ಕರ್ನಾಟಕ

karnataka

ETV Bharat / bharat

ಭಾರತೀಯ ಸೇನೆಗೆ 1,750 ಯುದ್ಧ ಟ್ಯಾಂಕರ್ ಸೇರ್ಪಡೆ - ಲಡಾಖ್​​ ಘರ್ಷಣೆ

ಮೇಕ್​ ಇನ್ ಇಂಡಿಯಾ ಯೋಜನೆ ಸಾಕಾರಗೊಳಿಸುವ ನಿಟ್ಟಿನಲ್ಲೀಗ ಭಾರತೀಯ ಸೇನೆಗೆ ಲೈಟ್ ಟ್ಯಾಂಕರ್​​ಗಳು ಸೇರ್ಪಡೆಗೊಳ್ಳುತ್ತಿವೆ. ಒಟ್ಟು 1,750 ಟ್ಯಾಂಕರ್ ಸೇನೆಗೆ ಸೇರ್ಪಡೆಯಾಗುತ್ತಿದ್ದು, ಲಡಾಖ್​​ನಲ್ಲಿ ಕಾರ್ಯಾಚರಣೆಗೆ ನಿಯೋಜನೆಗೊಳ್ಳಲಿವೆ.

indian-army-plans-to-buy-1750-futuristic-infantry-combat-vehicles-350-light-tanks
ಭಾರತೀಯ ಸೇನೆಗೆ 1,750 ಯುದ್ಧ ಟ್ಯಾಂಕರ್ ಸೇರ್ಪಡೆ

By

Published : Jun 24, 2021, 7:44 PM IST

ನವದೆಹಲಿ: ಶತ್ರು ಟ್ಯಾಂಕರುಗಳನ್ನು ಹೊಡೆದುರುಳಿಸಲು ಮತ್ತು ಸೇನಾ ಸಿಬ್ಬಂದಿ ಹೊತ್ತೊಯ್ಯಲು ಮೇಕ್ ಇನ್ ಇಂಡಿಯಾ ಉಪಕ್ರಮದಡಿಯಲ್ಲಿ ಒಟ್ಟು 1,750 ಫ್ಯೂಚರಿಸ್ಟಿಕ್ ಇನ್​​ಫ್ಯಾಂಟರಿ ಕಾಂಬ್ಯಾಟ್ ವೆಹಿಕಲ್​ (ಎಫ್​​​ಐಸಿವಿ) ಖರೀದಿಗೆ ಸರ್ಕಾರ ನಿರ್ಧರಿಸಿದೆ. ಈ ಯುದ್ಧ ವಾಹನಗಳನ್ನು ಲಡಾಖ್​​​​ನಂತಹ ಭೂಮಿಯಲ್ಲಿ ನಿಯೋಜಿಸಲು ಯೋಚಿಸಲಾಗಿದೆ ಎಂದು ಭಾರತೀಯ ಸೇನೆ ತಿಳಿಸಿದೆ.

ಇದಲ್ಲದೆ ಕಾರ್ಯಕ್ಷಮತೆ ಆಧಾರಿತ ಲಾಜಿಸ್ಟಿಕ್ಸ್, ಸ್ಥಾಪಿತ ತಂತ್ರಜ್ಞಾನಗಳು, ಇಂಜಿನಿಯರಿಂಗ್ ಬೆಂಬಲ ಪ್ಯಾಕೇಜ್ ಮತ್ತು ಇತರ ನಿರ್ವಹಣೆ ಮತ್ತು ತರಬೇತಿ ಅವಶ್ಯಕತೆಗಳ ಜೊತೆಗೆ ಹಂತ ಹಂತವಾಗಿ 350 ಲೈಟ್ ಟ್ಯಾಂಕ್‌ಗಳನ್ನು ಸೇನೆಗೆ ಸೇರಿಸಲು ಭಾರತೀಯ ಸೇನೆ ಮುಂದಾಗಿದೆ. 350 ಲೈಟ್ ಟ್ಯಾಂಕರ್​​​​ಗಳ ಖರೀದಿಗೆ ಈಗಾಗಲೇ ಸಿದ್ಧತೆ ನಡೆದಿದೆ. ಇವು ಟ್ಯಾಂಕ್ ಬಸ್ಟಿಂಗ್ ಸಾಮರ್ಥ್ಯ ಹೊಂದಿರುವ ಯುದ್ಧ ವಾಹನಗಳಾಗಿವೆ ಎಂದು ಸೇನೆ ಮಾಹಿತಿ ನೀಡಿದೆ.

25 ಟನ್‌ಗಿಂತ ಕಡಿಮೆ ತೂಕವಿರುವ ಟ್ಯಾಂಕ್‌ಗಳನ್ನು ಹೈ ಆಲ್ಟಿಟ್ಯೂಡ್ ಏರಿಯಾ (ಎಚ್‌ಎಎ), ಫ್ರಾಂಟಿಯರ್ ಏರಿಯಾ ಸೇರಿ ನೀರು ಮತ್ತು ನೆಲದ ಮೇಲೂ ಕಾರ್ಯ ನಿರ್ವಹಿಸಲಿದೆ ಎಂದು ಸೇನೆ ತಿಳಿಸಿದೆ. ಇತ್ತೀಚಿಗಿನ ಲಡಾಖ್​​ ಘರ್ಷಣೆಯ ನಂತರ ಇಂತಹ ಲೈಟ್ ಟ್ಯಾಂಕರ್​​​ಗಳ ಅಗತ್ಯತೆ ಬಗ್ಗೆ ಸೇನೆ ಪ್ರಸ್ತಾಪವಿರಿಸಿತ್ತು. ಇದೀಗ ಸೇನೆಗೆ ಟ್ಯಾಂಕರ್​​​​​​ಗಳ ಸೇರ್ಪಡೆಯಿಂದಾಗಿ ಇನ್ನಷ್ಟು ಬಲ ಬರಲಿದೆ.

ಇದನ್ನೂ ಓದಿ:ಕಾಲು ಕಳೆದುಕೊಂಡ ಮಗನನ್ನು ಪೊಲೀಸ್​ ಠಾಣೆ ಸುತ್ತಿಸಿ ನ್ಯಾಯ ಕೇಳಿದ ತಾಯಿ! Video

ABOUT THE AUTHOR

...view details