ಕರ್ನಾಟಕ

karnataka

ETV Bharat / bharat

ಎರಡು ಆಕಾಶ್ ಪ್ರೈಮ್ ಕ್ಷಿಪಣಿ ವ್ಯವಸ್ಥೆಯ ಎರಡು ರೆಜಿಮೆಂಟ್ ಪಡೆಯಲಿರುವ ಭಾರತೀಯ ಸೇನೆ - Indian Army to get two new regiments

ಆಕಾಶ್ ಪ್ರೈಮ್ ಕ್ಷಿಪಣಿಗಳ ಎರಡು ಹೊಸ ರೆಜಿಮೆಂಟ್‌ಗಳನ್ನು ಭಾರತೀಯ ಸೇನೆ ಪಡೆಯಲಿದೆ ಎಂದು ಸರ್ಕಾರದ ಮೂಲಗಳು ಎಎನ್​ಐಗೆ ಮಾಹಿತಿ ನೀಡಿವೆ.

Indian Army to get two new regiments of Akash Prime air defence missile system
ಎರಡು ಆಕಾಶ್ ಪ್ರೈಮ್ ಕ್ಷಿಪಣಿ ವ್ಯವಸ್ಥೆಯ ಎರಡು ರೆಜಿಮೆಂಟ್ ಪಡೆಯಲಿರುವ ಭಾರತೀಯ ಸೇನೆ

By

Published : May 6, 2022, 7:17 PM IST

Updated : May 6, 2022, 7:55 PM IST

ನವದೆಹಲಿ:ಚೀನಾ ಮತ್ತು ಪಾಕಿಸ್ತಾನವನ್ನು ಎದುರಿಸಲು ಅನೇಕ ರಕ್ಷಣಾ ಕ್ರಮಗಳನ್ನು ಭಾರತ ತೆಗೆದುಕೊಳ್ಳುತ್ತಿದೆ. ಈಗಾಗಲೇ ಆಕಾಶ್ ಪ್ರೈಮ್ ಕ್ಷಿಪಣಿಗಳ ಎರಡು ಹೊಸ ರೆಜಿಮೆಂಟ್‌ಗಳನ್ನು ಖರೀದಿಸಲು ಮುಂದಾಗಿರುವ ಭಾರತೀಯ ಸೇನೆಯು ಶತ್ರು ವಿಮಾನಗಳು ಮತ್ತು ಡ್ರೋನ್‌ಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ಹೆಚ್ಚಿಸಲು ಮೇಕ್ ಇಂಡಿಯಾದ ಸಹಾಯ ಪಡೆಯಲಿದೆ. ಕೇಂದ್ರ ಸರ್ಕಾರದ ಮುಂದೆ ಈ ಪ್ರಸ್ತಾವನೆಯಿದೆ ಎಂದು ಮೂಲಗಳು ಎಎನ್​ಐಗೆ ಮಾಹಿತಿ ನೀಡಿವೆ.

ಭಾರತೀಯ ಸೇನೆಯ ಪಶ್ಚಿಮ ಮತ್ತು ನೈರುತ್ಯ ಕಮಾಂಡ್‌ಗಳು 12 ಆಕಾಶ್ ಕ್ಷಿಪಣಿಗಳ ಪರೀಕ್ಷೆ ನಡೆಸಿದ ಸಂದರ್ಭದಲ್ಲಿ ಇಂತಹ ಬೆಳವಣಿಗೆ ಕಂಡು ಬಂದಿದೆ. ಇತ್ತೀಚಿನ ದಿನಗಳಲ್ಲಿ ಗುಂಡಿನ ದಾಳಿಯ ಬದಲಾಗಿ ಕ್ಷಿಪಣಿಗಳನ್ನು ಬಳಸಲಾಗುತ್ತಿದ್ದು, ಫಲಿತಾಂಶಗಳು ಅತ್ಯುತ್ತಮವಾಗಿವೆ ಎಂದು ಮೂಲಗಳು ತಿಳಿಸಿವೆ.

ಅಸ್ತಿತ್ವದಲ್ಲಿರುವ ಆಕಾಶ್ ಕ್ಷಿಪಣಿಗಳಿಗೆ ಹೋಲಿಸಿದರೆ, ಆಕಾಶ್ ಪ್ರೈಮ್ ಸ್ಥಳೀಯ ಸಕ್ರಿಯ ರೇಡಿಯೊ ಫ್ರೀಕ್ವೆನ್ಸಿಯನ್ನು ನಿಖರತೆಗಾಗಿ ಬಳಸುತ್ತದೆ. ಹೆಚ್ಚಿನ ಎತ್ತರದಲ್ಲಿ ಮತ್ತು ಕಡಿಮೆ-ತಾಪಮಾನ ಇರುವ ಪರಿಸರದಲ್ಲಿ ಹೆಚ್ಚು ವಿಶ್ವಾಸಾರ್ಹ ಕಾರ್ಯಕ್ಷಮತೆಯನ್ನು ಆಕಾಶ್​ ಪ್ರೈಮ್ ಖಚಿತಪಡಿಸುತ್ತದೆ.

ಭಾರತೀಯ ಸೇನೆ ಮತ್ತು ಭಾರತೀಯ ವಾಯುಪಡೆ ಆಕಾಶ್ ಪ್ರೈಮ್ ವ್ಯವಸ್ಥೆಯು ಬಳಕೆ ಮಾಡುತ್ತಿದ್ದು, ರಕ್ಷಣಾ ವ್ಯವಸ್ಥೆಯ ವಿಶ್ವಾಸವನ್ನು ಹೆಚ್ಚಿಸಿದೆ. ಕ್ಷಿಪಣಿಯನ್ನು 4,500 ಮೀಟರ್‌ಗಳಷ್ಟು ಎತ್ತರದಲ್ಲಿ ನಿಯೋಜಿಸಬಹುದಾಗಿದ್ದು, ಸುಮಾರು 25-30 ಕಿಲೋಮೀಟರ್​​ ದೂರದಲ್ಲಿರುವ ಗುರಿಯನ್ನು ನಿಖರವಾಗಿ ಹೊಡೆಯಬಹುದಾಗಿದೆ.

ಇದನ್ನೂ ಓದಿ:ನಾಸಾದ ಹ್ಯೂಮನ್ ಎಕ್ಸ್‌ಪ್ಲೊರೇಶನ್ ರೋವರ್ ಚಾಲೆಂಜ್ ಗೆದ್ದ ಭಾರತೀಯ ವಿದ್ಯಾರ್ಥಿಗಳು

Last Updated : May 6, 2022, 7:55 PM IST

ABOUT THE AUTHOR

...view details