ಕರ್ನಾಟಕ

karnataka

ETV Bharat / bharat

ಬೈಡನ್‌ ಆಡಳಿತಕ್ಕೆ ಬೆಳಕು ಚೆಲ್ಲಲ್ಲಿದ್ದಾರೆ ಭಾರತೀಯ- ಅಮೆರಿಕನ್ನರು!! - ಕಮಲಾ ದೇವಿ ಹ್ಯಾರಿಸ್, ವಿವೇಕ್ ಮೂರ್ತಿ, ಗೌತಮ್ ರಾಘವನ್, ಮಾಲಾ ಅಡಿಗಾ, ವಿನಯ್ ರೆಡ್ಡಿ, ಭಾರತ್ ರಾಮಮೂರ್ತಿ, ನೀರಾ ಟಂಡೆನ್, ಸೆಲೀನ್ ಗೌಂಡರ್, ಅತುಲ್ ಗವಾಂಡೆ

ಯುಎಸ್ ಅಧ್ಯಕ್ಷ ಜೋ ಬೈಡನ್ ಅವರು ಅಧೀಕೃತವಾಗಿ ಇಂದು ಶ್ವೇತಭವನದಲ್ಲಿ ತಮ್ಮ ಸ್ಥಾನ ಅಲಂಕರಿಸಲಿದ್ದಾರೆ. ಈ ವೇಳೆ ತಮ್ಮ ತಂಡದಲ್ಲಿ ಬಿಡನ್ ಹಲವಾರು ಪ್ರತಿಭಾವಂತ, ಅನುಭವಿ ಮತ್ತು ಸಮಾನ ಮನಸ್ಸಿನ ಭಾರತೀಯ ಮೂಲದ ಅಮೆರಿಕನ್ನರನ್ನು ಸೇರಿಸಿಕೊಂಡಿದ್ದಾರೆ..

Fwd: Indian American in Biden's Crew
ಬಿಡೆನ್​ ಆಡಳಿತಕ್ಕೆ ಬೆಳಕು ಚೆಲ್ಲಲ್ಲಿದ್ದಾರೆ ಭಾರತೀಯ- ಅಮೆರಿಕನ್ನರು

By

Published : Jan 20, 2021, 9:04 AM IST

ಹೈದರಾಬಾದ್: ಕಮಲಾ ದೇವಿ ಹ್ಯಾರಿಸ್, ವಿವೇಕ್ ಮೂರ್ತಿ, ಗೌತಮ್ ರಾಘವನ್, ಮಾಲಾ ಅಡಿಗ, ವಿನಯ್ ರೆಡ್ಡಿ, ಭಾರತ್ ರಾಮಮೂರ್ತಿ, ನೀರಾ ಟಂಡೆನ್, ಸೆಲೀನ್ ಗೌಂಡರ್, ಅತುಲ್ ಗವಾಂಡೆ ಸೇರಿ ಇತರೆ ಭಾರತೀಯ ಅಮೆರೆಕನ್ನರು ಇನ್ಮುಂದೆ ಶ್ವೇತಭವನವನ್ನು ಬೆಳಗಲಿದ್ದಾರೆ. 2020ರ ಅಭಿಯಾನದ ಮೊದಲ ಬಾರಿಗೆ ಎಲ್ಲರ ಗಮನ ಸೆಳೆದಿದ್ದು ಮಾತ್ರ ಕಮಲಾ ಹ್ಯಾರಿಸ್..​

ಈವರೆಗೆ ಸುಮಾರು ಎರಡು ಬೈಡನ್​ ಭಾರತೀಯ-ಅಮೆರಿಕನ್ನರನ್ನು ಬೈಡನ್​ -ಹ್ಯಾರಿಸ್ ಎ-ತಂಡದಲ್ಲಿ ಉನ್ನತ ಸ್ಥಾನಗಳಿಗೆ ನೇಮಕ ಮಾಡಲಾಗಿದೆ. "KAH'-mah-lah? Kah-MAH-lah? ಕಮಲಾ-ಮಾಲಾ-ಮಾಲಾ? ಅದೇನೋ ನನಗೆ ಗೊತ್ತಿಲ್ಲ ಎಂದು ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಿಪಬ್ಲಿಕನ್ ಸೆನೆಟರ್ ಡೇವಿಡ್ ಪರ್ಡ್ಯೂ ಗೇಲಿ ಮಾಡಿದ್ದರು.

ಬಿಡೆನ್​ ಆಡಳಿತಕ್ಕೆ ಬೆಳಕು ಚೆಲ್ಲಲ್ಲಿದ್ದಾರೆ ಭಾರತೀಯ- ಅಮೇರಿಕನ್ನರು!

