ಕರ್ನಾಟಕ

karnataka

ETV Bharat / bharat

ಸುಭಾಷ್ ಚಂದ್ರ ಬೋಸ್ ಬದುಕಿದ್ದರೆ ಭಾರತ ವಿಭಜನೆಯಾಗುತ್ತಿರಲಿಲ್ಲ: ಅಜಿತ್ ದೋವಲ್ - Netaji Subhas Chandra Bose

ಸುಭಾಷ್ ಚಂದ್ರ ಬೋಸ್ ಅವರ ಬಗ್ಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕೆಲವು ಘಟನೆಗಳನ್ನು ಮೆಲುಕು ಹಾಕಿದ್ದಾರೆ.

"India would not have been partitioned if Subhas Bose was alive": NSA Doval
"India would not have been partitioned if Subhas Bose was alive": NSA Doval

By

Published : Jun 17, 2023, 7:38 PM IST

ನವದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಏನಾದರೂ ಬದುಕಿದ್ದರೆ ಭಾರತ ವಿಭಜನೆಯಾಗುತ್ತಿರಲಿಲ್ಲ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಶನಿವಾರ ಹೇಳಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಕೆಲವು ಹಳೆಯ ಘಟನಾವಳಿ ಕುರಿತು ಅವರು ಮಾತನಾಡಿದರು.

ಸುಭಾಸ್ ಚಂದ್ರ ಬೋಸ್​ಗೆ ಸುಭಾಸ್ ಚಂದ್ರ ಬೋಸ್​ ಅವರೇ ಸಾಟಿ. ಅವರನ್ನು ಬಿಟ್ಟು ಕೆಲವರು ಮಾತ್ರ ಅವರಿಗೆ ಸರಿಸಮಾನರಾಗಿದ್ದರು ಎಂದು ಹೇಳಬಹುದು. ಇಲ್ಲಿ ಯಾರು ಒಳ್ಳೆಯವರು, ಯಾರು ಕೆಟ್ಟವರು ಎಂದರ್ಥವಲ್ಲ. ಭಾರತ ಇತಿಹಾಸ ಹಾಗೂ ಪ್ರಪಂಚದ ಇತಿಹಾಸದಲ್ಲಿ ಪ್ರವಾಹದ ವಿರುದ್ಧ ಈಜುವ ಧೈರ್ಯವನ್ನು ಹೊಂದಿದ್ದ ವ್ಯಕ್ತಿಗಳು ಬಹಳ ಕಡಿಮೆ. ಆದರೆ, ನೇತಾಜಿ ತಮ್ಮ ದಿಟ್ಟತನಕ್ಕೆ ಹೆಸರುವಾಸಿಯಾಗಿದ್ದರು. ಬ್ರಿಟಿಷ್ ಸಾಮ್ರಾಜ್ಯದ ಪ್ರವಾಹದ ವಿರುದ್ಧ ಅವರ ಹೋರಾಟ ಸುಲಭ ಆಗಿರಲಿಲ್ಲ ಎಂದು ಕೆಲವು ಘಟನೆಗಳನ್ನು ದೋವಲ್​ ಮೆಲುಕು ಹಾಕಿದರು.

ಸ್ವತಃ ಪಾಕಿಸ್ತಾನದ ಸಂಸ್ಥಾಪಕ ಮುಹಮ್ಮದ್ ಅಲಿ ಜಿನ್ನಾ ಅವರು ಸುಭಾಷ್ ಚಂದ್ರ ಬೋಸ್ ಬಗ್ಗೆ ಅತೀವ ಪ್ರೇಮ ಹೊಂದಿದ್ದರು. ನಾನು ಒಬ್ಬ ನಾಯಕನನ್ನು ಮಾತ್ರ ಒಪ್ಪಿಕೊಳ್ಳಬಲ್ಲೆ. ಅದು, ಸುಭಾಷ್ ಚಂದ್ರ ಬೋಸ್ ಮಾತ್ರ ಎಂದು ಜಿನ್ನಾ ಅಂದು ನೇತಾಜಿ ಅವರ ಸಾಹಸವನ್ನು ಕೊಂಡಾಡಿದ್ದರು. ನೇತಾಜಿ ಅವರ ನಾಯಕತ್ವ ಮತ್ತು ಆಲೋಚನೆಗಳೇ ಹಾಗಿದ್ದವು ಎಂದರು.

