ಕರ್ನಾಟಕ

karnataka

ETV Bharat / bharat

ಎರಡು ವರ್ಷದ ನಂತರ ಇಂದಿನಿಂದ ಅಂತರರಾಷ್ಟ್ರೀಯ ವಿಮಾನಯಾನ ಪುನಾರಂಭ - ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ

ಇಂದಿನಿಂದ ನಿಯಮಿತ ಅಂತರರಾಷ್ಟ್ರೀಯ ವಿಮಾನಯಾನ ಪುನರಾರಂಭಿಸಲು ಭಾರತ ಸಜ್ಜಾಗಿದ್ದು ಮಾರಿಷಸ್, ಮಲೇಷಿಯಾ, ಥಾಯ್ಲೆಂಡ್‌, ಟರ್ಕಿ, ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ಹಾಗು ಇರಾಕ್ ಸೇರಿದಂತೆ 40 ದೇಶಗಳ ಒಟ್ಟು 60 ವಿದೇಶಿ ಸಂಸ್ಥೆಗಳಿಗೆ ವಿಮಾನಯಾನ ಸೇವೆ ನಿರ್ವಹಿಸಲು ಅನುಮೋದನೆ ನೀಡಲಾಗಿದೆ.

international-flights-from-today
ಅಂತಾರಾಷ್ಟ್ರೀಯ ವಿಮಾನಯಾನ

By

Published : Mar 27, 2022, 11:19 AM IST

Updated : Mar 27, 2022, 11:26 AM IST

ನವದೆಹಲಿ: ಕೋವಿಡ್​-19 ಸಾಂಕ್ರಾಮಿಕ ರೋಗ ಬಾಧಿಸಿದ ಸುಮಾರು ಎರಡು ವರ್ಷಗಳ ನಂತರ ಭಾರತವು ಇಂದಿನಿಂದ ನಿಯಮಿತ ಅಂತರರಾಷ್ಟ್ರೀಯ ವಿಮಾನಯಾನವನ್ನು ಪುನಾರಂಭಿಸಲು ಸಿದ್ಧವಾಗಿದೆ. ಈ ಕುರಿತು ಕೇಂದ್ರ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಆದೇಶ ಹೊರಡಿಸಿದೆ. ವಿದೇಶಿ ವಿಮಾನಗಳು ಈಗಾಗಲೇ ತಯಾರಾಗಿರುವ ತಮ್ಮ ಅಂತರರಾಷ್ಟ್ರೀಯ ವೇಳಾಪಟ್ಟಿಗೆ ಅನುಮತಿ ನೀಡುವಂತೆ ಅರ್ಜಿ ಸಲ್ಲಿಸಿವೆ.

ಮಾರಿಷಸ್, ಮಲೇಷಿಯಾ, ಥಾಯ್ಲೆಂಡ್‌, ಟರ್ಕಿ, ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ಹಾಗು ಇರಾಕ್ ಸೇರಿದಂತೆ 40 ದೇಶಗಳ ಒಟ್ಟು 60 ವಿದೇಶಿ ಸಂಸ್ಥೆಗಳಿಗೆ ವಿಮಾನಯಾನ ಸೇವೆ ನಿರ್ವಹಿಸಲು ಅನುಮೋದನೆ ನೀಡಲಾಗಿದೆ. ಇಂಡಿಯಾ ಸಲಾಮ್ ಏರ್, ಏರ್ ಅರೇಬಿಯಾ ಅಬುಧಾಬಿ, ಕ್ವಾಂಟಾಸ್ ಮತ್ತು ಅಮೆರಿಕನ್ ಏರ್‌ಲೈನ್‌ ಮುಂತಾದ ಹೊಸ ಏರ್​ಲೈನ್​ಗಳು ಭಾರತದೊಂದಿಗೆ ವಿಮಾನಯಾನ ಸೇವೆ ಪ್ರಾರಂಭಿಸುತ್ತವೆ. ಕೋವಿಡ್​ ಕಾರಣದಿಂದಾಗಿ 2020ರ ಮಾರ್ಚ್​ನಿಂದ ಭಾರತ ಅಂತರರಾಷ್ಟ್ರೀಯ ವಿಮಾನಯಾನವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿತ್ತು.

Last Updated : Mar 27, 2022, 11:26 AM IST

ABOUT THE AUTHOR

...view details