ಈ ಸಂಬಂಧ ಹಲವಾರು ಟೀಕೆಗಳು ಕೂಡ ವ್ಯಕ್ತವಾಗಿದ್ದವು. ನವೆಂಬರ್ 3, 2020ರ ಚುನಾವಣೆಗೆ ಮೊದಲು ಮ್ಯಾಕಾನ್‌ನಲ್ಲಿ ನಡೆದ ಸೂಪರ್ ಸ್ಪ್ರೆಡರ್ ಮಾದರಿಯ ರ್ಯಾಲಿಯಲ್ಲಿ ಇದನ್ನು ಹೇಳಿದ್ದರಿಂದ ಎಲ್ಲರೂ ನಕ್ಕು ಅಪಹಾಸ್ಯ ಮಾಡಿದ್ದರು. ಆದರೆ, ಈ ಭಾರತ ಮೂಲದ ನಾರಿ ಶ್ವೇತಭವನದ ಬೆಳಕಾಗಿ ಹೊಮ್ಮಿದ್ದಾರೆ.

ಜನವರಿ 6ರಲ್ಲಿ ಟ್ರಂಪ್ ಬೆಂಬಲಿಗರು ವಾಷಿಂಗ್ಟನ್ ಡಿಸಿಯ ಕ್ಯಾಪಿಟಲ್ ಕಟ್ಟಡದ ಮೇಲೆ ದಾಳಿ ಮಾಡಿದರು. ಆ ವೇಳೆಗೆ ಹ್ಯಾರಿಸ್​ನ ಡೆಮಾಕ್ರಟಿಕ್ ಪಕ್ಷದ ಸಹೋದ್ಯೋಗಿಗಳು ಜಾರ್ಜಿಯಾ ಸೆನೆಟ್ ಎರಡೂ ಸ್ಥಾನಗಳನ್ನು ಗೆದ್ದಿದ್ದರು. ಈ ಹಿನ್ನೆಲೆ ಅಮೆರಿಕದ ಅಧಿಕಾರದ ಸಮತೋಲನವು ರೂಪಾಂತರಗೊಂಡಿತ್ತು.

ಬಿಡೆನ್​ ಆಡಳಿತಕ್ಕೆ ಬೆಳಕು ಚೆಲ್ಲಲ್ಲಿದ್ದಾರೆ ಭಾರತೀಯ- ಅಮೇರಿಕನ್ನರು!

ಹ್ಯಾರಿಸ್ ಮತ್ತು ಜೋ ಬೈಡನ್​ ಅಮೆರಿಕವನ್ನು ಮುನ್ನಡೆಸಲು ಪ್ರಮಾಣ ವಚನ ಸ್ವೀಕರಿಸಿದಾಗ ಜಗತ್ತಿಗೆ ಗೊತ್ತಾಗಿದ್ದು, ಭಾರತೀಯ-ಅಮೆರಿಕ​ನ್ನರು ಔಷಧಿ, ಅರ್ಥಶಾಸ್ತ್ರ, ಡಿಜಿಟಲ್ ಸಂವಹನದಲ್ಲಿ ವ್ಯಾಪಕವಾದ ವಿಷಯ ಪರಿಣತಿಯನ್ನು ಹೊಂದಿದ್ದಾರೆ ಎಂಬುದು. ಗೌತಮ್ ರಾಘವನ್, ವಿವೇಕ್ ಮೂರ್ತಿ, ಮಾಲಾ ಅಡಿಗ, ವಿನಯ್ ರೆಡ್ಡಿ, ಭಾರತ್ ರಾಮಮೂರ್ತಿ, ನೀರಾ ಟಂಡೆನ್, ಸೆಲೀನ್ ಗೌಂಡರ್ ಸೇರಿದಂತೆ ಭಾರತೀಯರ ಹೆಸರೇ ಇಲ್ಲಿ ಸಿಂಹಪಾಲಿದೆ.

ಹ್ಯಾರಿಸ್​ ಅವರು ಸೆನೆಟ್​ಗೆ ತಮ್ಮ ಹೆಸರಿನ ಬಗ್ಗೆ ಪರಿಚಯ ಮಾಡಿಕೊಡಲು ಸಾಕಷ್ಟು ಸಮಯ ತೆಗೆದುಕೊಂಡಿದ್ದಾರೆ. ಕಮಲ ಎಂದರೆ ಏನು ಎಂದು ಸೆನೆಟ್​ಗೆ ತಿಳಿಸಿದ್ದಾರೆ. ಭಾರತೀಯ ಸಂಸ್ಕೃತಿಯಲ್ಲಿ ಕಮಲ ಮಹತ್ವದ ಸಂಕೇತವಾಗಿದೆ. ಕಮಲವು ನೀರಿನೊಳಗೆ ಬೆಳೆಯುತ್ತದೆ, ಅದರ ಹೂವು ನೀರಿನ ಮೇಲ್ಮೈಗಿಂತ ಮೇಲಕ್ಕೆ ಇರುತ್ತದೆ. ಅದರ ಬೇರುಗಳು ನದಿಯ ತಳದಲ್ಲಿ ದೃಢವಾಗಿ ಇರುತ್ತವೆ ಎಂದು ವಿವರಿಸಿದ್ದಾರೆ.

ಬಿಡೆನ್​ ಆಡಳಿತಕ್ಕೆ ಬೆಳಕು ಚೆಲ್ಲಲ್ಲಿದ್ದಾರೆ ಭಾರತೀಯ- ಅಮೇರಿಕನ್ನರು!

ಈ ಬಗ್ಗೆ ಅವರು ಬರೆದುಕೊಂಡಿದ್ದಾರೆ. ದೇವತೆಗಳನ್ನು ಪೂಜಿಸುವ ಸಂಸ್ಕೃತಿಯು ಶಕ್ತಿಯುತ ಮಹಿಳೆಯರನ್ನು ಸೃಷ್ಟಿಮಾಡುತ್ತದೆ ಎಂದು 2004ರಲ್ಲಿ ಲಾಸ್ ಏಂಜಲೀಸ್ ಟೈಮ್ಸ್​ಗೆ ಹ್ಯಾರಿಸ್ 40 ವರ್ಷದವರಾಗಿದ್ದಾಗ ವಿವರಿಸಿದ್ದರು. ಭಾರತೀಯ ಹಿಂದೂ ಸಂಸ್ಕೃತಿಯಲ್ಲಿ ಸಂಪತ್ತು, ಸಮೃದ್ಧಿ ಮತ್ತು ಅದೃಷ್ಟವನ್ನು ನೀಡುವ ಲಕ್ಷ್ಮಿ ದೇವಿಯ 108 ಹೆಸರುಗಳಲ್ಲಿ ಕಮಲಾ ಕೂಡ ಒಂದು ಎಂದಿದ್ದಾರೆ.

ಬಿಡೆನ್​ ಆಡಳಿತಕ್ಕೆ ಬೆಳಕು ಚೆಲ್ಲಲ್ಲಿದ್ದಾರೆ ಭಾರತೀಯ- ಅಮೇರಿಕನ್ನರು!

ರಾಜಕೀಯ ವಿಜ್ಞಾನ ಪ್ರಾಧ್ಯಾಪಕ ಮತ್ತು ಎಎಪಿಐ ದತ್ತಾಂಶ ಸಂಸ್ಥಾಪಕ ಕಾರ್ತಿಕ್ ರಾಮಕೃಷ್ಣನ್ ಅವರು ಮಾಧ್ಯಮವೊಂದರ ಇತ್ತೀಚಿನ ಚರ್ಚೆಯಲ್ಲಿ ಕಮಲಾ ಹ್ಯಾರಿಸ್ ಬಗ್ಗೆ ಮಾತನಾಡಿದ್ದರು. ಅವರು ಭಾರತೀಯ-ಅಮೆರಿಕನ್ ಅಥವಾ ದಕ್ಷಿಣ ಏಷ್ಯಾದ ಅಮೆರಿಕನ್ ಅನುಭವದ ಬಗ್ಗೆ ಮಾತನಾಡಲು ಪ್ರಯತ್ನಿಸಲಿಲ್ಲ. ಬದಲಾಗಿ ತನ್ನ ತಾಯಿಯೊಂದಿಗಿನ ಸಂಬಂಧದ ಬಗ್ಗೆ ಮತ್ತು ನಮ್ಮ ಪೂರ್ವಜರು, ಭಾರತದ ಸಂಬಂಧಿಕರ ಬಗ್ಗೆ ಮಾತನಾಡಿದರು. ವಾಸ್ತವವಾಗಿ, ನಿರ್ಗಮಿತ ಟ್ರಂಪ್ ಅವರ ಕುಟುಂಬ ಕೂಡ ವಲಸೆ ಬಂದಿರುವವರೇ ಆಗಿದ್ದಾರೆ. ಅವರ ಅಜ್ಜ ಫ್ರೆಡ್ರಿಕ್ ಡ್ರಂಪ್ಫ್ 16 ವರ್ಷ ವಯಸ್ಸಿಗೆ ಇಲ್ಲಿಗೆ ಬಂದಿದ್ದರು.

ABOUT THE AUTHOR

...view details