ರಾಯಪುರ (ಛತ್ತೀಸ್ ಘಡ): ಇಲ್ಲಿನ ಬಲ್ಬೀರ್ ಸಿಂಗ್ ಜುನೇಜಾ ಕ್ರೀಡಾಂಗಣದಲ್ಲಿ ನಡೆದ ಜಂಗಲ್ ರಂಬಲ್ ಬಾಕ್ಸಿಂಗ್ ಪಂದ್ಯದಲ್ಲಿ ಭಾರತದ ಸ್ಟಾರ್ ಬಾಕ್ಸರ್ ವಿಜೇಂದರ್ ಸಿಂಗ್ ಅವರು ಘಾನಾದ ಎಲಿಯಾಸು ಸುಲೆ ಅವರನ್ನು ಪರಾಭವಗೊಳಿಸಿದ್ದಾರೆ. ವಿಜೇಂದರ್ ಸಿಂಗ್ ಅವರ ಹೊಡೆತ ತಡೆಯಲಾರದೇ ಘಾನಾದ ಬಾಕ್ಸರ್ ನೆಲಕಚ್ಚಿದ್ದಾರೆ. ಜಂಗಲ್ ರಂಬಲ್ ಬಾಕ್ಸಿಂಗ್ ಪಂದ್ಯಾಟವನ್ನು ಪರ್ಪಲ್ ಗೋಟ್ ಸ್ಪೋರ್ಟ್ಸ್‌ಟೈನ್‌ಮೆಂಟ್ ಎಲ್‌ಎಲ್‌ಪಿ ಸಂಸ್ಥೆ ಆಯೋಜಿಸಿತ್ತು. ಈ ಇಬ್ಬರು ಕಾಳಗವನ್ನು ನೋಡಲು ಹಲವೆಡೆಯಿಂದ ಜನರು ಆಗಮಿಸಿದ್ದರು.
ರಾಯಪುರ ಜಂಗಲ್ ರಂಬಲ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಗೆದ್ದ ಬಾಕ್ಸರ್ ವಿಜೇಂದರ್ ಸಿಂಗ್ - ಬಾಕ್ಸರ್ ವಿಜೇಂದರ್ ಸಿಂಗ್
ರಾಯಪುರದ ಬಲ್ಬೀರ್ ಸಿಂಗ್ ಜುನೇಜಾ ಸ್ಟೇಡಿಯಂನಲ್ಲಿ ನಡೆದ ಜಂಗಲ್ ರಂಬಲ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾರತದ ಬಾಕ್ಸರ್ ವಿಜೇಂದರ್ ಸಿಂಗ್ ಘಾನಾದ ಎಲಿಯಾಸು ಸುಲೆ ಅವರನ್ನು ಪರಾಭವಗೊಳಿಸಿದ್ದಾರೆ.
ರಾಯಪುರ ಜಂಗಲ್ ರಂಬಲ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಗೆದ್ದ ಬಾಕ್ಸರ್ ವಿಜೇಂದರ್ ಸಿಂಗ್
ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದ ಪಂದ್ಯ: ಈ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾರತದ ವೃತ್ತಿಪರ ಬಾಕ್ಸರ್ ವಿಜೇಂದರ್ ಸಿಂಗ್ ಮತ್ತು ಘಾನಾದ ಎಲಿಯಾಸು ಸುಲೆ ನಡುವಿನ ಪಂದ್ಯ ಎಲ್ಲರಲ್ಲಿ ಕುತೂಹಲವನ್ನು ಉಂಟು ಮಾಡಿತ್ತು. ಈ ಪಂದ್ಯಾಟದ ಕೊನೆಯ ಪಂದ್ಯದಲ್ಲಿ ವಿಜೇಂದರ್ ಸಿಂಗ್ ಅವರು ಎಲಿಯಾಸು ಅವರನ್ನು ಕೇವಲ 2 ನಿಮಿಷ ಮತ್ತು 17 ಸೆಕೆಂಡುಗಳಲ್ಲಿ ಮಣಿಸಿದರು. ವಿಜೇಂದರ್ ಅವರನ್ನು ಸಿಎಂ ಭೂಪೇಶ್ ಬಘೇಲ್ ಅಭಿನಂದಿಸಿದ್ದಾರೆ.
ಇದನ್ನೂ ಓದಿ :ವೇಟ್‌ಲಿಫ್ಟಿಂಗ್ ಕೌಶಲ್ಯ ಪ್ರದರ್ಶಿಸಿದ ವಿರಾಟ್: ಏಷ್ಯಾಕಪ್ಗೆ ಭರ್ಜರಿ ತಯಾರಿ