ಚೆನ್ನೈ: ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಏಕಾಂಗಿಯಾಗಿ ಸ್ವಲ್ಪ ಭಯಭೀತರಾಗಿರುವ ಭಾರತದ ಮಾಜಿ ರಾಷ್ಟ್ರೀಯ ಕ್ಷಿಪ್ರ ಚೆಸ್ ಚಾಂಪಿಯನ್ ಅನ್ವೇಶ್ ಉಪಾಧ್ಯಾಯ ಅವರು, ರಷ್ಯಾದ ಆಕ್ರಮಣದ ಮಧ್ಯೆ ಉಕ್ರೇನ್‌ನಲ್ಲಿ ಸಿಲುಕಿರುವ ಅವರ ಹಲವಾರು ದೇಶವಾಸಿಗಳಲ್ಲಿ ಒಬ್ಬರಾಗಿದ್ದಾರೆ.
ಕೀವ್ ಆಸ್ಪತ್ರೆಯಲ್ಲಿ ಗ್ಯಾಸ್ಟ್ರೋಎಂಟರಾಲಜಿಯಲ್ಲಿ ಅಪ್ರೆಂಟಿಸ್‌ಶಿಪ್ ಮಾಡುತ್ತಿರುವ 30 ವರ್ಷ ವಯಸ್ಸಿನ ಇವರು, ಮಾರ್ಚ್‌ನಲ್ಲಿ ಭಾರತಕ್ಕೆ ಮರಳಲು ಯೋಜಿಸಿದ್ದರು. ಆದರೆ, ರಷ್ಯಾ ಗುರುವಾರ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸುವುದರೊಂದಿಗೆ, ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ. ಪರಿಣಾಮ ಅಲ್ಲೇ ಸಿಲುಕುವಂತಾಗಿದೆ.
ಈ ತೀವ್ರತೆಯನ್ನು ನಿರೀಕ್ಷಿಸಿರಲಿಲ್ಲ. ಇದು ಪೂರ್ಣ ಪ್ರಮಾಣದ ಮಿಲಿಟರಿ ಆಕ್ರಮಣವಾಗಿದೆ. ಇದನ್ನು ಎಂದಿಗೂ ಊಹಿಸಿರಲಿಲ್ಲ ಎಂದು 2017ರ ರಾಷ್ಟ್ರೀಯ ಕ್ಷಿಪ್ರ ಚೆಸ್ ಚಾಂಪಿಯನ್ ಕೀವ್‌ನಿಂದಲೇ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಹಾವೇರಿ : ಮಕ್ಕಳಿಗೆ ಮುದ.. ಓದಲು ಆಹ್ಲಾದಕರ ವಾತಾವರಣ.. ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆ ಸ್ವಚ್ಛತೆ..
ಭಾರತದಲ್ಲಿರುವ ನನ್ನ ಪೋಷಕರು ಚಿಂತಿತರಾಗಿದ್ದಾರೆ ಮತ್ತು ಅದಕ್ಕಾಗಿಯೇ ನಾನು ಮಾರ್ಚ್ ಮೊದಲ ವಾರದಲ್ಲಿ ಹೊರಡಲು ಯೋಜಿಸಿದ್ದೆ ಎಂದು ಅವರು ಭುವನೇಶ್ವರದಲ್ಲಿ ನೆಲೆಸಿರುವ ಅವರ ಕುಟುಂಬದ ಬಗ್ಗೆ ಹೇಳಿದರು.
ಇದೀಗ ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಸೂಚನೆಗಳಿಗಾಗಿ ಕಾಯುತ್ತಿದ್ದೇನೆ. ಈ ಹುಚ್ಚುತನವು ಕೊನೆಗೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಸಹ ತಿಳಿಸಿದ್ದಾರೆ.