ನವದೆಹಲಿ: ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿರುವ ತಾಲಿಬಾನ್ ಜೊತೆಗಿನ ಮಾತುಕತೆಯಲ್ಲಿ ಭಾರತ ಉದಾರತೆ ತೋರಿಸಬೇಕು. ಕಾಬೂಲ್‌ನಲ್ಲಿ ನಮ್ಮ ರಾಯಭಾರ ಕಚೇರಿಯನ್ನು ಮರುಸ್ಥಾಪಿಸಬೇಕು. ಅಲ್ಲಿಗೆ ರಾಯಭಾರಿಯನ್ನು ಕಳುಹಿಸಬೇಕು ಎಂದು ಮಾಜಿ ವಿದೇಶಾಂಗ ಸಚಿವ ಮತ್ತು ತೃಣಮೂಲ ಕಾಂಗ್ರೆಸ್ ನಾಯಕ ಯಶವಂತ ಸಿನ್ಹಾ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಅಫ್ಘಾನ್ ಜನರು ಪಾಕಿಸ್ತಾನಕ್ಕಿಂತ ಭಾರತವನ್ನು ಹೆಚ್ಚು ಪ್ರೀತಿಸುತ್ತಾರೆ ಎಂಬುದನ್ನು ನಾವು ಗಮನಿಸಬೇಕು. ತಾಲಿಬಾನಿಗಳು ಪಾಕಿಸ್ತಾನದ ಮಡಿಲಿನಲ್ಲಿವೆ ಎಂಬ ಗ್ರಹಿಕೆಯ ಮೇಲೆ ಭಾರತ ಸರ್ಕಾರವು ಅಲ್ಲಿನ ಜನರಿಗೆ ಬಾಗಿಲು ಮುಚ್ಚುವುದು ಸರಿಯಲ್ಲ. ನಾವು ದೊಡ್ಡ ದೇಶವಾಗಿ, ತಾಲಿಬಾನಿಗರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪರಿಸ್ಥಿತಿಯನ್ನು ಸುಧಾರಿಸುವ ಕೆಲಸ ಮಾಡಬೇಕಾಗಿದೆ. ಪಾಕ್ ಪ್ರಭಾವ ಹೆಚ್ಚಿರುತ್ತದೆ ಎಂಬ ಸಂಶಯವನ್ನು ಬಿಟ್ಟು ಬಿಡಬೇಕು ಎಂದು ಸಿನ್ಹಾ ಅಭಿಪ್ರಾಯಪಟ್ಟಿದ್ದಾರೆ.