ನವದೆಹಲಿ:ಭಾರತೀಯ ಸೇನೆಯ ಆಯ್ಕೆ ಮಂಡಳಿ ಐವರು ಮಹಿಳಾ ಅಧಿಕಾರಿಗಳಿಗೆ ಕರ್ನಲ್ (ಟೈಮ್ ಸ್ಕೇಲ್) ಶ್ರೇಣಿಗೆ ಬಡ್ತಿ ನೀಡಿದೆ. 26 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ಐವರು ಮಹಿಳಾ ಅಧಿಕಾರಿಗಳಿಗೆ ಬಡ್ತಿ ನೀಡಿದೆ.
ಇದೇ ಮೊದಲ ಬಾರಿಗೆ ಸಂಕೇತ ದಳ, ಎಲೆಕ್ಟ್ರಾನಿಕ್ಸ್ ಮತ್ತು ಮೆಕ್ಯಾನಿಕಲ್ ಇಂಜಿನಿಯರ್‌ಗಳ ವಿಭಾಗ, ಇಂಜಿನಿಯರ್‌ಗಳ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳಾ ಅಧಿಕಾರಿಗಳನ್ನು ಕರ್ನಲ್ ಹುದ್ದೆಗೆ ಅನುಮೋದಿಸಲಾಗಿದೆ.
ಈ ಹಿಂದೆ ಕೇವಲ ವೈದ್ಯಕೀಯ ದಳ, ಜಡ್ಜ್ ಅಡ್ವೋಕೇಟ್ ಜನರಲ್ ಮತ್ತು ಸೇನಾ ಶಿಕ್ಷಣ ದಳದಲ್ಲಿದ್ದ ಮಹಿಳಾ ಅಧಿಕಾರಿಗಳಿಗೆ ಮಾತ್ರ ಕರ್ನಲ್ ಹುದ್ದೆಗೆ ಬಡ್ತಿ ನೀಡಲಾಗುತ್ತಿತ್ತು. ಇದೀಗ ಐವರು ಮಹಿಳಾ ಅಧಿಕಾರಿಗಳಿಗೆ ಕರ್ನಲ್ ಹುದ್ದೆಗೆ ಬಡ್ತಿ ನೀಡುವ ಮೂಲಕ ಸೇನೆಯಲ್ಲಿ ಮಹಿಳೆಯರಿಗೆ ವೃತ್ತಿ ಅವಕಾಶಗಳನ್ನು ವಿಸ್ತರಿಸಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಓದಿ: Watch : ತಾಯಿಯಿಂದ ಬೇರ್ಪಟ್ಟ 2 ತಿಂಗಳ ಅಫ್ಘನ್ ಮಗುವನ್ನ ಪೋಷಿಸುತ್ತಿರುವ ಟರ್ಕಿಶ್ ಸೈನಿಕರು..