ಕರ್ನಾಟಕ

karnataka

ETV Bharat / bharat

ಇದೇ ಪ್ರಥಮ ಬಾರಿ ವಿಶ್ವಸಂಸ್ಥೆಯಲ್ಲಿ ರಷ್ಯಾ ವಿರುದ್ಧ ಮತ ಚಲಾಯಿಸಿದ ಭಾರತ

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನಡೆದ ಕಾರ್ಯವಿಧಾನದ ಮತದಾನದಲ್ಲಿ ರಷ್ಯಾ ವಿರುದ್ಧ ಭಾರತದ ಮತದಾನ. ಉಕ್ರೇನ್‌ ಕುರಿತಾದ ಭದ್ರತಾ ಮಂಡಳಿ ಸಭೆಯಲ್ಲಿ ರಷ್ಯಾ ವಿರುದ್ಧ ಪ್ರಥಮ ಬಾರಿ ಭಾರತ ಮತದಾನ.

India Votes Against Russia
India Votes Against Russia

By

Published : Aug 25, 2022, 5:47 PM IST

Updated : Aug 25, 2022, 6:53 PM IST

ವಾಷಿಂಗ್ಟನ್: ಉಕ್ರೇನ್ ಮೇಲೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನಡೆದ ಕಾರ್ಯವಿಧಾನದ ಮತದಾನದ (procedural vote) ಸಂದರ್ಭದಲ್ಲಿ ಭಾರತವು ಬುಧವಾರ ಮೊದಲ ಬಾರಿಗೆ ರಷ್ಯಾ ವಿರುದ್ಧ ಮತ ಚಲಾಯಿಸಿದೆ. ಸಭೆಯಲ್ಲಿ ಟೆಲಿ ಕಾನ್ಫರೆನ್ಸಿಂಗ್ ಮೂಲಕ ಪಾಲ್ಗೊಂಡು ಮಾತನಾಡುವಂತೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರಿಗೆ 15 ಸದಸ್ಯರನ್ನೊಳಗೊಂಡ ಪ್ರಬಲ ಭದ್ರತಾ ಮಂಡಳಿಯು ಆಹ್ವಾನ ನೀಡಿತ್ತು.

ಫೆಬ್ರವರಿಯಲ್ಲಿ ರಷ್ಯಾದ ಸೇನಾ ಕಾರ್ಯಾಚರಣೆ ಆರಂಭವಾದ ನಂತರ ಉಕ್ರೇನ್ ವಿಷಯದಲ್ಲಿ ರಷ್ಯಾ ವಿರುದ್ಧ ಭಾರತ ಮತ ಚಲಾಯಿಸಿದ್ದು ಇದೇ ಮೊದಲು. ಇಲ್ಲಿಯವರೆಗೆ, ಉಕ್ರೇನ್‌ ಕುರಿತಾದ ಭದ್ರತಾ ಮಂಡಳಿ ಸಭೆಗಳಿಗೆ ಭಾರತ ಗೈರಾಗುತ್ತಿತ್ತು. ಭಾರತದ ಈ ಕ್ರಮದಿಂದ ಅಮೆರಿಕ ನೇತೃತ್ವದ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ತುಂಬಾ ಕಿರಿಕಿರಿಯನ್ನುಂಟು ಮಾಡುತ್ತಿತ್ತು.

