ನವದೆಹಲಿ:ಮಹಾಮಾರಿ ಕೊರೊನಾ ವೈರಸ್ ಅಲೆ ಪ್ರಪಂಚದಾದ್ಯಂತ ಶಿಕ್ಷಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಆದರೆ ಈ ಎಲ್ಲ ಅಡೆತಡೆಗಳ ಮಧ್ಯೆ ಭಾರತದ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿವೋರ್ವ ಯುಎಸ್, ಯುಕೆ, ಫ್ರಾನ್ಸ್ ಸೇರಿದಂತೆ ಯುರೋಪಿನ ಉನ್ನತ ವಿಶ್ವವಿದ್ಯಾಲಯ ಹಾಗೂ ಸಂಸ್ಥೆಗಳಿಂದ ವಿಜ್ಞಾನ ಮತ್ತು ಗಣಿತ ವಿಷಯದಲ್ಲಿ ಸುಮಾರು 25ಕ್ಕೂ ಅಧಿಕ ಸಂಶೋಧನಾ ಆಫರ್ ಪಡೆದುಕೊಂಡಿದ್ದಾರೆ.
25ಕ್ಕೂ ಅಧಿಕ ಸಂಶೋಧನಾ ಆಫರ್ ಪಡೆದ ಅಭಿಷೇಕ್ ಭಾರತದಲ್ಲಿನ ಆಫರ್ ಹೊರತುಪಡಿಸಿ 21 ವರ್ಷದ ವಿದ್ಯಾರ್ಥಿ ಅಭಿಷೇಕ್ ಅಗ್ರಹಾರಿ ಈ ಅರ್ಹತೆ ಪಡೆದುಕೊಂಡಿದ್ದಾರೆ. ಪ್ರಮುಖವಾಗಿ ವಿದ್ಯಾರ್ಥಿಗಳು ವಿಜ್ಞಾನ ಮತ್ತು ಗಣಿತ ಎರಡೂ ವಿಷಯದಲ್ಲಿ ಸಂಶೋಧನಾ ಆಫರ್ ಪಡೆದುಕೊಳ್ಳುವುದು ತುಂಬ ಅಪರೂಪ. ಆದರೆ ಈ ವಿದ್ಯಾರ್ಥಿ ಇಂತಹದೊಂದು ಸಾಧನೆಯ ಮೂಲಕ ವಿಶ್ವದ ಗಮನೆ ಸಳೆದಿದ್ದಾರೆ. ಗ್ಯಾಸ್ ಟರ್ಬೈನ್ ಎಂಜಿನ್ಗಳಲ್ಲಿ ರಕ್ಷಣಾ ಸಂಶೋಧನೆ ವಿಷಯವಾಗಿ ಈಗಾಗಲೇ ಡಿಆರ್ಡಿಒ ಜತೆ ಅಭಿಷೇಕ್ ಕೆಲಸ ಮಾಡಿದ್ದು, ಐಐಟಿ ಇಂದೋರ್, ಮದ್ರಾಸ್ನಲ್ಲೂ ವಿಶೇಷ ಸಂಶೋಧನೆಗಳಲ್ಲಿ ಭಾಗಿಯಾಗಿದ್ದಾರೆ.
ಯಾವೆಲ್ಲ ದೇಶಗಳಿಂದ ಆಫರ್?
