ನವದೆಹಲಿ: ದುಬೈನಲ್ಲಿ ಏಷ್ಯನ್ ಚಾಂಪಿಯನ್ಶಿಪ್ ಮುಕ್ತಾಯಗೊಂಡಿದ್ದು, ಭಾರತದ 9 ಒಲಿಂಪಿಕ್ ಬಾಕ್ಸರ್ಗಳು ತರಬೇತಿಗಾಗಿ ವಿದೇಶ ಪ್ರವಾಸ ಕೈಗೊಳ್ಳಲಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಪುರುಷರ ಬಾಕ್ಸಿಂಗ್ನ ಹೈ ಪರ್ಫಾರ್ಮೆನ್ಸ್ ನಿರ್ದೇಶಕ ಸ್ಯಾಂಟಿಯಾಗೊ ನೀವಾ, ಜುಲೈ 23 ರಿಂದ ಪಂದ್ಯ ಶುರುವಾಗಲಿದೆ. ಹಾಗಾಗಿ ಐದರಿಂದ 7 ದಿನಗಳ ಮುನ್ನ ಟೋಕಿಯೋಗೆ ತೆರಳಲಿದ್ದೇವೆ. ಇದಕ್ಕೂ ಮೊದಲು ಅಭ್ಯಾಸಕ್ಕಾಗಿ ಮೂರು ವಾರಗಳ ಕಾಲ ವಿದೇಶಿ ಪ್ರವಾಸ ಕೈಗೊಳ್ಳಲಿದ್ದೇವೆ ಎಂದಿದ್ದಾರೆ.
ದುಬೈನಲ್ಲಿ ನಡೆದ ಪಂದ್ಯದಲ್ಲಿ ಭಾರತೀಯ ಬಾಕ್ಸರ್ಗಳು 15 ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಹಿಂದಿನಕ್ಕಿಂತ ಈ ಬಾರಿ ಅತ್ಯುತ್ತಮ ಪ್ರದರ್ಶನ ನೀಡಿ ಎರಡು ಚಿನ್ನ, ಐದು ಬೆಳ್ಳಿ, ಎಂಟು ಕಂಚಿನ ಪದಕಗಳನ್ನು ಗೆದ್ದಿದ್ದಾರೆ.
ಒಲಿಂಪಿಕ್ ಪಂದ್ಯಗಳಲ್ಲಿ ಪೂಜಾ ರಾಣಿ (75 ಕೆಜಿ) ವಿಭಾಗದಲ್ಲಿ ಚಿನ್ನ, ಎಂಸಿ ಮೇರಿ ಕೋಮ್ (51 ಕೆಜಿ) ಮತ್ತು ಅಮಿತ್ ಪಂಗಲ್ (52 ಕೆಜಿ) ವಿಭಾಗಗಳಲ್ಲಿ ಬೆಳ್ಳಿ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ದುಬೈನಲ್ಲಿ ನಡೆದ ಕ್ವಾರ್ಟರ್ ಫೈನಲ್ನಲ್ಲಿ ಮನೀಶ್ ಕೌಶಿಕ್ (63 ಕೆಜಿ), ಸತೀಶ್ ಕುಮಾರ್ (+91ಕೆಜಿ) ಅನಾರೋಗ್ಯ ಕಾರಣದಿಂದಾಗಿ ಭಾಗವಹಿಸಲಿಲ್ಲ ಮತ್ತು ಆಶಿಶ್ ಚೌಧರಿ (75 ಕೆಜಿ) ಹೀನಾಯವಾಗಿ ಸೋತರು.
ನಾವು ಸಾಧಿಸಬೇಕಾದುದು ತುಂಬಾ ಇದೆ. ಸಣ್ಣಪುಟ್ಟ ಸಮಸ್ಯೆಗಳತ್ತಲೂ ಗಮನಹರಿಸಬೇಕಿದೆ. ಪಂದ್ಯಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಗೆಲುವಿಗಾಗಿ ತಯಾರಿ ನಡೆಸಬೇಕಿದೆ ಎಂದು ನೀವಾ ಹೇಳಿದ್ದಾರೆ.
ಭಾರತೀಯ ಬಾಕ್ಸಿಂಗ್ ತಂಡವು ಕೋವಿಡ್ ಬಿಕ್ಕಟ್ಟಿನ ಮಧ್ಯೆಯೂ ನಿಯಮ ಅನುಸರಿಸಿ ಇತ್ತೀಚೆಗೆ ಪಂದ್ಯಾವಳಿಗಳು ಮತ್ತು ತರಬೇತಿಗಾಗಿ ವಿದೇಶ ಪ್ರಯಾಣ ಬೆಳೆಸಿದೆ. ಕೊರೊನಾ ವ್ಯಾಪಿಸುತ್ತಿರುವುದರಿಂದ ತರಬೇತಿ ತೀರಾ ಕಡಿಮೆಯಾಗಿದೆ. ಏಪ್ರಿಲ್ನಲ್ಲಿ ತರಬೇತುದಾರ ಸಿ.ಎ. ಕುಟ್ಟಪ್ಪನವರಿಗೆ ಕೋವಿಡ್ ಪಾಸಿಟಿವ್ ಬಂದಿದ್ದರಿಂದ 10 ದಿನ ಪ್ರತ್ಯೇಕವಾಗಿ ವಾಸವಾಗಿದ್ದರು.