ಹೈದರಾಬಾದ್:ಮೂರು ವಾರಗಳರಜೆ ಮುಗಿಸಿ ಸೇನೆಗೆ ವಾಪಸ್ ಆಗಲು ಮನೆಯಿಂದ ಹೊರಟಿದ್ದ ತೆಲಂಗಾಣ ಮೂಲದ ಯೋಧ ನಾಪತ್ತೆಯಾಗಿರುವ ಆರೋಪ ಕೇಳಿಬಂದಿದೆ. ಸಿದ್ದಿಪೇಟ್ ಜಿಲ್ಲೆಯ ಪೋತಿರೆಡ್ಡಿಪಲ್ಲಿ ಸಾಯಿ ಕಿರಣ್ ರೆಡ್ಡಿ ನಾಪತ್ತೆಯಾಗಿರುವ ಯೋಧ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಯಿ ಕಿರಣ್ ರೆಡ್ಡಿ ನವೆಂಬರ್ 16 ರಿಂದ ಮೂರು ವಾರಗಳ ರಜೆ ಮುಗಿಸಿ ನಂತರ ಕುಟುಂಬದರಿಗೆ ಪಂಜಾಬ್ ಗಡಿಯಲ್ಲಿ ಕರ್ತವ್ಯಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿ ಹೋಗಿದ್ದಾರೆ. ಆದರೆ ಡಿಸೆಂಬರ್ 5 ರಂದು ಪಂಜಾಬ್‌ಗೆ ತೆರಳಿದ್ದರೂ, ಕರ್ತವ್ಯದ ಸ್ಥಳಕ್ಕೆ ತಲುಪಲಿಲ್ಲ. ಇದನ್ನು ಸೇನೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಹತ್ತುವಾಗ ಕೊನೆಯದಾಗಿ ವಾಟ್ಸ್ಆ್ಯಪ್ ಕರೆ ಮೂಲಕ ತಮ್ಮೊಂದಿಗೆ ಮಾತನಾಡಿಸಿದ್ದರು ಎಂದು ರೆಡ್ಡಿ ಕುಟುಂಬಸ್ಥರು ಹೇಳಿದ್ದಾರೆ. ಆದರೆ, ಇದಾದ ಬಳಿಕ 4 ದಿನಗಳ ಕಾಲ ಆತನ ಫೋನ್ ಸ್ವಿಚ್ಡ್ ಆಫ್ ಆಗಿದ್ದು, ಆತ ಎಲ್ಲಿದ್ದಾನೆ ಎಂಬ ಆತಂಕ ಶುರುವಾಗಿದೆ.