ಅಖ್ನೂರ್(ಜಮ್ಮು& ಕಾಶ್ಮೀರ):ಇಲ್ಲಿನಅಖ್ನೂರ್ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಕರ್ತವ್ಯಕ್ಕೆ ನಿಯೋಜಿಸಲಾಗಿರುವ ಭಾರತೀಯ ಸೇನಾ ಯೋಧರು ಪಟಾಕಿ ಸಿಡಿಸಿ, ದೀಪಗಳನ್ನು ಬೆಳಗಿಸುವ ಮೂಲಕ ಬೆಳಕಿನ ಹಬ್ಬವನ್ನು ಸಂಭ್ರಮದಿಂದ ಬರಮಾಡಿಕೊಂಡರು.
ದೇಶವಾಸಿಗಳಿಗೆ ಆತಂಕ ಬೇಡ. ಹಬ್ಬವನ್ನು ಸಂಭ್ರಮದಿಂದ ಆಚರಿಸಿ ಎಂದು ಈ ಸಂದರ್ಭದಲ್ಲಿ ಯೋಧರೊಬ್ಬರು ಹೇಳಿದರು. ಕರ್ನಲ್ ಇಕ್ಬಾಲ್ ಸಿಂಗ್ ಎಲ್ಲರಿಗೂ ದೀಪಾವಳಿಯ ಶುಭಾಶಯ ಕೋರಿದರು.
ಗಡಿಯಲ್ಲಿ ದೀಪ ಬೆಳಗಿ ದೀಪಾವಳಿ ಆಚರಿಸಿದ ಯೋಧರು ಕೋವಿಡ್ ಸಾಂಕ್ರಾಮಿಕದ ಎರಡು ವರ್ಷಗಳ ತರುವಾಯ ದೀಪಗಳ ಹಬ್ಬ ದೀಪಾವಳಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ದೇಶದ ಜನರು ಹಾತೊರೆಯುತ್ತಿದ್ದಾರೆ.
ಶ್ರೀರಾಮನು ರಾವಣನನ್ನು ಸಂಹರಿಸಿ 14 ವರ್ಷಗಳ ವನವಾಸ ಕಳೆದ ನಂತರ ದೀಪಾವಳಿಯಂದು ಅಯೋಧ್ಯೆಗೆ ಹಿಂದಿರುಗಿದ್ದ ಎಂದು ಹಿಂದೂ ಪುರಾಣಗಳು ಹೇಳುತ್ತವೆ. ಹಬ್ಬದ ಅಂಗವಾಗಿ ಜನರು ಲಕ್ಷ್ಮಿ, ಗಣೇಶ ಮತ್ತು ಕುಬೇರನಿಗೆ ಆರೋಗ್ಯ, ಸಂಪತ್ತು ಮತ್ತು ಸಮೃದ್ಧಿ ಒದಗಿಸುವಂತೆ ಪ್ರಾರ್ಥಿಸುತ್ತಾರೆ.
ಇದನ್ನೂ ಓದಿ:ದೀಪಾವಳಿ ಸಂಭ್ರಮಾಚರಣೆಯ 'ಅರ್ಥ'.. ಹಬ್ಬ ತಿಳಿಸುವ ಆರ್ಥಿಕ ದೂರದೃಷ್ಟಿಯ ಪಾಠವಿದು