ನವದೆಹಲಿ: ಸದಾ ಒಂದಿಲ್ಲೊಂದು ಕಾರಣವನ್ನಿಟ್ಟುಕೊಂಡು ಭಾರತದೊಂದಿಗೆ ಅರುಣಾಚಲ ಪ್ರದೇಶದ ಗಡಿಯಲ್ಲಿ ಕ್ಯಾತೆ ತೆಗೆಯುವ ಚೀನಾಗೆ ತಿರುಗೇಟು ನೀಡಲು ಭಾರತೀಯ ಸೇನೆ ಸಜ್ಜಾಗಿದೆ. ಅಲ್ಲಿನ ಗಡಿ ಪ್ರದೇಶದ ಉದ್ದಕ್ಕೂ ಇದೀಗ ಬೋಫೋರ್ಸ್ ಫಿರಂಗಿ ನಿಯೋಜಿಸಿದೆ.
ಚೀನಾ ಮಣಿಸಲು ಭಾರತ ಸರ್ವ ರೀತಿಯಲ್ಲೂ ಸನ್ನದ್ಧ ಅರುಣಾಚಲ ಪ್ರದೇಶ ಗಡಿಗೆ ಹೊಂದಿಕೊಂಡಿರುವ ಗಡಿ ರೇಖೆಯಲ್ಲಿ ಚೀನಾ ಯೋಧರ ಚಟುವಟಿಕೆ ಹೆಚ್ಚಾಗಿರುವ ಬೆನ್ನಲ್ಲೇ ಭಾರತ ಈ ನಿರ್ಧಾರ ಕೈಗೊಂಡಿದೆ. ಬೋಫೋರ್ಸ್ ಫಿರಂಗಿ ನಿಯೋಜನೆ ಮಾಡಿ ಹೆಚ್ಚಿನ ಕಣ್ಗಾವಲು ಇಟ್ಟಿದೆ.
ಕಳೆದ ಕೆಲ ದಿನಗಳ ಹಿಂದೆ ಭಾರತದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡುವುದಕ್ಕೂ ಚೀನಾ ವಿರೋಧ ವ್ಯಕ್ತಪಡಿಸಿತ್ತು. ಇದಾದ ಬಳಿಕ ಗಡಿಯಲ್ಲಿ ಭಾರತ ಹೆಚ್ಚಿನ ಯೋಧರ ನಿಯೋಜನೆ ಮಾಡಿದೆ. ಜೊತೆಗೆ ಯಾವುದೇ ರೀತಿಯ ದುಷ್ಕೃತ್ಯ ಎದುರಿಸಲು ತಯಾರಾಗಿದೆ.
ಅಸ್ಸೋಂ ಪೂರ್ವ ವಲಯದ ವಿವಿಧ ಸ್ಥಳಗಳಲ್ಲಿ ಶಕ್ತಿಶಾಲಿ ರಾಕೆಟ್ಗಳನ್ನು ನಿಯೋಜಿಸಲಾಗಿದೆ. ಪಿನಾಕ ರಾಕೆಟ್ ಕೇವಲ 44 ಸೆಕೆಂಡ್ಗಳಲ್ಲಿ 75 ರಾಕೆಟ್ಗಳನ್ನು ಒಂದು ಸಾವಿರ ಮೀಟರ್ ಉದ್ದ ಮತ್ತು 800 ಮೀಟರ್ ವಿಸ್ತಾರದಲ್ಲಿ ಸುಡಬಲ್ಲದು.
ಪಿನಾಕ ಮತ್ತು ಸ್ಮೆರ್ಚ್ ರಾಕೆಟ್ ಇನ್ನೊಂದು ಸ್ಮೆರ್ಚ್ ರಾಕೆಟ್. ಇದು 90 ಕಿಲೋ ಮೀಟರ್ ದೂರವನ್ನು ಗುರಿಯಾಗಿಸುವ ಸಾಮರ್ಥ್ಯ ಹೊಂದಿದೆ. ಸ್ಮೆರ್ಚ್ ರಾಕೆಟ್ ಅನ್ನು 40 ಸೆಕೆಂಡುಗಳಲ್ಲಿ ಒಮ್ಮೆಲೆ 44 ರಾಕೆಟ್ ಉಡಾಯಿಸಲು ವಿನ್ಯಾಸಗೊಳಿಸಲಾಗಿದೆ. ಸ್ಮೆರ್ಚ್, 1,200 ಚರ ಮೀಟರ್ ಪ್ರದೇಶವನ್ನು ನಾಶಪಡಿಸುತ್ತದೆ. ಈ ರಾಕೆಟ್ಅನ್ನು ಭಾರತವು ರಷ್ಯಾದಿಂದ ಆಮದು ಮಾಡಿಕೊಂಡಿದೆ. ಸದ್ಯ ಸೇನೆಯಲ್ಲಿ 3 ಸ್ಮೆರ್ಚ್ ರೆಜಿಮೆಂಟ್ಗಳಿವೆ.
ಗಡಿಯಲ್ಲಿ ಬೀಡು ಬಿಟ್ಟಿರು ಪಿನಾಕ ಮತ್ತು ಸ್ಮೆರ್ಚ್ ರಾಕೆಟ್ ಎರಡೂ ರಾಕೆಟ್ಗಳನ್ನು ಎತ್ತರದ ಪ್ರದೇಶದಲ್ಲಿರಿಸಿದರೆ, ಹೆಚ್ಚಿನ ಎತ್ತರದಲ್ಲಿ ಹಾರಿಸಬಹುದು ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ. ಒಟ್ಟಿನಲ್ಲಿ ಭಾರತೀಯ ಸೇನೆ ಚೀನಾದ ಯಾವುದೇ ದಾಳಿಯನ್ನು ಎದುರಿಸಲು ಸರ್ವ ರೀತಿಯಲ್ಲೂ ಸನ್ನದ್ಧವಾಗಿದೆ.