ಚೆನ್ನೈ:ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಅತಿಥೇಯ ಟೀಂ ಇಂಡಿಯಾ 317 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ.
ನಾಲ್ಕನೇ ದಿನದಾಟದಲ್ಲಿ ಸ್ಪಿನ್ನರ್‌ಗಳಾದ ರವಿಚಂದ್ರನ್ ಅಶ್ವಿನ್ ಮತ್ತು ಆಕ್ಸರ್ ಪಟೇಲ್ ಅವರ ಬೌಲಿಂಗ್ ದಾಳಿಗೆ ತತ್ತರಿಸಿದ ಆಂಗ್ಲಙಡೆ ತನ್ನೆಲ್ಲೆ ವಿಕೆಟ್ ಕಳೆದುಕೊಂಡ ಒಂದು ದಿನ ಬಾಕಿ ಇರುವಾಗಲೇ ಸೋಲೊಪ್ಪಿಕೊಂಡಿದೆ. ಭಾರತ ತಂಡ ನೀಡಿದ್ದ 482 ರನ್ಗಳ ಬೃಹತ್ ಮೊತ್ತ ಬೆನ್ನು ಹತ್ತಿದ ಇಂಗ್ಲೆಂಡ್ ಮೋಯಿನ್ ಅಲಿ ಅವರ ಆಕರ್ಷಕ ಆಟದ ಹೊರೆತಾಗಿಯೂ ಸೋಲನುಭವಿಸಿದೆ.
ಮೊದಲ ಟೆಸ್ಟ್ನಲ್ಲಿ ಹೀನಾಯವಾಗಿ ಸೋತ್ತಿದ್ದ ಟೀಂ ಇಂಡಿಯಾ ಎರಡನೇ ಟೆಸ್ಟ್ನಲ್ಲಿ ದಾಖಲೆ (317) ರನ್ಗಳ ಅಂತರದಿಂದ ಸೇಡು ತೀರಿಸಿಕೊಂಡಿದೆ. ಈ ಮೂಲಕ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ 1-1 ಸಮಬಲ ಸಾಧಿಸಿದೆ. ಭಾರತ ನೀಡಿದ್ದ 482 ರನ್ ಬೃಹತ್ ಮೊತ್ತ ಬೆನ್ನತ್ತಿದ ಆಂಗ್ಲರು ಕೇವಲ 164 ರನ್ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿದೆ.
ಇಂಗ್ಲೆಂಡ್ ಪರ ಮೋಯಿನ್ ಅಲಿ ಕೊನೆಯ ಗಳಿಗೆಯಲ್ಲಿ ಕೇವಲ 18 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 3 ಬೌಂಡರಿ ಸಹಿತ 43 ರನ್ ಗಳಿಸಿದರೆ, ನಾಯಕ ರೂಟ್ 33 ರನ್ ಗಳಿಸಿದರು. ಡೇನಿಯಲ್ ಲಾರೆನ್ಸ್ 26 ಮತ್ತು ರೋರಿ ಬರ್ನ್ಸ್ 25 ರನ್ ಗಳಿಸಿದರು.
ಭಾರತದ ಪರ ಮೊದಲ ಪಂದ್ಯವಾಡುತ್ತಿರುವ ಅಕ್ಸರ್ ಪಟೇಲ್ ಐದು ವಿಕೆಟ್ ಪಡೆದರೆ, ರವಿಚಂದ್ರನ್ ಅಶ್ವಿನ್ ಮೂರು ವಿಕೆಟ್ ಮತ್ತು ಕುಲದೀಪ್ ಯಾದವ್ 2 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.