ನವದೆಹಲಿ:ಭಾರತೀಯ ಮಿಲಿಟರಿ ವಿಶ್ವದ ಯಾವುದೇ ಮಿಲಿಟರಿಗಿಂತ ಹೆಚ್ಚಿನ ಸವಾಲುಗಳನ್ನು ಎದುರಿಸುತ್ತಿದೆ ಎಂದು ರಕ್ಷಣಾ ಪಡೆ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ ಅಭಿಪ್ರಾಯಪಟ್ಟಿದ್ದಾರೆ.
ವಿಶ್ವದ ಇತರ ದೇಶಗಳಿಗಿಂತ ನಮ್ಮ ಮಿಲಿಟರಿ ಸವಾಲು ಎದುರಿಸುತ್ತಿದೆ: ಸಿಡಿಎಸ್ ರಾವತ್ - ಮಿಲಿಟರಿ ಪಡೆ ಸುದ್ದಿ
ಜಗತ್ತಿನ ಇತರ ಮಿಲಿಟರಿ ಪಡೆಗಳಿಗಿಂದ ಭಾರತೀಯ ಮಿಲಿಟರಿ ಹೆಚ್ಚು ಸವಾಲುಗಳನ್ನ ಎದುರಿಸುತ್ತಿದೆ ಎಂದು ರಕ್ಷಣಾ ಪಡೆ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.
ರಕ್ಷಣಾ ಪಡೆ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್
ಪರಮಾಣು ಅತಿಕ್ರಮಣದ ಅಡಿ ಸಾಂಪ್ರದಾಯಿಕ ಯುದ್ಧಗಳು ಅಥವಾ ಸೀಮಿತ ಘರ್ಷಣೆಗಳಿಗೆ ಸಾಂಸ್ಥಿಕ ರಚನೆ ಈಗಾಗಲೇ ಅಸ್ತಿತ್ವದಲ್ಲಿದೆ. ಆದರೆ, ಇವುಗಳನ್ನು ಮರು ಮಾದರಿಪಡಿಸಿ, ಯುದ್ಧಭೂಮಿಯಲ್ಲಿ ಸಹಾಯಕವಾಗುವಂತೆ ಮಾಡಬೇಕಿದೆ ಎಂದರು.
ಇನ್ನು ಮಿಲಿಟರಿಯ ಸವಾಲುಗಳನ್ನು ಪರಿಹರಿಸಲು ಇತರ ದೇಶಗಳು ಕೈಗೊಂಡಿರುವ ಕ್ರಮಗಳ ಬಗ್ಗೆ ಸೂಕ್ಷ್ಮವಾಗಿ ಪರಿಶೀಲನೆ ನಡೆಸಬೇಕು ಎಂದರು.