ಹೈದರಾಬಾದ್: ದೇಶದಲ್ಲಿ ಭದ್ರತಾ ಸವಾಲುಗಳು ವೇಗವಾಗಿ ವಿಕಸನಗೊಳ್ಳುತ್ತಿದ್ದು, ಇದರ ಜೊತೆಗೆ ನೆರೆಹೊರೆಯ ರಾಷ್ಟ್ರಗಳ ಜೊತೆಗೆ ರಾಜಕೀಯ ಮತ್ತು ಭೌಗೋಳಿಕ ಅನಿಶ್ಚಿತತೆ ಇರುವ ಕಾರಣದಿಂದಾಗಿ ಆದಷ್ಟು ಬೇಗ ಭಾರತೀಯ ವಾಯುಪಡೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ತರಲಾಗುತ್ತಿದೆ ಎಂದು ಐಎಎಫ್ ಮುಖ್ಯಸ್ಥ ಆರ್ಕೆಎಸ್ ಭದೌರಿಯಾ ಸ್ಪಷ್ಟನೆ ನೀಡಿದ್ದಾರೆ.
ಹೈದರಾಬಾದ್ನ ವಾಯುಪಡೆಯ ಅಕಾಡೆಮಿಯಲ್ಲಿ ಸಂಯೋಜಿತ ಪದವಿ ಪರೇಡ್ (ಸಿಜಿಪಿ) ಉದ್ದೇಶಿಸಿ ಮಾತನಾಡಿದ ಭದೌರಿಯಾ, ವಾಯುಪಡೆ ಒಂದು ಮಹತ್ವದ ಪರಿವರ್ತನೆಗೆ ಒಳಗಾಗುತ್ತಿದೆ. ನಮ್ಮ ಕಾರ್ಯಾಚರಣೆಯ ಪ್ರತಿಯೊಂದು ಅಂಶಗಳಲ್ಲೂ ಅತ್ಯುನ್ನತ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗುತ್ತಿದೆ ಎಂದಿದ್ದಾರೆ.