ನವದೆಹಲಿ: ಭಾರತ-ಚೀನಾದ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯಲ್ಲಿ ಪರಿಸ್ಥಿತಿ ದಿನದಿಂದ ದಿನಕ್ಕೆ ಉದ್ವಿಗ್ನಗೊಳ್ಳುತ್ತಿದೆ. ಎರಡೂ ರಾಷ್ಟ್ರಗಳ ಗಡಿಯಲ್ಲಿ ಸೇನಾ ಪಡೆಗಳು ಶಸ್ತ್ರಸಜ್ಜಿತವಾಗಿ ಅಣಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಮಾತನಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್, "ವಾಸ್ತವಿಕ ಗಡಿರೇಖೆಯನ್ನು ಬದಲಾಯಿಸುವ ಚೀನಾದ ಪ್ರಯತ್ನವನ್ನು ಭಾರತ ಒಪ್ಪುವುದಿಲ್ಲ" ಎಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಪ್ರಸ್ತುತ ಇರುವ ಗಡಿರೇಖೆ ಬದಲಾಯಿಸುವ ಯಾವುದೇ ಏಕಪಕ್ಷೀಯ ಪ್ರಯತ್ನವನ್ನು ಭಾರತ ಅನುಮತಿಸುವುದಿಲ್ಲ. ಪೂರ್ವ ಲಡಾಖ್‌ನಲ್ಲಿ ನಮ್ಮ ಸೈನಿಕರು ಚೀನಿಯರ ದಾಳಿಯನ್ನು ಎದುರಿಸುತ್ತಿದ್ದಾರೆ. ಗಡಿ ವಿಚಾರವಾಗಿ ನೆರೆ ದೇಶ ಈ ಹಿಂದೆಯೂ ಕೂಡ ಆಕ್ರಮಣಕಾರಿ ನಿಲುವು ಪ್ರದರ್ಶಿಸಿತ್ತು ಎಂದರು.