ಕರ್ನಾಟಕ

karnataka

ETV Bharat / bharat

ಸಾಂಪ್ರದಾಯಿಕ ಚಿಕಿತ್ಸೆಗಾಗಿ ಭಾರತಕ್ಕೆ ಬರುವವರಿಗಾಗಿ 'ಆಯುಷ್​ ವೀಸಾ' ಕೆಟಗರಿ ಆರಂಭ: ಮೋದಿ - Global AYUSH Summit 2022

ಭಾರತದಲ್ಲಿನ ಆಯುಷ್​ ಉತ್ಪನ್ನಗಳ ಗುಣಮಟ್ಟ ದೃಢೀಕರಣಕ್ಕಾಗಿ 'ಆಯುಷ್ ಮಾರ್ಕ್' ಆರಂಭಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

Global AYUSH Summit 2022
Global AYUSH Summit 2022

By

Published : Apr 20, 2022, 4:00 PM IST

ನವದೆಹಲಿ: ಗುಜರಾತ್​ನ ಗಾಂಧಿನಗರದ ಮಹಾತ್ಮ ಮಂದಿರದಲ್ಲಿ ಜಾಗತಿಕ ಆಯುಷ್​ ಹೂಡಿಕೆ ಶೃಂಗಸಭೆ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಸಾಂಪ್ರದಾಯಿಕ ಚಿಕಿತ್ಸೆಗಾಗಿ ವಿದೇಶಗಳಿಂದ ಭಾರತಕ್ಕೆ ಬರುವವರಿಗಾಗಿ 'ಆಯುಷ್​ ವೀಸಾ' ಕೆಟಗರಿ ಆರಂಭ ಮಾಡಲಾಗುವುದು ಎಂದು ತಿಳಿಸಿದರು. ಭಾರತದ ಸಾಂಪ್ರದಾಯಿಕ ಚಿಕಿತ್ಸೆ ವಿದೇಶಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತಿದ್ದು, ಅದಕ್ಕಾಗಿ ಪ್ರತಿವರ್ಷ ಸಾವಿರಾರು ಜನರು ಭಾರತಕ್ಕೆ ಬಂದು ಅದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ ಎಂದರು.

ಜಾಗತಿಕ ಆಯುಷ್​ ಹೂಡಿಕೆ ಶೃಂಗಸಭೆ ಉದ್ಘಾಟಿಸಿದ ಮೋದಿ

ಇದನ್ನೂ ಓದಿ:ದೆಹಲಿಯಲ್ಲಿ ದಿಢೀರ್​ ಹೆಚ್ಚಾಯ್ತು ಕೋವಿಡ್, ಮಾಸ್ಕ್ ಕಡ್ಡಾಯ; ತಪ್ಪಿದರೆ ₹500 ದಂಡ

ಭಾರತದ ಆಯುಷ್​ ಉತ್ಪನ್ನಗಳ ಗುಣಮಟ್ಟ ದೃಢೀಕರಣಕ್ಕಾಗಿ ಆದಷ್ಟು ಬೇಗ ಆಯುಷ್ ಮಾರ್ಕ್​ ಆರಂಭ ಮಾಡಲಾಗುವುದು ಎಂದಿರುವ ಪ್ರಧಾನಿ, ಸಾಂಪ್ರದಾಯಿಕ ಔಷಧ ಉತ್ಪನ್ನಗಳನ್ನು ಗುರುತಿಸಿ ಅವುಗಳನ್ನು ದೃಢೀಕರಿಸಲಾಗುವುದು ಎಂದು ತಿಳಿಸಿದರು. ಸಾಂಪ್ರದಾಯಿಕಲ ಔಷಧೋದ್ಯಮ ಉತ್ತೇಜಿಸಲು ಆಯುಷ್ ಮಾರ್ಕ್ ಪ್ರಾರಂಭಿಸಲು ನಿರ್ಧರಿಸಲಾಗಿದ್ದು ಆಯುರ್ವೇದ, ಯೋಗ, ನ್ಯಾಚುರೋಪತಿ, ಯುನಾನಿ ಮತ್ತು ಹೋಮಿಯೋಪತಿ ಭಾರತದಲ್ಲಿ ಹೆಚ್ಚು ಜನಮನ್ನಣೆ ಗಳಿಸಿದೆ. ಇದೇ ಕಾರಣಕ್ಕಾಗಿ ಪರ್ಯಾಯ ಸಚಿವಾಲಯ ಹೊಂದಿದ್ದೇವೆ ಎಂದರು.

ಸಾಂಪ್ರದಾಯಿಕ ಔಷಧೀಯ ವ್ಯವಸ್ಥೆ ಕೇರಳದಲ್ಲಿ ಪ್ರವಾಸೋದ್ಯಮ ಹೆಚ್ಚಿಸಲು ಸಹಕಾರಿಯಾಗಿದ್ದು, ಭಾರತದ ಮೂಲೆಮೂಲೆಯಲ್ಲೂ ಆಯುರ್ವೇದ ಲಭ್ಯವಾಗ್ತಿದೆ. 2014ರ ಮೊದಲು ಭಾರತದಲ್ಲಿ ಆಯುಷ್ ವಲಯದಿಂದ ನಾವು 3 ಬಿಲಿಯನ್ ಡಾಲರ್ ಗಳಿಕೆ ಮಾಡ್ತಿದ್ದೆವು. ಆದರೆ, ಇದೀಗ ಅದು 18 ಬಿಲಿಯನ್ ಡಾಲರ್ ದಾಟಿದೆ ಎಂದು ತಿಳಿಸಿದರು. ಕೇಂದ್ರ ಆಯುಷ್​ ಸಚಿವಾಲಯ ಸಾಂಪ್ರದಾಯಿಕ ಔಷಧ ಕ್ಷೇತ್ರದಲ್ಲಿ ಸ್ಟಾರ್ಟ್​​ ಅಪ್​ ಸಂಸ್ಕೃತಿ ಪ್ರೋತ್ಸಾಹಿಸಲು ಕ್ರಮ ಕೈಗೊಂಡಿದೆ ಎಂದರು.

ABOUT THE AUTHOR

...view details