ಕರ್ನಾಟಕ

karnataka

ETV Bharat / bharat

ಭಾರತ - ಪಾಕ್​​ ನಡುವೆ ಮೂರನೇ ವ್ಯಕ್ತಿ ಮಧ್ಯಸ್ಥಿಕೆ ಭಾರತ ಸ್ವೀಕರಿಸುವುದಿಲ್ಲ: ಪಾರ್ಥಸಾರಥಿ!

ಭಾರತ - ಪಾಕ್​ ನಡುವೆ ಯಾವುದೇ ಕಾರಣಕ್ಕೂ ಮೂರನೇ ವ್ಯಕ್ತಿ ಮಧ್ಯಸ್ಥಿಕೆಗೆ ಭಾರತ ತಯಾರಿಲ್ಲ ಎಂದು ರಾಯಭಾರಿ ಪಾರ್ಥಸಾರಥಿ ತಿಳಿಸಿದ್ದಾರೆ.

indo-pak
indo-pak

By

Published : Apr 19, 2021, 10:27 PM IST

ನವದೆಹಲಿ:ಭಾರತ - ಪಾಕ್​ ನಡುವಿನ ಗಡಿ ಬಿಕ್ಕಟ್ಟು ವಿಚಾರವಾಗಿ ಮೂರನೇ ವ್ಯಕ್ತಿ ಮಧ್ಯಸ್ಥಿಕೆ ಭಾರತ ಸ್ವೀಕರಿಸುವುದಿಲ್ಲ ಎಂದು ರಾಯಭಾರಿ ಪಾರ್ಥಸಾರಥಿ ಸ್ಪಷ್ಟಪಡಿಸಿದ್ದಾರೆ. ಪಾಕ್​ ವಿದೇಶಾಂಗ ಸಚಿವರು ಯುಎಇಯಲ್ಲಿ ಮೂರನೇ ವ್ಯಕ್ತಿ ಭಾರತ-ಪಾಕ್​ ನಡುವಿನ ಬಿಕ್ಕಟ್ಟು ವಿಚಾರದಲ್ಲಿ ಭಾಗಿಯಾಗಬಹುದು ಎಂಬ ಹೇಳಿಕೆಗೆ ಈ ರೀತಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಭಾರತ-ಪಾಕಿಸ್ತಾನದ ನಡುವಿನ ಬಿಕ್ಕಟ್ಟು ಬಗೆಹರಿಸಲು ಯುಎಇ ಸೇರಿದಂತೆ ಯಾವುದೇ ದೇಶ ಸಹ ಸಕಾರಾತ್ಮಕ ಪಾತ್ರ ನಿರ್ವಹಿಸಬಹುದು ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಷಾ ಮಹಮ್ಮದ್​ ಖುರೇಷಿ ಹೇಳಿದ್ದರು. ಇದರ ಬೆನ್ನಲ್ಲೇ ಇದೀಗ ಭಾರತ ತಿರುಗೇಟು ನೀಡಿದೆ.

ಗಡಿ ಬಿಕ್ಕಟ್ಟು ವಿಚಾರದಲ್ಲಿ ಮೂರನೇ ವ್ಯಕ್ತಿ ಮಧ್ಯಸ್ಥಿಕೆ ವಹಿಸಲು ಭಾರತ ಬಯಸುವುದಿಲ್ಲ ಎಂದು ಜಿ ಪಾರ್ಥಸಾರಥಿ ಈಟಿವಿ ಭಾರತ್​ಗೆ ತಿಳಿಸಿದ್ದು, ಇದರಲ್ಲಿ ಭಾರತದ ನಿಲುವು ತುಂಬಾ ಸ್ಪಷ್ಟವಾಗಿದ್ದು, ಈ ಸಮಸ್ಯೆ ದ್ವಿಪಕ್ಷೀಯವಾಗಿ ಅಥವಾ ಪರಸ್ಪರ ಒಪ್ಪಿದ ತತ್ವಗಳ ಮೂಲಕ ಇತ್ಯರ್ಥಪಡಿಸಬೇಕು ಎಂದಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಯಾವುದೇ ಸಮಯದಲ್ಲಿ ಸಂವಾದ ನಿರೀಕ್ಷಿಸಬಹುದೇ ಎಂದು ಪ್ರಶ್ನೆ ಮಾಡಲಾಗಿದ್ದು, ಇಂಡೋ - ಪಾಕ್​ ಸಂಭಾಷಣೆ ಬ್ಯಾಕ್ ಚಾನೆಲ್​ ಮತ್ತು ರಹಸ್ಯವಾಗಿರಬೇಕು. ಇಲ್ಲದಿದ್ದರೆ ಅದು ಅರ್ಥಹೀನವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಪಾಕ್​ ವಿದೇಶಾಂಗ ಸಚಿವ ಖುರೇಷಿ ಸದ್ಯ ಮೂರು ದಿನಗಳ ಯುಎಇ ಪ್ರವಾಸದಲ್ಲಿದ್ದು, ನಾನು ದ್ವಿಪಕ್ಷೀಯ ಭೇಟಿಯಾಗಿ ಇಲ್ಲಿದ್ದೇನೆ. ಭಾರತ-ಪಾಕಿಸ್ತಾನದ ಬಗ್ಗೆ ಮಾತನಾಡಲು ಅಲ್ಲ ಎಂದಿದ್ದಾರೆ. ಆದರೆ, ಉಭಯ ದೇಶಗಳ ನಡುವಿನ ಬಿಕ್ಕಟ್ಟಿನ ವಿಚಾರದಲ್ಲಿ ಮೂರನೇ ದೇಶ ಭಾಗಿಯಾಗುವುದಾದರೆ ಅದಕ್ಕೆ ನಮ್ಮ ಸ್ವಾಗತವಿದೆ ಎಂದಿದ್ದಾರೆ. ಇನ್ನು ವಿದೇಶಾಂಗ ಸಚಿವ ಎಸ್​. ಜೈಶಂಕರ್​ ಕೂಡ ಭಾನುವಾರ ಅಬುಧಾಬಿಗೆ ಆಗಮಿಸಿದ್ದು, ಕೆಲವೊಂದು ದ್ವಿಪಕ್ಷೀಯ ವಿಚಾರವಾಗಿ ಮಾತುಕತೆ ನಡೆಸಿದರು. ಪುಲ್ವಾಮಾ ದಾಳಿ ಹಾಗೂ ಆರ್ಟಿಕಲ್​ 370 ರದ್ಧುಗೊಳಿಸಿದ ಬಳಿಕ ಭಾರತ-ಪಾಕ್​ ನಡುವಿನ ಸಂಬಂಧ ಮತ್ತಷ್ಟು ಉದ್ವಿಗ್ನಗೊಂಡಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿವೆ.

ABOUT THE AUTHOR

...view details