ಕರ್ನಾಟಕ

karnataka

ETV Bharat / bharat

ಹೊಸ ವರ್ಷದಂದು ಗಲ್ವಾನ್​ ವ್ಯಾಲಿಯಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಭಾರತೀಯ ಸೇನೆ - Indian Army unfurled the Tricolour

ಗಲ್ವಾನ್​ ಕಣಿವೆಯಲ್ಲಿ ಈ ಹಿಂದಿನಿಂದಲೂ ಭಾರತ-ಚೀನಾ ಯೋಧರ ನಡುವೆ ಜಟಾಪಟಿ ನಡೆಯುತ್ತಿದೆ. ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ಯೋಧರು ಈ ಪ್ರದೇಶದಲ್ಲಿ ತ್ರಿವರ್ಣ ಧ್ವಜ ಹಾರಿಸಿ, ಈ ನೆಲ ನಮ್ಮದೇ ಎಂದು ಎದುರಾಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಅಂದಹಾಗೆ, ಗಲ್ವಾನ್‌ ಪ್ರದೇಶದಲ್ಲಿ ಭಾರತ-ಚೀನಾ ಯೋಧರ ನಡುವೆ ನಡೆದ ಬಡಿದಾಟದ ಸ್ಥಳದಿಂದ 1.2 ಕಿಲೋಮೀಟರ್ ದೂರದಲ್ಲಿ ಭಾರತೀಯ ಯೋಧರು ಧ್ವಜ ಹಾರಿಸಿದ್ದಾರೆ ಎಂದು ತಿಳಿದು ಬಂದಿದೆ..

national flag in Galwan valley
national flag in Galwan valley

By

Published : Jan 4, 2022, 5:07 PM IST

ನವದೆಹಲಿ :ಹೊಸ ವರ್ಷದಂದು ಗಲ್ವಾನ್​ ವ್ಯಾಲಿಯಲ್ಲಿ ಭಾರತೀಯ ಸೇನೆ ತ್ರಿವರ್ಣ ಧ್ವಜ ಹಾರಿಸಿದೆ. ಇದಕ್ಕೆ ಸಂಬಧಿಸಿದಂತೆ ಸೇನೆ ಫೋಟೋವೊಂದನ್ನ ಬಿಡುಗಡೆ ಮಾಡಿದೆ.

ಸುಮಾರು 30 ಭಾರತೀಯ ಯೋಧರು ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ. ನಾಲ್ವರು ತ್ರಿವರ್ಣ ಧ್ವಜ ಹಿಡಿದುಕೊಂಡಿದ್ದಾರೆ. ಹೊಸ ವರ್ಷದ ಸಂದರ್ಭದಲ್ಲಿ ಗಲ್ವಾನ್ ಕಣಿವೆಯಲ್ಲಿ ಚೀನಾ ಯೋಧರು ತಮ್ಮ ದೇಶದ ಧ್ವಜ ಹಾರಾಟ ನಡೆಸಿದ್ದಾರೆಂದು ಕಾಂಗ್ರೆಸ್​​​ ಪಕ್ಷ ಆರೋಪಿಸಿತ್ತು.

ಇದಕ್ಕೆ ಸ್ಪಷ್ಟನೆ ನೀಡಿರುವ ಭಾರತೀಯ ಸೇನೆ, ಚೀನಾ ಯೋಧರು ತಮ್ಮ ಪ್ರದೇಶದಲ್ಲಷ್ಟೇ ಧ್ವಜ ಹಾರಿಸಿದ್ದಾರೆ ಎಂದು ತಿಳಿಸಿದೆ. ಭಾರತ-ಚೀನಾ ಗಡಿ ವಿವಾದ ನಡೆಯುತ್ತಿರುವ ಗಲ್ವಾನ್​ ನದಿ ಪ್ರದೇಶದಲ್ಲಿ ಚೀನಾ ಸೈನಿಕರು ಧ್ವಜಾರೋಹಣ ಮಾಡಿಲ್ಲ ಎಂದು ತಿಳಿಸಿದೆ.


ಇದನ್ನೂ ಓದಿ:ಮಹಾರಾಷ್ಟ್ರ: ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಬಿದ್ದು ತಾಯಿ, ಮಗು ದುರ್ಮರಣ

ಅರುಣಾಚಲ ಪ್ರದೇಶದ ಕೆಲವು ಪ್ರದೇಶಗಳ ಮರುನಾಮಕರಣ ಮಾಡಲು ಚೀನಾ ಮುಂದಾಗಿದೆ ಎಂದು ಸುದ್ದಿಯಾಗಿತ್ತು. ಮಾಧ್ಯಮಗಳ ಪ್ರಕಾರ 15 ಸ್ಥಳಗಳಿಗೆ ಚೀನಾ ಹೊಸ ಹೆಸರಿಟ್ಟಿದೆ.

ಇದೇ ವಿಚಾರವಾಗಿ ಮಾತನಾಡಿದ್ದ ಕಾಂಗ್ರೆಸ್‌ ಮುಖಂಡ ರಾಹುಲ್​ ಗಾಂಧಿ, ಭಾರತದ ಗಲ್ವಾನ್ ಕಣಿವೆಯಲ್ಲಿ ಚೀನಾ ತನ್ನ ಧ್ವಜ ಹಾರಿಸಿದೆ. ಈ ಬಗ್ಗೆ ಪ್ರಧಾನಿ ಮೋದಿ ಯಾವಾಗ ಮೌನ ಮುರಿಯಲಿದ್ದಾರೆ? ಎಂದು ಪ್ರಶ್ನಿಸಿದ್ದರು.

ABOUT THE AUTHOR

...view details