ಯುದ್ಧದ ಆರಂಭದ ನಂತರ ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾದ ಮೇಲೆ ಪ್ರಮುಖ ಆರ್ಥಿಕ ಮತ್ತು ಇತರ ನಿರ್ಬಂಧಗಳನ್ನು ವಿಧಿಸಿವೆ. ಆದಾಗ್ಯೂ ಉಕ್ರೇನ್ ಮೇಲೆ ಆಕ್ರಮಣ ಮಾಡಿದ ರಷ್ಯಾವನ್ನು ಭಾರತ ಟೀಕಿಸಿಲ್ಲ. ರಾಜತಾಂತ್ರಿಕತೆ ಮತ್ತು ಸಂವಾದದ ಹಾದಿಗೆ ಮರಳಲು ರಷ್ಯಾ ಮತ್ತು ಉಕ್ರೇನ್​​ಗಳಿಗೆ ನವದೆಹಲಿ ಪದೇ ಪದೇ ಕರೆ ನೀಡಿದೆ ಮತ್ತು ಉಭಯ ದೇಶಗಳ ನಡುವಿನ ಸಂಘರ್ಷವನ್ನು ಕೊನೆಗೊಳಿಸುವ ಎಲ್ಲಾ ರಾಜತಾಂತ್ರಿಕ ಪ್ರಯತ್ನಗಳಿಗೆ ತನ್ನ ಬೆಂಬಲವನ್ನು ವ್ಯಕ್ತಪಡಿಸಿದೆ. ಭಾರತವು ಪ್ರಸ್ತುತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಎರಡು ವರ್ಷಗಳ ಅವಧಿಗೆ ಶಾಶ್ವತವಲ್ಲದ ಸದಸ್ಯ ರಾಷ್ಟ್ರವಾಗಿದೆ. ಇದು ಡಿಸೆಂಬರ್‌ನಲ್ಲಿ ಕೊನೆಗೊಳ್ಳುತ್ತದೆ.

ಬುಧವಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಉಕ್ರೇನ್‌ನ ಸ್ವಾತಂತ್ರ್ಯದ 31 ನೇ ವಾರ್ಷಿಕೋತ್ಸವದಂದು, ಯುದ್ಧ ಆರಂಭವಾಗಿ ಆರು ತಿಂಗಳಲ್ಲಿ ಆಗಿರುವ ಪರಿಣಾಮಗಳ ಬಗ್ಗೆ ಪರಿಶೀಲನೆ ನಡೆಸಲು ಸಭೆ ನಡೆಸಿತು.

ಸಭೆ ಪ್ರಾರಂಭವಾಗುತ್ತಿದ್ದಂತೆ ವಿಶ್ವಸಂಸ್ಥೆಯಲ್ಲಿ ರಷ್ಯಾದ ರಾಯಭಾರಿ ವಾಸಿಲಿ ಎ. ನೆಬೆಂಜಿಯಾ ಅವರು ವೀಡಿಯೊ ಟೆಲಿ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಉಕ್ರೇನಿಯನ್ ಅಧ್ಯಕ್ಷರ ಭಾಗವಹಿಸುವಿಕೆಗೆ ಸಂಬಂಧಿಸಿದಂತೆ ಕಾರ್ಯವಿಧಾನದ ಮತದಾನ ನಡೆಸುವಂತೆ ಕೋರಿದರು. ರಷ್ಯಾ ಮತ್ತು ಅಲ್ಬೇನಿಯಾಗಳ ಕೋರಿಕೆಯ ಮೇರೆಗೆ ನಡೆದ ಮತದಾನದಲ್ಲಿ, ಝೆಲೆನ್ಸ್ಕಿ ಅವರು ಟೆಲಿ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಭಾಗವಹಿಸಬೇಕೆಂದು ಪರವಾಗಿ 13 ಮತ ಮತ್ತು ವಿರುದ್ಧ ಒಂದು ಮತ ಬಂದವು. ಹೀಗಾಗಿ ಝೆಲೆನ್ಸ್ಕಿ ಅವರಿಗೆ ಸಭೆಯಲ್ಲಿ ಭಾಗವಹಿಸಲು ಆಹ್ವಾನ ನೀಡಲಾಯಿತು. ಈ ಮತದಾನದಲ್ಲಿ ರಷ್ಯಾ ವಿರುದ್ಧವಾಗಿ ಮತ ಚಲಾಯಿಸಿದರೆ, ಚೀನಾ ಗೈರಾಗಿತ್ತು.

Last Updated : Aug 25, 2022, 6:53 PM IST

ABOUT THE AUTHOR

...view details