ಕರ್ನಾಟಕ

karnataka

ETV Bharat / bharat

ಅರ್ಧ ಶತಮಾನದ ಬಳಿಕ ಮತ್ತೆ ಸೈನಿಕರ ಪಡಿತರದಲ್ಲಿ ರಾಗಿ ಬಳಕೆ - kannada top news

ಗೋಧಿ ಹಿಟ್ಟಿನ ಪರವಾಗಿ ಅರ್ಧ ಶತಮಾನಗಳ ಕಾಲ ನಿಲ್ಲಿಸಿದ್ದ ಸ್ಥಳೀಯ ಮತ್ತು ಸಾಂಪ್ರದಾಯಿಕ ಧಾನ್ಯಗಳನ್ನು ಸೈನಿಕರಿಗೆ ಮತ್ತೆ ಪೂರೈಸಲಾಗುವುದು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

indian-army-to-start-the-use-of-millets-in-troops-ration
ಅರ್ಧ ಶತಮಾನದ ಬಳಿಕ ಮತ್ತೇ ಸೇನೆಯ ಸೈನಿಕರ ಪಡಿತರದಲ್ಲಿ ರಾಗಿ ಬಳಕೆ ಪ್ರಾರಂಭ

By

Published : Mar 22, 2023, 8:42 PM IST

ನವದೆಹಲಿ:ವಿಶ್ವಸಂಸ್ಥೆಯು 2023 ಅನ್ನು ಅಂತಾರಾಷ್ಟ್ರೀಯ ರಾಗಿ ವರ್ಷ ಎಂದು ಘೋಷಿಸುವ ಹಿನ್ನೆಲೆಯಲ್ಲಿ ರಾಗಿ ಸೇವನೆಯನ್ನು ಉತ್ತೇಜಿಸುವ ದೃಷ್ಠಿಯಿಂದ ಭಾರತೀಯ ಸೇನೆಯು ಸೈನಿಕರ ಪಡಿತರದಲ್ಲಿ ರಾಗಿ ಹಿಟ್ಟನ್ನು ಪರಿಚಯಿಸಲು ನಿರ್ಧರಿಸಿದೆ. ಈ ಬಗ್ಗೆ ರಕ್ಷಣಾ ಸಚಿವಾಲಯವು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ.

ಗೋಧಿ ಹಿಟ್ಟಿನ ಪರವಾಗಿ ಅರ್ಧ ಶತಮಾನಗಳ ಕಾಲ ನಿಲ್ಲಿಸಿದ್ದ ಸ್ಥಳೀಯ ಮತ್ತು ಸಾಂಪ್ರದಾಯಿಕ ಧ್ಯಾನಗಳನ್ನು ಸೈನಿಕರಿಗೆ ಮತ್ತೇ ಪೂರೈಸಲಾಗುವುದು ಎಂದು ರಕ್ಷಣಾ ಸಚಿವಾಲಯವು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದೆ.

ಅಭಿವೃದ್ಧಿಶೀಲ ಮತ್ತು ಬಡ ರಾಷ್ಟ್ರಗಳಲ್ಲಿ ಆಘಾತವನ್ನು ಸೃಷ್ಟಿಸಿದ ರಷ್ಯಾ-ಉಕ್ರೇನ್​ ಯುದ್ಧ ಹಿನ್ನೆಲೆಯಲ್ಲಿ ಆಹಾರ ಭದ್ರತೆ ಮತ್ತು ಇಂಧನ ಭದ್ರತೆಯು ಬೆದರಿಕೆಯಾಗಿ ಹೊರಹೊಮ್ಮುತ್ತಿದೆ. ಭದ್ರತಾ ಉಪಕರಣದ ಹೊರತಾಗಿ, ರಾಗಿಗಳ ಪ್ರಚಾರವನ್ನು ಆಹಾರ ಭದ್ರತೆಯನ್ನು ಎದುರಿಸಲು ಪರ್ಯಾಯ ಮಾರ್ಗವಾಗಿ ಅನೇಕರು ವೀಕ್ಷಿಸುತ್ತಿದ್ದಾರೆ. ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿ ಅವರು ರಾಗಿ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಆಹಾರ ಭದ್ರತೆಯನ್ನು ನಿಭಾಯಿಸಲು ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ (ಪಿಡಿಎಸ್​) ಪೋಷಕಾಂಶ ಧಾನ್ಯಗಳನ್ನು ಸೇರಿಸಲು ಕರೆ ನೀಡಿದ್ದರು.

ಅರ್ಧ ಶತಮಾನದ ಬಳಿಕ ಮತ್ತೇ ಸೇನೆಯ ಸೈನಿಕರ ಪಡಿತರದಲ್ಲಿ ರಾಗಿ ಬಳಕೆ

ಇದನ್ನೂ ಓದಿ:ಅಮೆರಿಕದಲ್ಲಿ ವಧು- ವರರು: ಭಾರತದಿಂದ ಆನ್‌ಲೈನ್‌ನಲ್ಲೇ ಜರುಗಿತು ವಿಶಿಷ್ಟ ಮದುವೆ..!

