಸಂಕ್ಷಿಪ್ತ ಭಾಷಣ ಮಾಡಿದರು. ತಮ್ಮ ಭಾಷಣದಲ್ಲಿ ಟಿ ಎಸ್ ತಿರುಮೂರ್ತಿ, ಭಾರತ ಇಂದು 8ನೇ ಬಾರಿಗೆ ಭದ್ರತಾ ಮಂಡಳಿಯ ಸದಸ್ಯತ್ವ ಪಡೆದುಕೊಂಡಿದೆ..

indian national flag
ವಿಶ್ವ ಸಂಸ್ಥೆಯಲ್ಲಿ ಭಾರತದ ಧ್ವಜ ಸ್ಥಾಪನೆ

By

Published : Jan 5, 2021, 12:28 PM IST

ನವದೆಹಲಿ :ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (UNSC) ತಾತ್ಕಾಲಿಕ ಸದಸ್ಯರಾಗಿ ಭಾರತದ ಎರಡು ವರ್ಷಗಳ ಅವಧಿ ಸೋಮವಾರದಿಂದ ಪ್ರಾರಂಭದ ಹಿನ್ನೆಲೆ ತ್ರಿವರ್ಣವನ್ನು ಕೌನ್ಸಿಲ್ ಕಾರಿಡಾರ್​​ನಲ್ಲಿ ಹಾರಿಸಲಾಯಿತು.

2021ರ ಆಗಸ್ಟ್​​ನಲ್ಲಿ ಭಾರತ ಯುಎನ್ ಸೆಕ್ಯುರಿಟಿ ಕೌನ್ಸಿಲ್ ಅಧ್ಯಕ್ಷತೆವಹಿಸಲಿದೆ. ನಾರ್ವೆ, ಕೀನ್ಯಾ, ಐರ್ಲೆಂಡ್ ಮತ್ತು ಮೆಕ್ಸಿಕೋವನ್ನು ಒಳಗೊಂಡಿರುವ ಭಾರತೀಯ ಧ್ವಜದ ಜೊತೆಗೆ ಇತರ ನಾಲ್ಕು ತಾತ್ಕಾಲಿಕ ಸದಸ್ಯರ ರಾಷ್ಟ್ರಧ್ವಜವನ್ನು ಹಾರಿಸಲಾಯಿತು.

ಈ ಕುರಿತು ಪ್ರತಿಕ್ರಿಯಿಸಿರುವ ಯುಎನ್‌ನ ಭಾರತದ ಖಾಯಂ ಪ್ರತಿನಿಧಿ, ರಾಯಭಾರಿ ಟಿ ಎಸ್ ತಿರುಮೂರ್ತಿ, ಯುಎನ್‌ಎಸ್‌ಸಿಯಲ್ಲಿ ತ್ರಿವರ್ಣವನ್ನು ಸ್ಥಾಪಿಸಿ ಸಂಕ್ಷಿಪ್ತ ಭಾಷಣ ಮಾಡಿದರು. ತಮ್ಮ ಭಾಷಣದಲ್ಲಿ ಟಿ ಎಸ್ ತಿರುಮೂರ್ತಿ, ಭಾರತ ಇಂದು 8ನೇ ಬಾರಿಗೆ ಭದ್ರತಾ ಮಂಡಳಿಯ ಸದಸ್ಯತ್ವ ಪಡೆದುಕೊಂಡಿದೆ ಎಂದು ಹೇಳಿದರು.

ಧ್ವಜಾರೋಹಣ ಸಮಾರಂಭದಲ್ಲಿ ಭಾರತದ ಖಾಯಂ ಪ್ರತಿನಿಧಿಯಾಗಿ ಭಾಗವಹಿಸುತ್ತಿರುವುದು ನನಗೆ ಹೆಮ್ಮೆ ಎನಿಸುತ್ತಿದೆ ಎಂದು ಇದೇ ವೇಳೆ ಹೇಳಿದ್ರು. ಐರ್ಲೆಂಡ್, ಕೀನ್ಯಾ, ಮೆಕ್ಸಿಕೊ ಮತ್ತು ನಾರ್ವೆಯ ನಿಯೋಗಗಳನ್ನು ನಾವು ಸ್ವಾಗತಿಸುತ್ತೇವೆ ಎಂದ್ರು.

ಇದನ್ನು ಓದಿ:ಕೊಚ್ಚಿ - ಮಂಗಳೂರು ನೈಸರ್ಗಿಕ ಅನಿಲ ಪೈಪ್‌ಲೈನ್​ ಉದ್ಘಾಟಿಸಿದ ಪ್ರಧಾನಿ ಮೋದಿ

ABOUT THE AUTHOR

...view details