ಕರ್ನಾಟಕ

karnataka

ETV Bharat / bharat

ರಸ್ತೆ ಅಪಘಾತಗಳಲ್ಲಿ ಸಾವಿಗೀಡಾಗುವವರ ಸಂಖ್ಯೆಯಲ್ಲಿ ಭಾರತ ವಿಶ್ವದಲ್ಲೇ ನಂಬರ್​ ಒನ್ - Geneva, India ranks number 3 as per number of accidents.

ಜಿನೀವಾದ ಇಂಟರ್​​ನ್ಯಾಷನಲ್ ರೋಡ್ ಫೆಡರೇಶನ್ ಹೊರ ತಂದಿರುವ ವಿಶ್ವ ರಸ್ತೆ ಅಂಕಿ-ಅಂಶಗಳ ಪ್ರಕಾರ, ರಸ್ತೆ ಅಪಘಾತಗಳಲ್ಲಿ ಸಾವಿಗೀಡಾಗುವವರ ಸಂಖ್ಯೆಯಲ್ಲಿ ಭಾರತ ವಿಶ್ವದಲ್ಲೇ ಅಗ್ರಸ್ಥಾನದಲ್ಲಿದೆ ಎಂದು ತಿಳಿದು ಬಂದಿದೆ..

India tops world in terms of number of persons killed in road accidents
ಸಚಿವ ನಿತಿನ್ ಗಡ್ಕರಿ

By

Published : Apr 6, 2022, 5:39 PM IST

ನವದೆಹಲಿ :ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ರಸ್ತೆ ಅಪಘಾತಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ರಸ್ತೆ ಅಪಘಾತಗಳಲ್ಲಿ ಸಾವಿಗೀಡಾಗುವವರ ಸಂಖ್ಯೆಯಲ್ಲಿ ಭಾರತ ವಿಶ್ವದಲ್ಲೇ ಅಗ್ರಸ್ಥಾನದಲ್ಲಿದೆ ಎಂದು ಅವರು ಹೇಳಿದ್ದಾರೆ. ಜಿನೀವಾದ ಇಂಟರ್​​ನ್ಯಾಷನಲ್ ರೋಡ್ ಫೆಡರೇಶನ್ ಹೊರತಂದಿರುವ ವಿಶ್ವ ರಸ್ತೆ ಅಂಕಿ-ಅಂಶಗಳು (ಡಬ್ಲ್ಯುಆರ್ಎಸ್) 2018ರ ಇತ್ತೀಚಿನ ಸಂಚಿಕೆಯನ್ನು ಆಧರಿಸಿ, ಅಪಘಾತದಲ್ಲಿ ಸತ್ತವರ ಸಂಖ್ಯೆಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ.

ಇನ್ನೂ ಗಾಯಗೊಂಡ ವ್ಯಕ್ತಿಗಳ ಸಂಖ್ಯೆಯಲ್ಲಿ 3 ನೇ ಸ್ಥಾನದಲ್ಲಿದೆ. ಇದಲ್ಲದೆ, 18 ರಿಂದ 45 ವರ್ಷದವರ ಸಾವಿನ ಶೇಕಡಾವಾರು ಪ್ರಮಾಣವು 2020 ರಲ್ಲಿ 69.80ರಷ್ಟಿದೆ ಎಂದು ಸಂಸತ್ತಿಗೆ ನಿತಿನ್​ ಗಡ್ಕರಿ ತಿಳಿಸಿದರು.

ಇದನ್ನೂ ಓದಿ:ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಸಿಬಿಐ ವಶಕ್ಕೆ

ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯ ಮೂರು ವಿಭಾಗಗಳು ಅಂದರೆ, ದೆಹಲಿ-ದೌಸಾ-ಲಾಲ್ಸೋಟ್ (ಜೈಪುರ) (214 ಕಿಮೀ), ವಡೋದರಾ- ಅಂಕೆಲೇಶ್ವರ (100 ಕಿ.ಮೀ) ಮತ್ತು ಕೋಟಾ-ರತ್ಲಾಮ್ ಜಬುವಾ (245 ಕಿ.ಮೀ) ಮಾರ್ಚ್ 23ರೊಳಗೆ ಪೂರ್ಣಗೊಳ್ಳಲು ಯೋಜಿಸಲಾಗಿದೆ ಎಂದು ಅವರು ಹೇಳಿದರು.

For All Latest Updates

TAGGED:

ABOUT THE AUTHOR

...view details