ನವದೆಹಲಿ: ಸರ್ಕಾರವು ನಮ್ಮ ಸಶಸ್ತ್ರ ಪಡೆಗಳನ್ನು ಆಧುನೀಕರಿಸಲು ಮತ್ತು ಉತ್ತಮ ಗುಣಮಟ್ಟದ ಮತ್ತು ಕಡಿಮೆ ವೆಚ್ಚದ ಆಯುಧ ಉತ್ಪಾದಿಸಲು ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.
ಏರೋಸ್ಪೇಸ್ ಕ್ಷೇತ್ರದಲ್ಲಿ ಹೊಸ ದಾಖಲೆ ಬರೆಯಲು ಭಾರತ ರೆಡಿ: ರಾಜನಾಥ್ ಸಿಂಗ್ - ಡಿಫೆಕ್ಸ್ಪೋ- 2022 ರ ರಾಯಭಾರಿಗಳ ರೌಂಡ್ ಟೇಬಲ್ ಸಮ್ಮೇಳನ
2020 ಮತ್ತು 2021 ರಲ್ಲಿ ಏರೋಸ್ಪೇಸ್ ಮತ್ತು ರಕ್ಷಣಾ ಉತ್ಪಾದನಾ ಕ್ಷೇತ್ರಗಳಲ್ಲಿ ಹೊಸ ದಿಗಂತಗಳ ಆವಿಷ್ಕಾರವನ್ನು ಕಂಡಿದೆ. ಭಾರತೀಯ ಏರೋಸ್ಪೇಸ್ ಮತ್ತು ರಕ್ಷಣಾ ಉತ್ಪಾದನಾ ಕ್ಷೇತ್ರ ಇಂದು ಎತ್ತರಕ್ಕೆ ಏರಲು ಸಿದ್ಧವಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ "Ambassadors Roundtable Conference on Defexpo- 2022" "ಡಿಫೆಕ್ಸ್ಪೋ- 2022 ರ ರಾಯಭಾರಿಗಳ ರೌಂಡ್ ಟೇಬಲ್ ಸಮ್ಮೇಳನದಲ್ಲಿ" ಭಾಗವಹಿಸಿ ಮಾತನಾಡಿದ ಅವರು, 2020 ಮತ್ತು 2021 ರಲ್ಲಿ ಏರೋಸ್ಪೇಸ್ ಮತ್ತು ರಕ್ಷಣಾ ಉತ್ಪಾದನಾ ಕ್ಷೇತ್ರಗಳಲ್ಲಿ ಹೊಸ ದಿಗಂತಗಳ ಆವಿಷ್ಕಾರವನ್ನು ಕಂಡಿದೆ. ಭಾರತೀಯ ಏರೋಸ್ಪೇಸ್ ಮತ್ತು ರಕ್ಷಣಾ ಉತ್ಪಾದನಾ ಕ್ಷೇತ್ರ ಇಂದು ಎತ್ತರಕ್ಕೆ ಏರಲು ಸಿದ್ಧವಾಗಿದೆ ಎಂದು ತಿಳಿಸಿದರು.
ಭಾರತದ ರಕ್ಷಣಾ ಬೆಳವಣಿಗೆಯಲ್ಲಿ ಹೂಡಿಕೆ ಮಾಡಿರುವ ವಿದೇಶಿ ಏರೋಸ್ಪೇಸ್ ಮತ್ತು ರಕ್ಷಣಾ ಕಂಪನಿಗಳ ಅದ್ಭುತ ಪ್ರಯತ್ನಗಳಿಗಾಗಿ ನಾನು ನಮ್ಮ ರಕ್ಷಣಾ ಉದ್ಯಮವನ್ನು ಅಭಿನಂದಿಸುತ್ತೇನೆ ಎಂದರು.