ರಾಗಿ ಈಗ ಎಲ್ಲಾ ಶ್ರೇಣಿಯ ದೈನಂದಿನ ಊಟದ ಅವಿಭಾಜ್ಯ ಅಂಗ: ‘‘ರಾಗಿಯನ್ನು ಯಾವುದೇ ರಸಗೊಬ್ಬರಗಳಿಲ್ಲದೆ ಮತ್ತು ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿ ಬೆಳೆಯಬಹುದಾಗಿದೆ. ಸಾಂಪ್ರದಾಯಿಕ ರಾಗಿ ಆಹಾರಗಳು ಸಾಭೀತಾದ ಆರೋಗ್ಯ ಪ್ರಯೋಜನಗಳೊಂದಿಗೆ ನಮ್ಮ ಭೌಗೋಳಿಕ ಮತ್ತು ಹವಾಮಾನ ಪರಿಸ್ಥಿತಿಗಳಿಗೆ ಸೂಕ್ತವಾದ ಜೀವನಶೈಲಿ ಮತ್ತು ರೋಗಗಳನ್ನು ತಗ್ಗಿಸುವಲ್ಲಿ, ಸೈನಿಕರ ತೃಪ್ತಿ ಮತ್ತು ನೈತಿಕತೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಹಂತವಾಗಿದೆ. ರಾಗಿಗಳು ಈಗ ಎಲ್ಲಾ ಶ್ರೇಣಿಯ ದೈನಂದಿನ ಊಟದ ಅವಿಭಾಜ್ಯ ಅಂಗವಾಗಿದೆ’’ ಎಂದು ರಕ್ಷಣಾ ಸಚಿವಾಲಯವು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ:ಆಹಾರ ಸಚಿವಾಲಯದ ಕ್ಯಾಂಟೀನ್​ ಮೆನುವಿನಲ್ಲಿ ರಾಗಿ ಪದಾರ್ಥ ಆಹಾರ ಇನ್ನು ಕಡ್ಡಾಯ

2023-24 ರಿಂದ ಪ್ರಾರಂಭವಾಗುವ ಸೈನಿಕರಿಗೆ ಪಡಿತರದಲ್ಲಿ ಧಾನ್ಯಗಳ (ಅಕ್ಕಿ ಮತ್ತು ಗೋಧಿ ಹಿಟ್ಟು) ಅಧಿಕೃತ ಅರ್ಹತೆಯ ಶೇಕಡಾ 25 ಕ್ಕಿಂತ ರಾಗಿ ಹಿಟ್ಟನ್ನು ಸಂಗ್ರಹಿಸಲು ಸರ್ಕಾರದ ಅನುಮತಿಯನ್ನು ಕೋರಲಾಗಿದೆ. ರಾಗಿ ಹಿಟ್ಟಿನ ಮೂರು ಜನಪ್ರಿಯ ತಳಿಗಳಾದ ಬಜ್ರಾ, ಜೋಳ ಮತ್ತು ರಾಗಿಯನ್ನು ಆದ್ಯತೆಯನ್ನು ಪರಿಗಣಿಸಿ ಸೇನಾಪಡೆಗಳಿಗೆ ನೀಡಲಾಗುತ್ತದೆ.

ರಾಗಿ ತಿನಿಸುಗಳನ್ನು ತಯಾರಿಸಲು ಬಾಣಸಿಗರಿಗೆ ತರಬೇತಿ: ರಾಗಿಗಳು ಪ್ರೋಟೀನ್‌, ಸೂಕ್ಷ್ಮ ಪೋಷಕಾಂಶಗಳು ಮತ್ತು ಫೈಟೊ-ಕೆಮಿಕಲ್‌ಗಳ ಮೂಲವಾಗಿರುವುದರಿಂದ ಸೈನಿಕರ ಆಹಾರದಲ್ಲಿ ಪೌಷ್ಟಿಕಾಂಶವನ್ನು ಹೆಚ್ಚಿಸುವ ಪ್ರಯೋಜನವನ್ನು ಹೊಂದಿವೆ. ಆರೋಗ್ಯಕರ, ರುಚಿ ಮತ್ತು ಪೌಷ್ಟಿಕ ರಾಗಿ ತಿನಿಸುಗಳನ್ನು ತಯಾರಿಸಲು ಬಾಣಸಿಗರಿಗೆ ಕೇಂದ್ರೀಕೃತ ತರಬೇತಿಯನ್ನು ನೀಡಲಾಗುತ್ತಿದೆ. ಉತ್ತರದ ಗಡಿಗಳಲ್ಲಿ ನಿಯೋಜಿಸಲಾಗಿರುವ ಸೈನಿಕರಿಗೆ ರಾಗಿ ವಸ್ತುಗಳು ಮತ್ತು ತಿಂಡಿಗಳನ್ನು ಪರಿಚಯಿಸಲು ವಿಶೇಷ ಒತ್ತನ್ನು ನೀಡಲಾಗಿದೆ.

ಇದನ್ನೂ ಓದಿ:ದೆಹಲಿ ಸಮೀಪ ಮತ್ತೆ ಭೂಕಂಪನ: ರಿಕ್ಟರ್ ಮಾಪಕದಲ್ಲಿ ಶೇ.2ಕ್ಕಿಂತ ಹೆಚ್ಚು ತೀವ್ರತೆ ದಾಖಲು

ABOUT THE AUTHOR

...view details