ನಾನು ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತೇನೆ. ಆದರೆ, ಸ್ವಾತಂತ್ರ್ಯಕ್ಕಾಗಿ ಯಾವತ್ತೂ ಇನ್ನೊಬ್ಬರ ಬಳಿ ಭಿಕ್ಷೆ ಬೇಡುವುದಿಲ್ಲ. 'ಸ್ವಾತಂತ್ರ್ಯ ನನ್ನ ಜನ್ಮಸಿದ್ಧ ಹಕ್ಕು ಮತ್ತು ನಾನು ಅದನ್ನು ಪಡೆದೇ ತೀರುತ್ತೇನೆ' ಎಂಬ ಆಲೋಚನೆ ಅವರ ಮನಸ್ಸಿನಲ್ಲಿ ಅಂದೇ ಮೂಡಿತ್ತು. ಅಲ್ಲದೇ ಸಂಪೂರ್ಣ ಸ್ವಾತಂತ್ರ್ಯಕ್ಕಿಂತ ಕಡಿಮೆ ಯಾವುದಕ್ಕೂ ನಾನು ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದು ಕೂಡ ನೇತಾಜಿ ಹೇಳುತ್ತಿದ್ದರು. ಅವರು ಬದುಕಿದ್ದರೆ ಭಾರತ ವಿಭಜನೆಯಾಗುತ್ತಿರಲಿಲ್ಲ. ನೇತಾಜಿ ಭಾರತದ ಭವಿಷ್ಯವನ್ನು ಅಂದೇ ತಮ್ಮ ಮನಸ್ಸಿನಲ್ಲಿ ಕಟ್ಟಿಕೊಂಡಿದ್ದರು. ಅವರು ಈ ದೇಶವನ್ನು ರಾಜಕೀಯ ಪರತಂತ್ರದಿಂದ ಮುಕ್ತಗೊಳಿಸಲು ಬಯಸಿದ್ದಲ್ಲದೆ, ಜನರ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಮನಸ್ಥಿತಿಯನ್ನು ಬದಲಾಯಿಸಬೇಕಾಗಿದೆ ಎಂದು ಹೇಳಿದ್ದರು. ಜನರು ಆಕಾಶದಲ್ಲಿನ ಸ್ವತಂತ್ರ ಪಕ್ಷಿಗಳಂತೆ ಭಾವಿಸಬೇಕು ಎನ್ನುತ್ತಿದ್ದರು. ಹೋರಾಟ ಮತ್ತು ತಮ್ಮ ದಿಟ್ಟತನದಿಂದ ಸುಭಾಸ್ ಬೋಸ್ ಅವರು ಇತರ ನಾಯಕರಿಗಿಂತ ಭಿನ್ನವಾಗಿದ್ದರು. ಮಹಾತ್ಮ ಗಾಂಧಿಜೀಗೆ ಸವಾಲು ಹಾಕುವಷ್ಟು ಧೈರ್ಯಶಾಲಿಯಾಗಿದ್ದರು. ಹಾಗಾಗಿ ಅವರ ಅಭಿಮಾನಿಗಳಲ್ಲಿ ಮಹಾತ್ಮ ಗಾಂಧೀಜಿ ಕೂಡ ಒಬ್ಬರಾಗಿದ್ದರು ಎಂದು ನೇತಾಜಿ ಅವರ ಹೋರಾಟದ ಹಾದಿಯನ್ನು ದೋವಲ್ ಸ್ಮರಿಸಿದರು.

ಅವರ ಮರಣ ಎಲ್ಲಿ ಮತ್ತು ಹೇಗಾಯ್ತು ಅನ್ನೋದರ ಬಗ್ಗೆ ನನಗೆ ಗೊತ್ತಿಲ್ಲ. ಈಗಲೂ ಅವರು ಸೃಷ್ಟಿಸಿದ ರಾಷ್ಟ್ರೀಯತೆಯ ಕಲ್ಪನೆಗಳಿಗೆ ನಾವು ಹೆದರುತ್ತಿದ್ದೇವೆ. ಅಂತಹ ದೇಶಪ್ರೇಮಿಯ ಇತಿಹಾಸವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಪುನರುಜ್ಜೀವನಗೊಳಿಸಲು ಉತ್ಸುಕರಾಗಿರುವುದು ನನಗೆ ತುಂಬಾ ಸಂತೋಷವಾಗಿದೆ ಎಂದು ಅಜಿತ್‌ ದೋವಲ್‌ ಹೇಳಿದ್ದಾರೆ.

ಇದನ್ನೂ ಓದಿ: ನಿಮ್ಮ ನಾಯಕನ ಬಗ್ಗೆ ತಿಳಿಯಿರಿ: ಯುವಪಡೆಯೊಂದಿಗೆ ಪ್ರಧಾನಿ ಮೋದಿ ಸಂವಾದ

ABOUT THE AUTHOR

...view details