ಕರ್ನಾಟಕ

karnataka

ETV Bharat / bharat

ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಗುಂಡೇಟಿಗೆ ಬಲಿಯಾದ ಸೇನಾ ಶ್ವಾನ; ಅಂತಿಮ ವಿದಾಯ

ಉಗ್ರ ದಮನ ಕಾರ್ಯಾಚರಣೆಯ ವೇಳೆ ಗುಂಡೇಟಿಗೆ ಮೃತಪಟ್ಟ ಸೇನಾ ಶ್ವಾನ ಅಕ್ಸೆಲ್​ಗೆ ಇಂದು ಅಂತಿಮ ವಿಧಿವಿಧಾನಗಳೊಂದಿಗೆ ಬೀಳ್ಕೊಡಲಾಯಿತು.

indian-armys-dog-axel-lost-its-life
ಗುಂಡೇಟಿಗೆ ಮೃತಪಟ್ಟ ಸೇನಾ ಶ್ವಾನ ಅಕ್ಸೆಲ್​ಗೆ ಅಂತಿಮ ವಿದಾಯ

By

Published : Jul 31, 2022, 1:42 PM IST

ನವದೆಹಲಿ:ಜಮ್ಮು ಕಾಶ್ಮೀರದಲ್ಲಿ ನಡೆದ ಉಗ್ರ ದಮನ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾಗ ಗುಂಡು ತಗುಲಿ ತೀವ್ರ ಗಾಯಗೊಂಡ ಭಾರತೀಯ ಸೇನೆಯ ಶ್ವಾನ "ಅಕ್ಸೆಲ್​" ತನ್ನ ಉಸಿರು ನಿಲ್ಲಿಸಿದೆ. ಸೇನೆಯ ತುಕಡಿಯಿಂದ ಸಕಲ ಗೌರವಗಳೊಂದಿಗೆ ಇಂದು ಅಂತಿಮ ನಮನ ಸಲ್ಲಿಸಿ ಬೀಳ್ಕೊಡಲಾಯಿತು.

ಬಾರಾಮುಲ್ಲಾದಲ್ಲಿ ನಿನ್ನೆ ಉಗ್ರರು ಅಡಗಿದ್ದ ಪ್ರದೇಶದ ಮೇಲೆ ಭದ್ರತಾ ಪಡೆಗಳು ದಾಳಿ ಮಾಡಿದ್ದವು. ಕಾರ್ಯಾಚರಣೆಯಲ್ಲಿ ಶ್ವಾನ ಅಕ್ಸೆಲ್​ ಉಗ್ರರ ಪತ್ತೆ ಕಾರ್ಯ ನಡೆಸುತ್ತಿತ್ತು. ಈ ವೇಳೆ ಉಗ್ರರ ಗುಂಡಿನ ದಾಳಿಗೀಡಾಗಿ ಸಾವನ್ನಪ್ಪಿದೆ.

ವೈದ್ಯಕೀಯ ಪರೀಕ್ಷೆಯ ವೇಳೆ ತಲೆ, ದೇಹದಲ್ಲಿ ಮೂರು ಗುಂಡುಗಳು ಹೊಕ್ಕಿದ್ದು ಕಂಡುಬಂದಿದೆ. 10 ಕ್ಕೂ ಹೆಚ್ಚು ಕಡೆ ಗಾಯವಾಗಿತ್ತು. ಎಲುಬು ಮುರಿದಿದ್ದು ಗೊತ್ತಾಗಿತ್ತು. ಅಕ್ಸೆಲ್​ನನ್ನು ಕೆಲ ದಿನಗಳ ಹಿಂದಷ್ಟೇ ಬಾರಾಮುಲ್ಲಾ ಪ್ರದೇಶದಲ್ಲಿ ಉಗ್ರರ ಪತ್ತೆ ಕಾರ್ಯಾಚರಣೆಗೆ ನಿಯೋಜಿಸಲಾಗಿತ್ತು. ಇದಕ್ಕಾಗಿ ಕಠಿಣ ತರಬೇತಿ ನೀಡಲಾಗಿತ್ತು. ಆಕ್ಸೆಲ್ ಈ ಮೊದಲು ಹಲವು ಯಶಸ್ವಿ ಕಾರ್ಯಾಚರಣೆಗಳ ಭಾಗವಾಗಿತ್ತು. ಸಮರ್ಥ ಆಕ್ರಮಣಕಾರಿ ಸೇನಾ ನಾಯಿಯಾಗಿತ್ತು.

ಇದನ್ನೂ ಓದಿ:ಚೆಸ್‌ ಬೋರ್ಡ್‌ ಮೇಲೆ ಕಾಯಿಗಳ ರಣೋತ್ಸಾಹದ ನೃತ್ಯ, ಈ ವಿಡಿಯೋ ನೋಡಿ!

ABOUT THE AUTHOR

...view details