ಅಹಮದಾಬಾದ್(ಗುಜರಾತ್):ಚೀನಾದ ಮಾಂಜಾ(ಗಾಳಿಪಟದ ದಾರ)ಮಾರಾಟ ಹಾಗೂ ಬಳಕೆಗೆ ನಿಷೇಧವಿದ್ದರೂ, ಅಹಮದಾಬಾದ್ನಲ್ಲಿ ಚೀನಾ ದಾರವನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ.ಇದರಿಂದ ಜನರು ಹಾಗೂ ಪ್ರಾಣಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆಗಳು ಮುಂದುವರೆದಿವೆ. ಚೀನಾ ಮಾಂಜಾ ಅಪಾಯಕಾರಿ, ಜೀವಕ್ಕೆ ಕುತ್ತು ತರುವಂತಹದ್ದು, ಕತ್ತು ಸೀಳುವಷ್ಟು ಹರಿತವಾಗಿದ್ದು, ಜೀವದ ಸುರಕ್ಷತೆಗಾಗಿ ಅಹಮದಾಬಾದ್ನ ಜನರು ಬೈಕ್ಗೆ ರಾಡ್ ಅಳವಡಿಕೊಳ್ಳುತ್ತಿದ್ದಾರೆ.
ಚೀನಾ ಮಾಂಜಾ ಸಂಪೂರ್ಣ ನಿಷೇಧಿಸಬೇಕು ಎಂದು ಕೋರಿ ಹೈಕೋರ್ಟ್‌ಗೆ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ. ಈ ಮಾಂಜಾ ಬಳಕೆ ತಡೆಗೆ ಅಧಿಕಾರಿಗಳು ಹಾಗೂ ಪೊಲೀಸರು ನಿರಂತರ ಶ್ರಮಿಸುತ್ತಿದ್ದರೂ, ಅವರ ಕಣ್ಣುತಪ್ಪಿಸಿ ಮಾರಾಟಗಾರರು ಅಕ್ರಮವಾಗಿ ದಾರಗಳನ್ನು ಅಲ್ಲಲ್ಲಿ ಮಾರುತ್ತಿದ್ದು, ಆಕಸ್ಮಿಕ ಅಪರಾಧ ಘಟನೆಗಳೂ ಅಲ್ಲಲ್ಲಿ ಜರುಗುತ್ತಿವೆ. ಈ ಗಾಳಿಪಟ ಮಾಂಜಾದಿಂದ ಬೈಕ್ ಸವಾರರು ತೀವ್ರವಾಗಿ ಗಾಯಗೊಂಡಿರುವ ವರದಿಗಳು ಅಲ್ಲಲ್ಲಿ ನಡೆಯುತ್ತಿವೆ. ಈ ಮಾಂಜಾ ಗಂಟಲನ್ನೂ ಸೀಳುವಷ್ಟು ತೀಕ್ಷ್ಣವಾಗಿದ್ದು, ಅಕ್ರಮವಾಗಿ ಮಾಂಜಾ ಮಾರಾಟ ಮಾರುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ಜನರು ಅಧಿಕಾರಿಗಳಿಗೆ ಆಗ್ರಹಿಸುತ್ತಿದ್ದಾರೆ.
ಸುರಕ್ಷತೆಗಾಗಿ ವಾಹನಗಳಿಗೆ ರಾಡ್ ಬಳಕೆ: ಚೀನಾ ಮಾಂಜಾ ಅಪಾಯ ತಡೆಗೆ ವಾಹನ ಸವಾರರು ತಮ್ಮ ವಾಹನಗಳಿಗೆ ರಾಡ್ ಬಾರ್ಗಳನ್ನು ಜೋಡಿಸಿದ್ದು, ತಮ್ಮ ರಕ್ಷಣೆಗಾಗಿ ಉತ್ತಮ ಪರಿಹಾರ ಕಂಡು ಕೊಂಡಿದ್ದಾರೆ. ಈಟಿವಿ ಭಾರತ್ ಜತೆಗೆ ಬೈಕ್ ಸವಾರ್ ಶೈಲೇಶ್ ಮಾತನಾಡಿ, ಚೀನಾ ಮಾಂಜಾ ನಿಷೇಧದ ನಡುವೆಯೂ ಜನರು ಈ ದಾರದ ಮಾರಾಟ ಹಾಗೂ ಬಳಕೆ ಮಾಡುತ್ತಿರುವುದು ದುರದೃಷ್ಟಕರ.
ಈ ಚೀನಾ ದಾರ ತುಂಬಾ ಅಪಾಯಕಾರಿ ಮತ್ತು ಜೀವಕ್ಕೆ ಕುತ್ತು ತರುವಂತಹದ್ದು, ಮಕ್ಕಳು ಸಹ ಬೈಕ್ ಮೇಲೆ ಕುಳಿತುಕೊಳ್ಳುತ್ತಾರೆ. ದಾರವು ಅವರ ಕತ್ತು ಸೀಳುವಷ್ಟು ಹರಿತವಾಗಿದೆ. ಹೈಕೋರ್ಟ್ ಚೀನಾ ಮಾಂಜಾ ನಿಷೇಧಿಸಲು ಆದೇಶಿಸಿದೆ. ಆದರೆ ಜನರು ಇನ್ನೂ ಮಾರಾಟ, ಬಳಸುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಮಕ್ಕಳನ್ನು ಶಾಲೆಗೆ ಕರೆದೊಯ್ಯಲು ಮತ್ತು ಬಿಡಲು ಮಾತ್ರ ಮೋಟಾರ್ ಸೈಕಲ್ಗಳನ್ನು ಬಳಸುತ್ತೇವೆ, ಮಕ್ಕಳ ಸುರಕ್ಷತೆ ಮೊದಲ ಪ್ರಶ್ನೆ. ಈ ಕಾರಣದಿಂದ ವಿಶೇಷವಾಗಿ ಪ್ರತಿಯೊಬ್ಬರೂ ತಮ್ಮ ಸುರಕ್ಷತೆ ಗಮನದಲ್ಲಿಟ್ಟುಕೊಂಡು ಈ ರಾಡ್ ತಮ್ಮ ವಾಹನಗಳಿಗೆ ಜೋಡಿಸಬೇಕು ಎಂದು ತಿಳಿಸಿದ್ದಾರೆ.