ಭವಿಷ್ಯದಲ್ಲಿ ಭಾರತಕ್ಕಾಗಿ ನೊಬೆಲ್ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಗುರಿ ಹೊಂದಿರುವ ಅಭಿಷೇಕ್ಗೆ ಇಂಗ್ಲೆಂಡ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ, ಫ್ರಾನ್ಸ್‌ನಲ್ಲಿ ಸಿಎನ್ಆರ್ಎಸ್, ಅಮೆರಿಕದ ಪೆನ್ಸಿಲ್ವೇನಿಯಾ ಸ್ಟೇಟ್ ಯೂನಿವರ್ಸಿಟಿ ಹಾಗೂ ಇಲಿನಾಯ್ಸ್ ವಿಶ್ವವಿದ್ಯಾಲಯ, ಜರ್ಮನಿಯ ಮ್ಯೂನಿಚ್‌ನ ಟೆಕ್ನಿಕ್ ವಿಶ್ವವಿದ್ಯಾಲಯ, ಬೀಜಿಂಗ್ನ ಟೆಲ್ ಅವೀವ್ ವಿಶ್ವವಿದ್ಯಾಲಯ, ಚೀನಾದ ಹಾಂಗ್ ಕಾಂಗ್ ವಿಶ್ವವಿದ್ಯಾಲಯ ಹಾಗೂ ಶಾಂಘೈ ಜಿಯಾ ಟಾಂಗ್ ವಿಶ್ವವಿದ್ಯಾಲಯ, ದಕ್ಷಿಣ ಕೊರಿಯಾದ ಜಿಯೊಂಗ್‌ಸಾಂಗ್ ರಾಷ್ಟ್ರೀಯ ವಿಶ್ವವಿದ್ಯಾಲಯ, ಆಸ್ಟ್ರೇಲಿಯಾದ ಅಡಿಲೇಡ್ ವಿಶ್ವವಿದ್ಯಾಲಯ ಮತ್ತು ಆಸ್ಟ್ರೇಲಿಯನ್ ಸ್ಕೂಲ್ ಆಫ್ ಪೆಟ್ರೋಲಿಯಂ ಸೈನ್ಸಸ್‌ನಿಂದ ಆಫರ್ ಬಂದಿವೆ.
ಪಟಿಯಾಲದ TIETಯಲ್ಲಿ ಮೂರನೇ ವರ್ಷದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಓದುತ್ತಿರುವ ಈತನಿಗೆ ಗಣಿತದ ಸಂಶೋಧನೆಗಾಗಿ ಆಸ್ಟ್ರೇಲಿಯನ್ ನ್ಯಾಷನಲ್ ಯೂನಿವರ್ಸಿಟಿ, ಮಿಯಾಮಿ ವಿಶ್ವವಿದ್ಯಾಲಯ, ಬುಡಾಪೆಸ್ಟ್ ಟೆಕ್ನಾಲಜಿ ಆ್ಯಂಡ್ ಎಕನಾಮಿಕ್ಸ್ ವಿಶ್ವವಿದ್ಯಾಲಯ, ಚೀನಾದ ಹಾಂಗ್ ಕಾಂಗ್ ವಿಶ್ವವಿದ್ಯಾಲಯ ಮತ್ತು ಫೆರಾರಾ ವಿಶ್ವವಿದ್ಯಾಲಯ(ಇಟಲಿ)ಗಳಲ್ಲಿ ಸಂಶೋಧನೆ ಮಾಡಲು ಆಫರ್ ಕೂಡ ಬಂದಿವೆ.
ಎಲ್ಲ ವಿಷಯಗಳ ಕುರಿತು ಆಳವಾದ ತಿಳುವಳಿಕೆ ಹಾಗೂ ಜ್ಞಾನ ಹೊಂದಿರುವ ಅಭಿಷೇಕ್, ಅನೇಕ ಸುತ್ತಿನ ಪರೀಕ್ಷೆಗಳಲ್ಲಿ ಪಾಸ್ ಆದ ಬಳಿಕ ಸಂದರ್ಶನ ಎದುರಿಸಿದ್ದು, ಬಳಿಕ ಆಫರ್ ಬಂದಿವೆ ಎಂದು ತಿಳಿದು ಬಂದಿದೆ. ಅಭಿಷೇಕ್ ಪ್ರಮುಖವಾಗಿ ದ್ರವ ರಚನೆ ಸಂವಹನ ಸಿದ್ಧಾಂತ, ಪ್ಲಾಸ್ಮಾ ಭೌತಶಾಸ್ತ್ರ, ನೀರಿನ ತರಂಗ ಯಂತ್ರಶಾಸ್ತ್ರ, ಚಲನ ಸಿದ್ಧಾಂತ, ಚಲನ ಸಮೀಕರಣಗಳು, ಗಣಿತದ ಸಾಮಾನ್ಯ ಸಾಪೇಕ್ಷತೆ, ರೇಖಾತ್ಮಕವಲ್ಲದ ಅಲೆಗಳು ಮತ್ತು ಗೇಜ್ ಸಿದ್ಧಾಂತದ ಹಠಾತ್ ಗುರುತ್ವಾಕರ್ಷಣೆ ವಿಷಯದ ಮೇಲೆ ಹೆಚ್ಚಿನ ಪ್ರಾಬಲ್ಯ ಸಾಧಿಸಿದ್ದಾರೆ.