ಕರ್ನಾಟಕ

karnataka

ETV Bharat / bharat

ಹೊಸದಾಗಿ 25 ಸಾವಿರ ಮಂದಿಗೆ ಕೋವಿಡ್‌: ದೇಶದಲ್ಲಿ ಸೋಂಕು ಪ್ರಮಾಣ ಇಳಿಮುಖ - ಭಾರತದಲ್ಲಿ ಕೋವಿಡ್​ ಕೇಸ್​

ಕಳೆದ 24 ಗಂಟೆಗಳಲ್ಲಿ ಕೊರೊನಾ ಸೋಂಕಿನಿಂದ 36,830 ರೋಗಿಗಳು ಚೇತರಿಸಿಕೊಂಡಿದ್ದು, ಚೇತರಿಕೆ ಪ್ರಮಾಣ ಏರಿಕೆಯಾಗಿದೆ.

COVID-19 cases
ಕೊರೊನಾ

By

Published : Aug 17, 2021, 11:03 AM IST

ನವದೆಹಲಿ:ಕಳೆದೊಂದು ದಿನದಲ್ಲಿ ಭಾರತದಲ್ಲಿ 25,166 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿವೆ. ಈ ಅಂಕಿಅಂಶದ ಪ್ರಕಾರ, ಹಿಂದಿನ ದಿನಕ್ಕಿಂತ ಶೇ.23.5ರಷ್ಟು ಕೇಸ್​ಗಳು ಕಡಿಮೆಯಾಗಿದೆ. ಇಲ್ಲಿಯವರೆಗೆ ದೇಶದಲ್ಲಿ ಒಟ್ಟು ಸೋಂಕಿಗೆ ತುತ್ತಾದವರ ಸಂಖ್ಯೆ 3,22,50,679ಕ್ಕೆ ತಲುಪಿದೆ.

ಇದೇ ಅವಧಿಯಲ್ಲಿ 437 ಮಂದಿ ಸಾವನ್ನಪ್ಪಿದ್ದು, ಇಲ್ಲಿಯವರೆಗಿನ ಸಾವಿನ ಸಂಖ್ಯೆ 4,32,079ಕ್ಕೆ ಏರಿಕೆಯಾಗಿದೆ. ದೇಶದಲ್ಲೀಗ 3,69,846 ಸಕ್ರಿಯ ಕೋವಿಡ್‌ ಪ್ರಕರಣಗಳಿವೆ. ದೇಶಾದ್ಯಂತ ಇಲ್ಲಿವರೆಗೆ 3,14,48,754 ಮಂದಿ ಚೇತರಿಸಿಕೊಂಡಿದ್ದಾರೆ. ಕಳೆದೊಂದು ದಿನದಲ್ಲಿ 36,830 ರೋಗಿಗಳು ಚೇತರಿಸಿಕೊಂಡಿದ್ದಾರೆ.

ದೇಶದಲ್ಲಿ 54.58 ಡೋಸ್ ಲಸಿಕೆ ವಿತರಣೆ

ಸೋಮವಾರದ ಮಾಹಿತಿ ಪ್ರಕಾರ, ದೇಶದಲ್ಲಿ ಇದುವರೆಗೆ 54.58 ಕೋಟಿ ಕೊರೊನಾ ಲಸಿಕೆಯ ಡೋಸ್‌ ನೀಡಲಾಗಿದೆ.

ಡೆಲ್ಟಾ ರೂಪಾಂತರ:

ಕೋವಿಡ್‌ನ ಡೆಲ್ಟಾ ಪ್ಲಸ್ ರೂಪಾಂತರದ ಪ್ರಕರಣಗಳ ಸಂಖ್ಯೆ 76ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ABOUT THE AUTHOR

...view details