ಕರ್ನಾಟಕ

karnataka

ETV Bharat / bharat

ಅವಧಿ ಮುಗಿದ ಪಾಸ್‌ಪೋರ್ಟ್‌ನಲ್ಲಿ ಪಾಕಿಸ್ತಾನಕ್ಕೆ ವೀಸಾ ನೀಡಿದ ಭಾರತೀಯ ರಾಯಭಾರ ಕಚೇರಿ - ಅವಧಿ ಮುಗಿದ ಪಾಸ್‌ಪೋರ್ಟ್‌ನಲ್ಲಿ ಪಾಕಿಸ್ತಾನಕ್ಕೆ ವೀಸಾ

ಭಾರತೀಯ ರಾಯಭಾರ ಕಚೇರಿ ಪಂಜಾಬ್ ಮೂಲದ ವ್ಯಕ್ತಿಗೆ ಅವಧಿ ಮುಗಿದ ಪಾಸ್‌ಪೋರ್ಟ್‌ನಲ್ಲಿಯೇ ಪಾಕಿಸ್ತಾನಕ್ಕೆ ವೀಸಾ ನೀಡಿದ ಘಟನೆ ಬೆಳಕಿಗೆ ಬಂದಿದೆ.

Pakistan
ಪಾಕಿಸ್ತಾನ

By

Published : Nov 21, 2021, 2:21 PM IST

ಚಂಡೀಗಢ: ಭಾರತೀಯ ರಾಯಭಾರ ಕಚೇರಿ ಪಂಜಾಬ್ ಮೂಲದ ವ್ಯಕ್ತಿಗೆ ಅವರ ಅವಧಿ ಮುಗಿದ ಪಾಸ್‌ಪೋರ್ಟ್‌ನಲ್ಲಿ ಪಾಕಿಸ್ತಾನಕ್ಕೆ ವೀಸಾ ನೀಡಿದ ಘಟನೆ ಬೆಳಕಿಗೆ ಬಂದಿದೆ.

ಪಂಜಾಬ್‌ನ ಬಟಿಂಡಾ ಗ್ರಾಮದ ಬೀಬಿ ವಾಲಾದಿಂದ ಬೂಟಾ ಸಿಂಗ್ ದಿಲ್ಲೋನ್ ಅವಧಿ ಮೀರಿದ ಪಾಸ್‌ಪೋರ್ಟ್‌ನಲ್ಲಿ ಪಾಕಿಸ್ತಾನಕ್ಕೆ ವೀಸಾ ಪಡೆದಿದ್ದಾರೆ. ಗುರುನಾನಕ್ ಜನ್ಮದಿನದ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿರುವ ದೇಗುಲಗಳಿಗೆ ಭೇಟಿ ನೀಡಲು ಪಾಕಿಸ್ತಾನ ವೀಸಾಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಆರು ತಿಂಗಳ ಹಿಂದೆ ಅವರ ಪಾಸ್‌ಪೋರ್ಟ್ ಅವಧಿ ಮುಗಿದಿದೆ ಎಂದು ತಿಳಿದಿರಲಿಲ್ಲ ಎಂದು ಅವರು ಹೇಳಿದ್ಧಾರೆ.

ಭಾರತೀಯ ರಾಯಭಾರ ಕಚೇರಿಯಿಂದ ಅವಧಿ ಮುಗಿದ ಪಾಸ್‌ಪೋರ್ಟ್‌ನಲ್ಲಿ ನವೆಂಬರ್ 17 ರಿಂದ ನವೆಂಬರ್ 26 ರವರೆಗೆ ಅವರಿಗೆ ಪಾಕಿಸ್ತಾನ ವೀಸಾವನ್ನು ನೀಡಲಾಗಿತ್ತು. ಅವರು ಸರ್ಕಾರದ ಸೂಚನೆಗಳ ಪ್ರಕಾರ ವಾಘಾ ಗಡಿಯ ಮೂಲಕ ಪಾಕಿಸ್ತಾನವನ್ನು ಪ್ರವೇಶಿಸಿದರು. ಹೊರಡುವಾಗ ತನಿಖಾಧಿಕಾರಿಗಳು ಆವರ ಪಾಸ್‌ಪೋರ್ಟ್‌ ಅವಧಿ ಮೀರಿದೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details