ನವದೆಹಲಿ:ಚೀನಾ ಸವಾಲನ್ನು ದೃಷ್ಟಿಯಲ್ಲಿಟ್ಟುಕೊಂಡು, ಕ್ವಾಡ್‌ನ ಮೊದಲ ಶೃಂಗಸಭೆ - ಭಾರತ, ಯುಎಸ್, ಜಪಾನ್ ಮತ್ತು ಆಸ್ಟ್ರೇಲಿಯಾ ನಡುವೆ ಶುಕ್ರವಾರ ವಾಸ್ತವಿಕವಾಗಿ ನಡೆಯಲಿದೆ ಎಂದು ವಿದೇಶಾಂಗ ಸಚಿವಾಲಯ ಮಂಗಳವಾರ ಪ್ರಕಟಿಸಿದೆ.
ಪ್ರಧಾನಿ ನರೇಂದ್ರ ಮೋದಿ, ಯುಎಸ್ ಅಧ್ಯಕ್ಷ ಜೋ ಬೈಡನ್, ಜಪಾನ್ ಪ್ರಧಾನಿ ಯೋಶಿಹಿಡೆ ಸುಗಾ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮೊರಿಸನ್ ನಡೆಸಲಿರುವ ಸಭೆಯಲ್ಲಿ ಕೋವಿಡ್ ಲಸಿಕೆ ಸರಬರಾಜಿನಿಂದ ಹಿಡಿದು ಹವಾಮಾನ ಬದಲಾವಣೆಯವರೆಗೆ ಎಲ್ಲ ವಿಷಯಗಳ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಲಾಗಿದೆ.