ಬಿಂಡ್(ಮಧ್ಯಪ್ರದೇಶ): ಭಾರತೀಯ ವಾಯುಪಡೆಯ (IAF) ವಿಮಾನವೊಂದು ತರಬೇತಿಯ ವೇಳೆ ಪತನವಾಗಿದೆ. ವಿಮಾನದ ಪೈಲಟ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ದುರ್ಘಟನೆ ಬಿಂಡ್ನಲ್ಲಿ ನಡೆದಿದೆ.
ಭಾರತೀಯ ವಾಯುಪಡೆ ವಿಮಾನ ಪತನ; ಪೈಲಟ್ ಪ್ರಾಣಾಪಾಯದಿಂದ ಪಾರು - ವಿಮಾನ ಪತನ,
ಭಾರತೀಯ ವಾಯುಪಡೆಯ ತರಬೇತಿ ವಿಮಾನ ಮಧ್ಯಪ್ರದೇಶದ ಬಿಂಡ್ ಎಂಬಲ್ಲಿ ಪತನವಾಗಿದೆ.
ಭಾರತೀಯ ವಾಯುಪಡೆ ವಿಮಾನ ಪತನ
ಪೈಲಟ್ ಅಭಿಲಾಷ್ ಗ್ವಾಲಿಯಾರ್ ಏರ್ಬೇಸ್ನಿಂದ ಫೈಟರ್ ವಿಮಾನ ಮಿರಾಜ್ 2000ನಲ್ಲಿ ತರಬೇತಿ ಪಡೆಯುತ್ತಿದ್ದರು. ಈ ವೇಳೆ ತಾಂತ್ರಿಕ ದೋಷ ಉಂಟಾಗಿದ್ದು, ವಿಮಾನವು ಪೈಲಟ್ ನಿಯಂತ್ರಣ ಕಳೆದುಕೊಂಡಿದೆ.
ಈ ದುರಂತದಲ್ಲಿ ಪೈಲಟ್ ಅಭಿಲಾಷ್ಗೆ ಸಣ್ಣಪುಟ್ಟ ಗಾಯಗಳಾಗಿದೆ. ವಿಮಾನ ನೆಲಕ್ಕಪ್ಪಳಿಸಿದ್ದರಿಂದ ಸಂಪೂರ್ಣ ಸುಟ್ಟು ಕರಕಲಾಗಿದೆ.
Last Updated : Oct 21, 2021, 11:45 AM IST
TAGGED:
ವಿಮಾನ ಪತನ,