ಮುಂಬೈ(ಮಹಾರಾಷ್ಟ್ರ): ಹೊಸ ವಿಶ್ವ ಕ್ರಮಾಂಕ ರೂಪುಗೊಳ್ಳುತ್ತಿದೆ. ಬದಲಾಗುತ್ತಿರುವ ಈ ವಿಶ್ವ ಕ್ರಮಾಂಕದಲ್ಲಿ ಇಡೀ ಜಗತ್ತು ಹೊಸ ಆಕಾಂಕ್ಷೆಗಳೊಂದಿಗೆ ಭಾರತದತ್ತ ನೋಡುತ್ತಿದೆ. ಜಗತ್ತಿಗೆ ಮಾದರಿಯಾಗಲು, ಇಂದಿನ ಭಾರತದ ಮುಂದಿನ 25 ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಕೆಲಸ ಮಾಡುತ್ತಿದೆ. ಆ ನಿಟ್ಟಿನಲ್ಲಿ ನಾವು ಪ್ರತಿಯೊಂದು ಕ್ಷೇತ್ರದಲ್ಲೂ ಕ್ರಾಂತಿಕಾರಿ ಬದಲಾವಣೆಗಳನ್ನು ತರುತ್ತಿದ್ದೇವೆ. ಹಾಗಾಗಿ ಭಾರತ ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಸ್ಥಾನ ಪಡೆಯುವ ದಿನ ದೂರವಿಲ್ಲ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
ಇಂದು ಗ್ಲೋಬಲ್ ಮ್ಯಾರಿಟೈಮ್ ಇಂಡಿಯಾ ಶೃಂಗಸಭೆ (GMIS) 2023ರ ಮೂರನೇ ಆವೃತ್ತಿಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. "ಭಾರತದ ಕಡಲ ಸಾಮರ್ಥ್ಯಗಳು ಬಲಿಷ್ಠವಾಗಿರುವಾಗಲೆಲ್ಲಾ ದೇಶ ಹಾಗೂ ಜಗತ್ತು ಅದರ ಪ್ರಯೋಜನವನ್ನು ಪಡೆದುಕೊಂಡಿದೆ ಎಂಬುದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ. ಕಳೆದ 9- 10 ವರ್ಷಗಳಿಂದ ನಮ್ಮ ಸರ್ಕಾರ ಕಡಲ ವಲಯವನ್ನು ಬಲಪಡಿಸಲು ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ" ಎಂದು ಅವರು ಹೇಳಿದರು.
ಭಾರತದ ಬೆಳವಣಿಗೆಯ ಪ್ರಯಾಣದ ಭಾಗವಾಗಲು ಜಾಗತಿಕ ಹೂಡಿಕೆದಾರರನ್ನು ಆಹ್ವಾನಿಸಿದ ಪ್ರಧಾನಿ ಮೋದಿ, ಜಿ 20 ಶೃಂಗಸಭೆಯಲ್ಲಿ ಭಾರತವು ಕಾರಿಡಾರ್ ಕುರಿತು ಒಮ್ಮತ ರೂಪಿಸಲು ಮುಂದಾಳತ್ವ ವಹಿಸಿದೆ. ಕೆಲವೇ ದೇಶಗಳು ಅಭಿವೃದ್ಧಿ, ಜನಸಂಖ್ಯಾಶಾಸ್ತ್ರ, ಪ್ರಜಾಪ್ರಭುತ್ವ ಹಾಗೂ ಬೇಡಿಕೆಗಳಲ್ಲಿ ಅದೃಷ್ಟ ಮಾಡಿವೆ ಎಂದು ಹೇಳಿದರು.
"ಭಾರತವು ವಿಶಾಲವಾದ ಕರಾವಳಿ, ಬಲಿಷ್ಠ ಪರಿಸರ ವ್ಯವಸ್ಥೆ, ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ. ನಾವು ವಿಶ್ವದ ಅತಿದೊಡ್ಡ ರಿವರ್ ಕ್ರೂಸ್ ಸೇವೆ ಪ್ರಾರಂಭಿಸಿದ್ದೇವೆ. ನಾವು ಮುಂಬೈನಲ್ಲಿ ಆಧುನಿಕ ಕ್ರೂಸ್ ಟರ್ಮಿನಲ್ ಅನ್ನು ಸಹ ಪ್ರಾರಂಭಿಸುತ್ತಿದ್ದೇವೆ. ಕಳೆದ ಒಂದು ದಶಕದಲ್ಲಿ ಬಂದರು ಸಂಪರ್ಕ ಹೆಚ್ಚಿದೆ. ಸಾಗರಮಾಲಾ ತೆಗೆಯುವ ಮೂಲಕ ಮೂಲಸೌಕರ್ಯಗಳನ್ನು ಹೆಚ್ಚಿಸಲಾಯಿತು. ಕಂಟೈನರ್‌ಗಳ ಮೂಲಕ ಸರಕು ನಿರ್ವಹಣೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಕಳೆದ 9 ವರ್ಷಗಳಲ್ಲಿ ಲಾಜಿಸ್ಟಿಕ್ಸ್ ಕಾರ್ಯಕ್ಷಮತೆ ಸೂಚ್ಯಂಕವು ಸಾಕಷ್ಟು ಸುಧಾರಿಸಿದೆ. ಐಎನ್‌ಎಸ್ ವಿಕ್ರಾಂತ್ ನಮ್ಮ ಶಕ್ತಿಯ ಪ್ರತೀಕ" ಎಂದು ಮಾಹಿತಿ ನೀಡಿದರು.