ಶಾಲೆ ಮತ್ತು ಕಾಲೇಜು ಹಂತದಲ್ಲಿ ಎನ್ಸಿಸಿ (ನ್ಯಾಷನಲ್ ಕ್ರೆಡಿಟ್ ಕಾರ್ಪ್) ಆದ ಅಭ್ಯರ್ಥಿಗಳಿಗೆ ಭಾರತೀಯ ಸೇನೆಯಲ್ಲಿ ವಿಶೇಷ ಮಾನ್ಯತೆ ನೀಡಲಾಗಿದೆ. ಈ ಅಭ್ಯರ್ಥಿಗಳು ಸೇನೆಯ ಕೆಲವು ಶಿಸ್ತುಗಳನ್ನು ಕಲಿತಿರುವ ಹಿನ್ನೆಲೆ ಭಾರತೀಯ ಸೇನಾ ನೇಮಕಾತಿಯಲ್ಲಿ ಇವರಿಗಾಗಿ ವಿಶೇಷ ನೇಮಕಾತಿಯನ್ನು ನಡೆಸಲಾಗುವುದು. ಅದರ ಅನುಸಾರ ಇದೀಗ ಭಾರತೀಯ ಸೇನೆ ಎನ್ಸಿಸಿ ವಿಶೇಷ ಪ್ರವೇಶ ಯೋಜನೆ ಅಡಿ ಈ ಅಭ್ಯರ್ಥಿಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆ ವಿವರ: ಎನ್ಸಿಸಿ ವಿಶೇಷ ಪ್ರವೇಶಾತಿ ಯೋಜನೆ ಅಡಿ ಭಾರತೀಯ ಸೇನೆಯಲ್ಲಿ ದೇಶಾದ್ಯಂತ ಈ ನೇಮಕಾತಿ ನಡೆಯಲಿದ್ದು, ಒಟ್ಟು 55 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಇದರಲ್ಲಿ ಪುರುಷ ಅಭ್ಯರ್ಥಿಗಳಿಗೆ 50 ಸ್ಥಾನ ಮೀಸಲಿರಿಸಲಾಗಿದ್ದು, ಮಹಿಳಾ ಅಭ್ಯರ್ಥಿಗಳಿಗೆ 5 ಸ್ಥಾನ ಮೀಸಲಿರಿಸಲಾಗಿದೆ.
ವಿದ್ಯಾರ್ಹತೆ:ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಪದವಿಯನ್ನು ಪೂರ್ಣಗೊಳಿಸಿರಬೇಕು. ಈ ಅಭ್ಯರ್ಥಿಗಳು ಎನ್ಸಿಸಿಯಲ್ಲಿ ಕನಿಷ್ಠ ಎರಡು ಅಥಭಾ ಮೂರು ವರ್ಷದ ಎನ್ಸಿಸಿ ಪ್ರಮಾಣ ಪತ್ರವನ್ನು ಹೊಂದಿರಬೇಕು. ಅಂತಿಮ ಪದವಿ ಹಂತದ ವಿದ್ಯಾರ್ಥಿಗಳು ಸಹ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಅಭ್ಯರ್ಥಿಗಳ ವಯೋಮಿತಿ ಕನಿಷ್ಠ 19ರಿಂದ ಜನವರಿ 1, 2024ಕ್ಕೆ ಅವರ ಗರಿಷ್ಠ ವಯೋಮಿತಿ 25 ವರ್ಷ ಮೀರಿರಬಾರದು. ವಯೋಮಿತಿ ಸಡಿಲಿಕೆಯಿದ್ದು ಭಾರತೀಯ ಸೇನೆ ಇಲಾಖೆ ನಿಯಮದಂತೆ ನಡೆಸಲಾಗುವುದು.