ಅಸ್ಸೋಂ: ಭಾರತ-ಚೀನಾ ಗಡಿಯ ಸಮೀಪವಿರುವ ನಾಥು ಲಾ-ಗ್ಯಾಂಗ್ಟಾಕ್ ರಸ್ತೆಯಲ್ಲಿ ಹಿಮಪಾತದಲ್ಲಿ ಸಿಲುಕಿದ್ದ ಸುಮಾರು 447 ಪ್ರವಾಸಿಗರನ್ನು ಭಾರತೀಯ ಸೇನೆ ಸೈನಿಕರು ರಕ್ಷಿಸಿದ್ದಾರೆ.
ಭಾರೀ ಹಿಮಪಾತ.. 447 ಪ್ರವಾಸಿಗರನ್ನು ರಕ್ಷಿಸಿದ ಭಾರತೀಯ ಸೇನೆ - 447 ಪ್ರವಾಸಿಗರನ್ನು ರಕ್ಷಿಸಿದ ಭಾರತೀಯ ಸೇನೆ
26 ಮಂದಿಗೆ ವೈದ್ಯಕೀಯ ನೆರವು ಅಗತ್ಯವಿದ್ದ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತು ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ..
INDIAN ARMY
ನಿನ್ನೆ ಭಾರೀ ಹಿಮಪಾತವಾದ ಹಿನ್ನೆಲೆ ಪ್ರವಾಸಿಗರು ನಾಥು ಲಾ-ಗ್ಯಾಂಗ್ಟಾಕ್ ರಸ್ತೆಯಲ್ಲಿ ಸಿಲುಕಿದ್ದರು. ವಿಷಯ ತಿಳಿದ ಸೈನಿಕರು ಪ್ರವಾಸಿಗರನ್ನು ರಕ್ಷಿಸಿ, ಸೇನಾ ವಾಹನಗಳಲ್ಲಿ ಕರೆತಂದು ಮಿಲಿಟರಿ ಕ್ಯಾಂಪ್‌ನ ಬ್ಯಾರಕ್‌ಗಳ ಒಳಗೆ ಬಿಟ್ಟಿದ್ದಾರೆ.
ಇನ್ನು, ಎಲ್ಲಾ ಪ್ರವಾಸಿಗರಿಗೆ ಆಹಾರ, ವೈದ್ಯಕೀಯ, ವಸತಿ ವ್ಯವಸ್ಥೆ ಒದಗಿಸಲಾಗಿದೆ. 26 ಮಂದಿಗೆ ವೈದ್ಯಕೀಯ ನೆರವು ಅಗತ್ಯವಿದ್ದ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತು ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.