ನವದೆಹಲಿ: ದೇಶಾದ್ಯಂತ ಚಳಿ ಮೈಕೊರೆಯುತ್ತಿದೆ. ಜನರು ಬೆಚ್ಚಗಿನ ಸ್ವೆಟರ್ ಧರಿಸಿ ಸಂಜೆಯಾಗುತ್ತಿದ್ದಂತೆ ಮನೆ ಸೇರುತ್ತಿದ್ದಾರೆ. ಆದರೆ, ನಮ್ಮ ದೇಶ ಕಾಯುವ ಸೈನಿಕರ ಸ್ಥಿತಿ ಹೇಗಿಗೆ ಗೊತ್ತಾ?. ಒಮ್ಮೆ ಈ ವಿಡಿಯೋ ನೋಡಿ.
ವಿಡಿಯೋ ನೋಡಿ: ಭಾರಿ ಹಿಮಪಾತದ ನಡುವೆಯೂ ಗಸ್ತು ತಿರುಗುತ್ತಿರುವ ನಮ್ಮ ವೀರ ಯೋಧರು - ಹಿಮಾವೃತವಾದ ಗಡಿ ನಿಯಂತ್ರಣ ರೇಖೆ
ಭಾರಿ ಹಿಮಪಾತದ ನಡುವೆಯೇ ಗಸ್ತು ತಿರುಗುತ್ತಿರುವ ನಮ್ಮ ವೀರ ಯೋಧರ ವಿಡಿಯೋ ಇಲ್ಲಿದೆ ನೋಡಿ.
ಹಿಮಪಾತದ ನಡುವೆಯೂ ಗಸ್ತು ತಿರುಗುತ್ತಿರುವ ಯೋಧರು
ಎತ್ತ ನೋಡಿದರು ಹಿಮ ಪರ್ವತಗಳು, ಕಾಲಿಟ್ಟರೆ ಪೂರ್ತಿ ಕಾಲು ಮುಳುಗುವಷ್ಟು ಹಿಮ, ಮೈಮರಗಟ್ಟಿಸುವ ಚಳಿ, ಇದು ಹಿಮಾಲಯಲ್ಲಿ ಸದ್ಯಕ್ಕೆ ಕಂಡು ಬರುತ್ತಿರುವ ದೃಶ್ಯಗಳು.
ಇಂತಹ ಮೈ ಕೊರೆಯುವ ಚಳಿಯ ಪರಿಸ್ಥಿತಿಯಲ್ಲೂ ಕೂಡ ನಮ್ಮ ಗಡಿ ಕಾಯುವ ವೀರ ಯೋಧರು ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಹಿಮಾವೃತವಾದ ನಿಯಂತ್ರಣ ರೇಖೆಯ ಉದ್ದಕ್ಕೂ ಗಸ್ತು ತಿರುಗುತ್ತಾ ಸೇನಾ ಪಡೆ ಗಡಿ ಕಾಯುತ್ತಿದೆ. ಈ ಕುರಿತಾದ ವಿಡಿಯೋ ಇಲ್ಲಿದೆ ನೋಡಿ..
Last Updated : Jan 8, 2022, 12:54 PM IST