ಕೋಲ್ಕತ್ತಾ(ಪಶ್ಚಿಮ ಬಂಗಾಳ): ಸುಕ್ಮಾದಲ್ಲಿ ಮೂರು ಆನೆಗಳ ಸಾವಿನ ಹೊಣೆಯನ್ನು ಭಾರತೀಯ ಸೇನೆ ಹೊತ್ತುಕೊಂಡಿದೆ. ಮಾರ್ಚ್ 13 ಮತ್ತು 14 ರಂದು ಸುಕ್ಮಾದಲ್ಲಿ ಭಾರತೀಯ ಸೇನೆ ಸಮರಾಭ್ಯಾಸ ನಡೆಸುವ ವೇಳೆ ಮೂರು ಆನೆಗಳು ಸಾವನ್ನಪ್ಪಿದ್ದವು. ಆನೆಗಳ ಸಾವಿಗೆ ಸೇನೆಯು ವಿಷಾದ ವ್ಯಕ್ತಪಡಿಸಿ ಈ ರೀತಿಯ ಘಟನೆಗಳು ಮತ್ತೆ ಸಂಭವಿಸದಂತೆ ನೋಡಿಕೊಳ್ಳಲಾಗುತ್ತದೆ ಎಂದು ತಿಳಿಸಿರುವುದಾಗಿ ಅರಣ್ಯ ಇಲಾಖೆಯ ಮೂಲಗಳು ಬಹಿರಂಗಪಡಿಸಿವೆ.
ಈ ಅಹಿತಕರ ಘಟನೆಯ ಕುರಿತು ಚರ್ಚಿಸಲು ಭಾರತೀಯ ಸೇನೆ ಮತ್ತು ಪಶ್ಚಿಮ ಬಂಗಾಳ ಅರಣ್ಯ ಇಲಾಖೆಯ ಅಧಿಕಾರಿಗಳ ನಡುವೆ ಸುಕ್ನಾದಲ್ಲಿರುವ ವನ್ಯಜೀವಿ ವಾರ್ಡನ್ ಕಚೇರಿ ಮತ್ತು ಪ್ರಕೃತಿ ವ್ಯಾಖ್ಯಾನ ಕೇಂದ್ರದಲ್ಲಿ ಸಭೆ ನಡೆಯಿತು. ಆರ್ಟಿಲರಿಯ ಬ್ರಿಗೇಡಿಯರ್ ಮತ್ತು ಭಾರತೀಯ ಸೇನೆಯನ್ನು ಪ್ರತಿನಿಧಿಸುವ ಇಬ್ಬರು ಕರ್ನಲ್‌ಗಳು ಮತ್ತು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ರಾಜೇಂದ್ರ ಜಖರ್, ಪ್ರಧಾನ ಮುಖ್ಯ ಅರಣ್ಯಾಧಿಕಾರಿ (ಉತ್ತರ ಬಂಗಾಳ) ಉಜ್ಜಲ್ ಘೋಷ್ ಮತ್ತು ಪಶ್ಚಿಮ ಬಂಗಾಳ ಅರಣ್ಯ ಇಲಾಖೆಯಿಂದ ಮುಖ್ಯ ಅರಣ್ಯಾಧಿಕಾರಿ ಎಸ್‌ಕೆ ಮೋಲ್ ಭಾಗವಹಿಸಿದ್ದರು. ಈ ಸಭೆಯಲ್ಲಿ ಸೇನಾ ಅಧಿಕಾರಿಗಳು ಆನೆಗಳ ಸಾವಿನ ಹೊಣೆ ಹೊತ್ತುಕೊಂಡು, ಕ್ಷಮೆಯಾಚಿಸಿದ್ದಾರೆ.
ಪಶ್ಚಿಮ ಬಂಗಾಳ ರಾಜ್ಯದ ಅರಣ್ಯ ಸಚಿವೆ ಜ್ಯೋತಿಪ್ರಿಯಾ ಮಲ್ಲಿಕ್ ಮಾತನಾಡಿ, ಬೈಕುಂಠಪುರ ಅರಣ್ಯದಲ್ಲಿ ಆನೆಗಳ ಮೂರು ಮೃತದೇಹಗಳು ಪತ್ತೆಯಾಗಿವೆ, ಮಾರ್ಚ್ 13 ಮತ್ತು 14 ರಂದು ಈ ಪ್ರದೇಶದಲ್ಲಿ ಆರ್ಮಿ ಡ್ರಿಲ್ ನಡೆಯುತ್ತಿತ್ತು. ಆನೆಗಳ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಅವುಗಳ ದೇಹದಲ್ಲಿ ಗುಂಡುಗಳನ್ನು ಪತ್ತೆಯಾಗಿದ್ದವು ಎಂದು ತಿಳಿಸಿದೆ. ಆನೆಗಳು, ವನ್ಯಜೀವಿಗಳಿಗೆ ಹಾನಿಯಾಗದಂತೆ ನೋಡಿಕೊಳ್ಳಲು ಅರಣ್ಯ ಪ್ರದೇಶಗಳಲ್ಲಿ ಡ್ರಿಲ್‌ಗಳನ್ನು ನಡೆಸುವುದನ್ನು ನಿಲ್ಲಿಸುವಂತೆ ನಾವು ಭಾರತೀಯ ಸೇನೆಯ ಅಧಿಕಾರಿಗಳನ್ನು ಕೇಳಿದ್ದೇವೆ. ಅರಣ್ಯ ಇಲಾಖೆಯು ಫೈರಿಂಗ್ ರೇಂಜ್ ಅನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಸೇನೆಗೆ ಮನವಿ ಮಾಡಿದ್ದೇವೆ ಎಂದರು.